ಲೋಪಾಮುದ್ರೆಯ ಸಮಾಗಮ ಪೂರ್ವಭಾವಿಯಾಗಿ ಧನಾರ್ಜನೆ ಮಾಡಲು ಸಂಚಾರ ಕೈಗೊಂಡು ತನ್ನ ಬಳಿ ಬಂದಿದ್ದ ಅಗಸ್ತ್ಯ ಮಹರ್ಷಿಗಳನ್ನು ಶ್ರುತರ್ವಾಣ ಮಹಾರಾಜನು ಅಘ್ರ್ಯ ಪಾದ್ಯಾದಿಗಳಿಂದ ಸತ್ಕರಿಸುತ್ತಾನೆ, ಸುಖಾಸನದಲ್ಲಿ ಕುಳ್ಳಿರಿಸುತ್ತಾನೆ. ಅಂಜಲಿ ಬದ್ಧನಾಗಿ ಅವರ ಮುಂದೆ ನಿಂತು ಅವರ ಆಗಮನದ ಕಾರಣವನ್ನು ವಿನಮ್ರಪೂರ್ವಕವಾಗಿ ಕೇಳುತ್ತಾನೆ. ಆಗ ಅಗಸ್ತ್ಯರು ತಾವು ಬಂದ ಉದ್ದೇಶವನ್ನು ತಿಳಿಸುತ್ತಾರೆ:-“ರಾಜ, ಶ್ರುತರ್ವಾಣ, ನಾನು ನನ್ನ ವೈಯಕ್ತಿಕ ಕಾರಣಕ್ಕಾಗಿ ನಿನ್ನಲ್ಲಿ ಧನಾಕಾಂಕ್ಷಿಯಾಗಿ ಬಂದಿದ್ದೇನೆ, ನಿನಗೆ ಕೊಡಲು ಸಾಧ್ಯವಿರುವಷ್ಟು ಐಶ್ವರ್ಯವನ್ನು ನನಗೆ ಕೊಡುವವನಾಗು” ಮತ್ತೆಯೂ ಮುಂದುವರಿದು ಅವರು ಒಂದು ಸ್ಪಷ್ಟ ಸೂಚನೆಯನ್ನೂ ನೀಡುತ್ತಾರೆ.
ಯಥಾಶಕ್ತ ವಿಹಿಂಸ್ಯಾನ್ಯಾನ್ಸಂವಿಭಾಗಂ ಪ್ರಯಚ್ಛ ಮೇ ಆದರೆ, ನನಗೆ ಐಶ್ವರ್ಯವನ್ನು ಕೊಡುವದರಿಂದ ನೀನು ವಿಶೇಷ ತೆರಿಗೆ ಗಳಿಂದಾಗಲೀ, ರಾಜ್ಯಾಭಿವೃದ್ಧಿಯ ಯೋಜನೆಗಳನ್ನು ತಡೆಹಿಡಿಯುವ ದರಿಂದಾಗಲೀ ಪ್ರಜೆಗಳನ್ನು ಹಿಂಸೆ ಮಾಡಬಾರದು. ಅಂದರೆ, ನಿನ್ನ ವರಮಾನದಲ್ಲಿ ವೆಚ್ಚಕ್ಕಿಂತಲೂ ಹೆಚ್ಚಾಗಿ ಆದಾಯ ಉಳಿದಿರುವ ದಾದರೆ ಮಾತ್ರ ಆ ಉಳಿದಿರುವ ಹಣವನ್ನು ನನಗೆ ಕೊಡುವವನಾಗು. ನಿನಗೆ ಖರ್ಚಿಗಿಂತ ಅಧಿಕ ಆದಾಯವಿದ್ದರೆ ಮಾತ್ರ ನಿನ್ನಿಂದ ಹಣ ಪಡೆಯುತ್ತೇನೆಯೇ ಹೊರತು ಹಾಗಿಲ್ಲದಿದ್ದಲ್ಲಿ ನಿನ್ನ ಹಣ ನನಗೆ ಖಂಡಿತ ಬೇಡ ಎಂದು ನ್ಯಾಯಸಮ್ಮತ ನುಡಿಯಾಡುತ್ತಾರೆ.
