ವೀರಾಜಪೇಟೆ, ಜ. 4: ವೀರಾಜಪೇಟೆ ಸಮೀಪದ ಕದನೂರು-ಕೊಟ್ಟೋಳಿ ಕೊಡವ ಸಂಘದ 19ನೇ ವಾರ್ಷಿಕ ಸಭೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸ್ಥಳೀಯ ಕೊಡವ ಸಮಾಜದಲ್ಲಿ ನಡೆಯಿತು.

ಕೋದಂಡ ಬೇಬಿ ಸುಬ್ಬಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಘದ ಅಧ್ಯಕ್ಷೆ ಬೊಳ್ಳಂಡ ಕಿಶೋರಿ ಅಯ್ಯಪ್ಪ ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ಶೈಕ್ಷಣಿಕ ಹಾಗೂ ಕ್ರೀಡಾ ಸಾಧನೆಗೈದ ಸಂಘದ ವ್ಯಾಪ್ತಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಮುಖ್ಯ ಅತಿಥಿಗಳಾಗಿದ್ದರು.

ವಾರ್ಷಿಕೋತ್ಸವದ ಅಂಗವಾಗಿ ಅಮ್ಮುಣಿಚಂಡ ಕವಿತ ಸುಬ್ರಮಣಿ, ತಂಡದ ನೃತ್ಯ ಮತ್ತು ಪ್ರವೀಣ್ ಚಂಗಪ್ಪ ತಂಡದ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ಕಾರ್ಯದರ್ಶಿ ಅಮ್ಮುಣಿಚಂಡ ಯಮುನಾ ಅರಸು ವರದಿ ವಾಚಿಸಿದರು. ಕೊಟ್ರಂಗಡ ರಾಧ ಗಣಪತಿ ಪ್ರಾರ್ಥನೆಗೈದರು. ಕೋಣೇರಿರ ವಿನಯ್ ನಾಣಯ್ಯ ವಂದಿಸಿದರು.