ಅಗಸ್ತ್ಯರ ಮಾತಿನಿಂದ ರಾಜ ಶ್ರುತರ್ವಾಣ ಆಶ್ಷರ್ಯ ಚಕಿತರಾಗುತ್ತಾನೆ: ಮಹರ್ಷಿಗಳೇ ನೀವು ಕೇಳುವಾಗ ನಾನು ನಿಮಗೆ ಅಗತ್ಯವಾದ ಐಶ್ವರ್ಯವನ್ನು ನೀಡಲು ತಯಾರಿದ್ದೇನೆ. ಅದರೆ, ನೀವು ಧರ್ಮದ ಮಾತಿನಿಂದ ನನ್ನನ್ನು ಕಟ್ಟಿ ಹಾಕಿಬಿಟ್ಟಿರಿ.ನಾನು ನಿಮ್ಮಂತಹ ಮಹಾತ್ಮರೊಂದಿಗೆ ಅನೃತ ನುಡಿಯಾಡಿ ಒಪ್ಪಿಸು ವಂತೆಯೂ ಇಲ್ಲ. ಈಗ ಸಂದಿಗ್ಧತೆಗೆ ಸಿಲುಕಿದಂತಾಗಿದೆ ಎನ್ನುತ್ತಾನೆ. ತನ್ನ ರಾಜ್ಯದ ಆಯ ವ್ಯಯ ಲೆಕ್ಕಾಚಾರವನ್ನು ತರಿಸುತ್ತಾನೆ. ಅಗಸ್ತ್ಯರಿಗೆ ಅದನ್ನು ಒದಗಿಸಿಕೊಟ್ಟು ವಿನಮ್ರ ಪೂರ್ವಕವಾಗಿ ವಿವರಿಸುತ್ತಾನೆ: “ಮಹರ್ಷೇ, ಇದು ನನ್ನ ದೇಶದ ಆಯವ್ಯಯಗಳ ಸ್ಪಷ್ಟ ಲೆಕ್ಕವಾಗಿದೆ. ಇದನ್ನು ತಾವು ಪರಿಶೀಲಿಸಿ ಎಷ್ಟು ಧನವನ್ನು ಬೇಕಾದರೂ ಪಡೆದುಕೊಳ್ಳಬಹುದಾಗಿದೆ. ಅಗಸ್ತ್ಯರು ರಾಜನ ಆದಾಯ-ವೆಚ್ಚಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಾರೆ. ಆಗ ವಾರ್ಷಿಕ ಆಯ- ವ್ಯಯಗಳು ಸರಿಸಮನಾಗಿದ್ದುದು ಕಂಡು ಬಂದಿತು. ಆಗಸ್ತ್ಯರು ಲೋಪಾಮುದ್ರೆಯೊಂದಿಗೆ ಸಮಾಗಮ ವಿಚಾರದಲ್ಲಿಯೂ ಯಾವ ರೀತಿ ದುಡುಕದೆ ನಿಯಂತ್ರಣದೊಂದಿಗೆ ಕಾರ್ಯೋನ್ಮುಖರಾಗಿದ್ದಾರೋ ಅದೇ ರೀತಿ ತಮ್ಮ ವೈಯಕ್ತಿಕ ಸುಖಕ್ಕಾಗಿ ಅವರು ರಾಜನ ಬೊಕ್ಕಸದಿಂದ ಹಣ ಪಡೆಯಲು ಬಯಸಲಿಲ್ಲ. ಮುಂದಿನ
ದಿನಗಳಲ್ಲಿ ಸಾಮಾನ್ಯ ಪ್ರಜೆಗಳಿಗೆ ಕಿಂಚಿತ್ ಪ್ರಮಾಣದಲ್ಲಿಯೂ ರಾಜನ ಬೊಕ್ಕಸದಲ್ಲಿ ಹಣ ಕಡಿಮೆಯಾಗಿ ತೊಂದರೆಯಾಗ ಬಾರದೆಂದು ಮತ್ತೆ ತಮ್ಮ ತ್ಯಾಗಮಯ ಸ್ವಭಾವವನ್ನು ಬಹಿರಂಗಗೊಳಿಸು ತ್ತಾರೆ. ಆರ್ಥಿಕ ವಿಚಾರ ಬಂದಾಗಲೂ ತನ್ನನ್ನು ಮತ್ತೆ ನಿಯಂತ್ರಿಸಿಕೊಂಡು ಸ್ಪಷ್ಟೋಕ್ತಿ ಯಾಡುತ್ತಾರೆ. ರಾಜನು ಎಷ್ಟು ಬೇಕಾದರೂ ತೆಗೆದುಕೊಳ್ಳಿ ಎಂದಾಗಲು ತನ್ನಿಂದ ರಾಜ್ಯಾಡಳಿತಕ್ಕೆ ಸ್ವಲ್ಪವೂ ಚ್ಯುತಿ ಬರ ಬಾರದು ಎಂದು ಬಯಸುತ್ತಾರೆ. ಮನಸ್ಸಿನಲ್ಲಿ ಅವರು ಹೀಗೆ ಚಿಂತಿಸುತ್ತಾರೆ:”
ಈ ರಾಜನ ಆಯ-ವ್ಯಯಗಳು ಸರಿಸಮನಾಗಿವೆ. ಹೀಗಿರುವಾಗ ನಾನೇನಾದರೂ ಇವನ ಆದಾಯದಲ್ಲಿ ಒಂದಂಶವನ್ನು ಪಡೆದುದೇಯಾದರೂ ಆ ಅಂಶವನ್ನು ಸರಿದೂಗಿಸಲು ರಾಜನು ಪ್ರಜೆಗಳಿಗೆ ಅಧಿಕ ತೆರಿಗೆ ಮೂಲಕ ಪೀಡಿಸುವದು ಅನಿವಾರ್ಯ ವಾದೀತು. ಆದುದರಿಂದ ಇವನ ಬೊಕ್ಕಸದ ಹಣವನ್ನು ಪಡೆಯುವದು ಸರ್ವಥಾ ಸರಿಯಲ್ಲ” ಎನ್ನುವ ಅಂತಿಮ ನಿರ್ಧಾರಕ್ಕೇ ಬಂದು ಬಿಡುತ್ತಾರೆ, ರಾಜನು ವಿನಮ್ರಪೂರ್ವಕ ವಾಗಿ ಕೇಳಿಕೊಂಡರೂ ಅದಕ್ಕೆ ಸಮ್ಮತಿಸುವದಿಲ್ಲ. ತಪೋಮಹಿಮರಾದ ಅಗಸ್ತ್ಯರು ನಿಜವಾದ ರಾಜ ನೀತಿಜ್ಞರು ಕೂಡ ಹೌದು ಎಂಬದು ಇದರಿಂದ ಸಾಬೀತಾಗುತ್ತದೆ. ಮಹರ್ಷಿಗಳಾದ ವರು ಸರ್ವ ಹಿತ ಚಿಂತಕರು ಎಂಬದನ್ನು ಪ್ರಾಯೋಗಿಕವಾಗಿ ಪ್ರಕಟಿಸುತ್ತಾರೆ. ರಾಜನೊಂದಿಗೆ ಅವರು ಹೀಗೆ ಮುಕ್ತ ನುಡಿಯಾಡು ತ್ತಾರೆ: ‘‘ಮಹಾರಾಜ, ನಿನ್ನ ವಿನಮ್ರ ನುಡಿ ಕರ್ಣಾನಂದಕರವಾಗಿದೆ. ಹಾಗೆಂದು ಆದಾಯ ಅಧಿಕವಿಲ್ಲದ ನಿನ್ನ ಬೊಕ್ಕಸದಿಂದ ನನಗೆ ನೀಡುವದು ರಾಜಧರ್ಮವೂ ಅಲ್ಲ, ಪ್ರಜಾ ನೀತಿಯೂ ಅಲ್ಲ” ಎಂದು ಸ್ಪಷ್ಟಪಡಿಸುತ್ತಾರೆ. ಬಳಿಕ ರಾಜನೊಂದಿಗೆ “ನೀನು ನನ್ನೊಂದಿಗೆ ಬರುವವನಾಗು, ಬೇರೆ ಕಡೆ ಪ್ರಯತ್ನಿಸೋಣ” ಎಂದು ಸೂಚಿಸಿ ಆತನೊಂದಿಗೆ ಧನಿಕನೆಂದು ಪ್ರಸಿದ್ಧಿ ಹೊಂದಿದ್ದ ಮತ್ತೊಬ್ಬ ರಾಜ ಬ್ರಧ್ನಶ್ನನ ಬಳಿ ತೆರಳುತ್ತಾರೆ. ಆ ರಾಜನೂ ಸಹ ಪ್ರಭಾವೀ ಮಹರ್ಷಿ ಗಳಾದ ಅಗಸ್ತ್ಯರು ತನ್ನ ರಾಜಧಾನಿಗೆ ಬರುತ್ತಿದ್ದಾರೆ ಎಂಬದನ್ನು ತಿಳಿದೊಡನೇ ಹರ್ಷೋನ್ಮತ್ತ ನಾಗುತ್ತಾನೆ. ತನ್ನ ಚಾರರು ಈ ಮಾಹಿತಿ ನೀಡಿ ದೊಡನೆಯೇ ತನ್ನ ಮಂತ್ರಿ ಹಾಗೂ ಪುರೋಹಿತ ರೊಡಗೂಡಿ ಅರಮನೆಯ ಮಹಾದ್ವಾರ ದೆಡೆಗೆ ತೆರಳುತ್ತಾನೆ. ಅಲ್ಲಿಯೇ ಅಗಸ್ತ್ಯರನ್ನು ಎದುರುಗೊಳ್ಳುತ್ತಾನೆ. ಸಕಲ ರಾಜ ಮರ್ಯಾದೆಗಳೊಡನೆ ಅರಮನೆಗೆ ಕರೆತರುತ್ತಾನೆ. ಅಘ್ರ್ಯ ಪಾದ್ಯಾದಿ ಗಳಿಂದ ಯಥಾವಿಧಿಯಾಗಿ ಸತ್ಕರಿಸುತ್ತಾನೆ. ಬಂದ ಅತಿಥಿಗಳು ಸುಖಾಸೀನರಾದ ಬಳಿಕ ಅವರು ಬಂದ ಕಾರಣವನ್ನು ಬ್ರಧ್ನಶ್ವನು ಕೇಳುತ್ತಾನೆ. ಬ್ರಧ್ನಶ್ವನ ಪ್ರಶ್ನೆಗೆ ಉತ್ತರವಾಗಿ ಅಗಸ್ತ್ಯರು ಈ ಹಿಂದೆ ಶ್ರುತರ್ವಾಣ ಮಹಾರಾಜನನ್ನು ಕುರಿತು ಹೇಳಿದಂತೆಯೇ ತಮ್ಮ ಉದ್ದೇಶವನ್ನು ಸವಿವರವಾಗಿ ತಿಳಿಸುತ್ತಾರೆ. ‘‘ಮಹಾರಾಜ, ನಾನು ನಿನ್ನ ಬಳಿಗೆ ಐಶ್ವರ್ಯವನ್ನು ಕೇಳಲು ಬಂದಿರುವೆನು, ನಿನ್ನ ರಾಜ್ಯದ ಯಾವ ಪ್ರಜೆಗೂ ತೊಂದರೆಯಾಗದ ರೀೀತಿಯಲ್ಲಿ ಎಷ್ಟು ಹಣವನ್ನು ನೀನು ಕೊಡಲು ಸಾಧ್ಯವೋ ಅಷ್ಟು ಧನವನ್ನು ನೀನು ಕೊಡಿಸು. ಆದಕ್ಕೂ ಮುನ್ನ ನಿನ್ನ ರಾಜ್ಯದ ಆರ್ಥಿಕ ಸ್ಥಿತಿಯನ್ನು ಖಾತರಿಪಡಿಸುವ ಆಯ-ವ್ಯಯಗಳ ಪಟ್ಟಿಯನ್ನು ತರಿಸು ಎಂದು ಸೂಚಿಸುತ್ತಾರೆ. ತಕ್ಷಣವೇ ಬ್ರಧ್ನಶ್ವನು ತನ್ನ ದೇಶದ ಆಯ- ವ್ಯಯ ಪಟ್ಟಿಯನ್ನು ತರಿಸಿ ಅಗಸ್ತ್ಯರ ಕೈಯಲ್ಲಿಟ್ಟು ಹೇಳುತ್ತಾನೆ.” ಮಹರ್ಷಿಗಳೇ, ಇದು ನನ್ನ ದೇಶದ ಆಯ-ವ್ಯಯ ಪಟ್ಟಿಯಾಗಿರು ತ್ತದೆ. ಇದನ್ನು ತಾವು ಪರಶೀಲಿಸಿ ನನ್ನ ಬೊಕ್ಕಸದಿಂದ ಎಷ್ಟು ಧನವನ್ನಾದರೂ ಪಡೆಯಬಹುದಾಗಿದೆ.”
ಅಗಸ್ತ್ಯರು ಬ್ರಧ್ನಶ್ವನ ದೇಶದ ಆಯ- ವ್ಯಯಗಳನ್ನೂ ಸಹ ಕೂಲಂಕಷವಾಗಿ ಪರಶೀಲಿಸಿದರು. ಆ ದೇಶದ ಆಯ-ವ್ಯಯಗಳೂ ಸಹ ಸರಿಸಮನಾಗಿದ್ದವು. ಖರ್ಚಿಗಿಂತ ಹೆಚ್ಚಿನ ಆದಾಯವಿರಲಿಲ್ಲ. ಆ ರಾಜನ ಬೊಕ್ಕಸದಿಂದಲೂ ಸಹ ತಾನು ಹಣ ಪಡೆಯುವದು ನ್ಯಾಯಸಮ್ಮತವಾಗದು ಎಂದು ಅಗಸ್ತ್ಯರು ನಿರ್ಧರಿಸಿದರು ಎನ್ನುತ್ತ ಲೋಮಶ ಮಹರ್ಷಿಗಳು ಪಾಂಡವರಿಗೆ ಅಗಸ್ತ್ಯ ಲೋಪಾಮುದ್ರೆ ಯರ ಸಮಾಗಮ ಪೂರ್ವ ಬೆಳವಣಿಗೆಯ ಕುರಿತು ಹೀಗೆ ಮುಂದುವರಿಸುತ್ತಾರೆ:- ಅಗಸ್ತ್ಯರು ರಾಜ್ಯದ ಆಯ ವ್ಯಯ ಪಟ್ಟಿ ನೋಡಿದ ಬಳಿಕ ನುಡಿಯುತ್ತಾರೆ: “ರಾಜ ಬ್ರಧ್ನಶ್ವ, ನಿನ್ನ ರಾಜ್ಯದ ಆಯ-ವ್ಯಯ ಪಟ್ಟಿ ಸರಿಸಮವಾಗಿರುವಾಗ ಆ ಬೊಕ್ಕಸ ದಿಂದ ನನಗೆ ಕಿಂಚಿತ್ ಧನ ಸಹಾಯವನ್ನು ನಾನು ಸ್ವೀಕರಿಸಿದರೂ ಕೂಡ ನಿನ್ನ ಪ್ರಜೆಗಳಿಗೆ ಅನ್ಯಾಯವೆಸಗಿದಂತಾಗುತ್ತದೆ. ಬೇರೆ ರಾಜ್ಯಕ್ಕೆ ತೆರಳೋಣ ಎನ್ನುತ್ತ ಶ್ರುತರ್ವಾಣ ಹಾಗೂ ಬ್ರಧ್ನಶ್ರ ಸಹಿತ ಪುರುಕುತ್ಸನ ಮಗನಾದ ತ್ರಸದಸ್ಯುವಿನ ರಾಜ್ಯಕ್ಕೆ ಅಗಸ್ತ್ಯರು ಹೊರಡುತ್ತಾರೆ. ಇಕ್ಷ್ವಾಕುವಂಶದ ರಾಜನಾದ ತ್ರಸದಸ್ಯು ರಾಜನೂ ಸಹ ಅಗಸ್ತ್ಯರು ಇನ್ನಿಬ್ಬರು ರಾಜರೊಡನೆ ತನ್ನ ರಾಜಧಾನಿಯ ಕಡೆಗೆ ಬರುತ್ತಿರುವರೆಂದು ತಿಳಿದುಕೊಳ್ಳುತ್ತಾನೆ. ಮಂತ್ರಿ-ಪುರೋಹಿತ ಪುರಸ್ಸರನಾಗಿ ಮಹರ್ಷಿಗಳನ್ನು ಮತ್ತು ರಾಜರನ್ನು ರಾಜಧಾನಿಯ ಗಡಿಯಲ್ಲಿಯೇ ಆದರ ಪೂರ್ವಕನಾಗಿ ಸ್ವಾಗತಿಸುತ್ತಾನೆ. ಅರಮನೆಗೆ ಕರೆದೊಯ್ದು ಮೂವರನ್ನೂ ಯಥೋಚಿತ ವಾದ ಅಘ್ರ್ಯ- ಪಾದ್ಯಾದಿಗಳಿಂದ ಸತ್ಕರಿಸುತ್ತಾನೆ. ಅಂಜಲಿ ಬದ್ಧನಾಗಿ ನಿಂತು ಮಹರ್ಷಿಗಳ ಆಗಮನಕ್ಕೆ ಕಾರಣವನ್ನು ಕೇಳುತ್ತಾನೆ.
ಜಾನಪದ ಪ್ರಶಸ್ತಿ ವಿಜೇತರು, ಕೊಡಗಿನ ಐತಿಹಾಸಿಕ, ಪೌರಾಣಿಕ ಚರಿತ್ರೆಯ ಪರಿಜ್ಞಾನವುಳ್ಳವರೂ ಆದ ಬೊಟ್ಟೋಳಂಡ ಕಾಶಿ ಅಚ್ಚಯ್ಯ ಅವರು ಕಾವೇರಿ ಕಥನ ಪ್ರಕಟವಾಗುತ್ತಿರುವದಕ್ಕೆ ತಮ್ಮ ಸದಭಿಪ್ರಾಯ, ಪ್ರೋತ್ಸಾಹ ವ್ಯಕ್ತಗೊಳಿಸಿದರು. ಅವರು ನನ್ನೊಂದಿಗೆ ಮಾತನಾಡುತ್ತ ‘ಬ್ರಹ್ಮಗಿರಿ ಬೆಟ್ಟದ ಮಹತ್ವ, ಕವೇರ ಮುನಿಯ ತಪಸ್ಸು, ಕವೇರ ಮುನಿಯಿಂದ ಪುತ್ರಿಯಾಗಿ ಲೋಪಾಮುದ್ರೆಯನ್ನು ಬ್ರಹ್ಮನಿಂದ ಸ್ವೀಕಾರ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅಗಸ್ತ್ಯರ ಮಹತ್ವದ ಕುರಿತೂ ತಿಳಿಸಿದ್ದಾರೆ. ಅವರಿಗೆ ಈ ಮೂಲಕ ಧನ್ಯವಾದಗಳು.
ಅವರು ಹೇಳಿದ ಬಹುತೇಕ ವಿಷಯಗಳು ಸ್ಕಾಂದ ಪುರಾಣದಲ್ಲಿ ವಿವರವಾಗಿದೆ. ಆ ಪುರಾಣದಲ್ಲಿಯೂ ಕಾವೇರಿಯ ಕುರಿತು ಹಲವು ವೈವಿಧ್ಯಮಯ ಕತೆಗಳಿವೆ. ಸ್ಕಾಂದ ಪುರಣಾಂತರ್ಗತ ಚರಿತ್ರೆಯನ್ನೂ ಮುಂದಿನ ಸಂಚಿಕೆಗಳಲ್ಲಿ ಪ್ರಕಟಿಸಲಾಗುತ್ತದೆ. ಈ ಕುರಿತು ಕಾವೇರಿ ಸ್ವೀಕಾರ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅಗಸ್ತ್ಯರ ಮಹತ್ವದ ಕುರಿತೂ ತಿಳಿಸಿದ್ದಾರೆ. ಅವರಿಗೆ ಈ ಮೂಲಕ ಧನ್ಯವಾದಗಳು.
ಅವರು ಹೇಳಿದ ಬಹುತೇಕ ವಿಷಯಗಳು ಸ್ಕಾಂದ ಪುರಾಣದಲ್ಲಿ ವಿವರವಾಗಿದೆ. ಆ ಪುರಾಣದಲ್ಲಿಯೂ ಕಾವೇರಿಯ ಕುರಿತು ಹಲವು ವೈವಿಧ್ಯಮಯ ಕತೆಗಳಿವೆ. ಸ್ಕಾಂದ ಪುರಣಾಂತರ್ಗತ ಚರಿತ್ರೆಯನ್ನೂ ಮುಂದಿನ ಸಂಚಿಕೆಗಳಲ್ಲಿ ಪ್ರಕಟಿಸಲಾಗುತ್ತದೆ. ಈ ಕುರಿತು ಕಾವೇರಿ ಸಂಸ್ಕøತ ಬರಹದ ಸೂಕ್ತಗಳ ಕೊಡುಗೆಯಿದೆ. ಅವರೆಲ್ಲರ ಕೊಡುಗೆಯಿಂದಲೇ ಋಗ್ವೇದ ಸಮಗ್ರವಾಗಿ ರಚಿತಗೊಂಡಿದೆ. ಆದರೆ, ಅದರಲ್ಲಿ ಒಂದು ಸೂಕ್ತ ಲೋಪಾಮುದ್ರೆಯಿಂದ ಸಂಸ್ಕøತದಲ್ಲಿ ರಚಿತಗೊಂಡಿದೆ ಎಂಬದು ಕಲ್ಪನೆಯಲ್ಲ. ಸ್ವತ: ಅಧಿಕೃತ ಋಗ್ವೇದ ಗ್ರಂಥವೇ ಇದಕ್ಕೆ ಸಾಕ್ಷಿಯಿದೆ. ಈ ಬಗ್ಗೆ ಸಂದರ್ಭಾನುಸಾರ ವಿವರ ಸಹಿತ ಓದುಗರಿಗೆ ಉಣಬಡಿಸಲಾಗುತ್ತದೆ. -ಲೇಖಕ