ನಾಪೆÇೀಕ್ಲು, ಜ. 4: ಸ್ಥಳೀಯ ಶ್ರೀ ರಾಮಟ್ರಸ್ಟ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಅಂತರ ಪ್ರೌಢಶಾಲಾ ರಸಪ್ರಶ್ನೆ ಸ್ಪರ್ಧೆಯಲ್ಲಿ ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಶ್ರೀ ರಾಮಟ್ರಸ್ಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ, ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ತೃತೀಯ ಸ್ಥಾನ ಗಳಿಸಿದರೆ ಮೂರ್ನಾಡು ಜ್ಞಾನಜ್ಯೋತಿ ಹಾಗೂ ಕಳತ್ಮಾಡಿನ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಕ್ರಮವಾಗಿ ನಾಲ್ಕನೇ ಹಾಗೂ ಐದನೇ ಸ್ಥಾನ ಪಡೆದರು. 9 ಸುತ್ತುಗಳಲ್ಲಿ ಆಯೋಜಿಸ ಲಾಗಿದ್ದ ಅಂತಿಮ ಸುತ್ತಿನ ರಸಪ್ರಶ್ನೆ ಸ್ಪರ್ಧೆಯಲ್ಲಿ ಚೇರಂಬಾಣೆ ಶ್ರೀ ರಾಜರಾಜೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಎಂ.ಕೆ. ಶ್ರೀವತ್ಸ, ಕೆ.ಟಿ. ಬಿದ್ದಪ್ಪ, ಬಿ.ಕೆ. ಲಿಪಿಕ ಹಾಗೂ ಎ.ಎಸ್. ಲಿಯ ತಂಡ 83 ಅಂಕಗಳಿಸಿ ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದರು. ಪ್ರಬಲ ಪೈಪೆÇೀಟಿ ನೀಡಿದ ನಾಪೋಕ್ಲುವಿನ ಶ್ರೀ ರಾಮಟ್ರಸ್ಟ್ ವಿದ್ಯಾರ್ಥಿಗಳಾದ ಕೆ.ಎಸ್. ಸಾಂಜ್ ದೇಚಮ್ಮ, ಕೆ.ಎ. ಮೊನಿಷ, ಯಾನ ದೇಚಮ್ಮ ಹಾಗೂ ಟಿ.ಎಸ್. ಅನನ್ಯ ತಂಡ 76 ಅಂಕಗಳಿಸಿ ದ್ವಿತೀಯ ಸ್ಥಾನ ಪಡೆದು ಕೊಂಡರು. ಸ್ಪರ್ಧಾ ಕಾರ್ಯಕ್ರಮವನ್ನು ಮೈಸೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ ಕಾಲೇಜಿನ ಸಹಾಯಕ ಪೆÇ್ರ. ಕೆ.ಎಸ್. ನಿತಿನ್ ಉದ್ಘಾಟಿಸಿದರು. ಬಳಿಕ ಬಹುಮಾನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜೀವನದಲ್ಲಿ ಮುಂದೆ ಬರಬೇಕಾದರೆ ಏಕಾಗ್ರತೆ ಮುಖ್ಯ. ವಿಜ್ಞಾನದ ವಿಷಯಗಳನ್ನು ನಿತ್ಯ ಜೀವನದ ಘಟನೆಗಳನ್ನು ಪಠ್ಯ ವಿಷಯಕ್ಕೆ ಸಂಬಂಧ ಕಲ್ಪಿಸಿ ಓದಿದರೆ ವಿಜ್ಞಾನದ ಮೂಲ ವಿಷಯಗಳನ್ನು ಅರ್ಥೈಸಿ ಕೊಳ್ಳಬಹುದು. ವಿದ್ಯಾರ್ಥಿಗಳು ತಮ್ಮ ವಯೋಮಾನದಲ್ಲಿ ಓದುವತ್ತ ಗಮನ ಹರಿಸಬೇಕು. ಸಾಮಾಜಿಕ ಮಾಧ್ಯಮಗಳನ್ನು ಯುಕ್ತವಾಗಿ ಬಳಸಿ ಸಾಮಾನ್ಯ ಜ್ಞಾನವನ್ನು ವೃದ್ಧಿಸಿ ಕೊಳ್ಳಬೇಕು ಎಂದರು. ರಸಪ್ರಶ್ನೆ ಕಾರ್ಯಕ್ರಮದಲ್ಲಿ ಅರ್ಹತಾ ಸುತ್ತಿನ ಲಿಖಿತ ಸ್ಪರ್ಧೆಯನ್ನು ನಡೆಸಲಾಯಿತು. ಜಿಲ್ಲೆಯ ವಿವಿಧ ಭಾಗಗಳ 16 ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಅಧಿಕ ಅಂಕಗಳಿಸಿದ ಐದು ತಂಡಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡ ಲಾಯಿತು. ಶಾಲಾ ಪ್ರಾಂಶುಪಾಲೆ ಬಿ.ಎಂ. ಶಾರದ ಸ್ವಾಗತಿಸಿ, ನಿವೃತ್ತ ಪ್ರಾಂಶುಪಾಲ ಕಲ್ಯಾಟಂಡ ಪೂಣಚ್ಚ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಹ್ಯಾರಿª Àುಂದಣ್ಣ, ನಿರ್ದೇಶಕರಾದ ಪಾಪ ಮುದ್ದಯ್ಯ, ಬಿದ್ದಾಟಂಡ ಮುತ್ತಣ್ಣ, ಪೆÇನ್ನಂಪೇಟೆ ಸಿಐಟಿ ಕಾಲೇಜಿನ ಜಗದೀಶ್ ಉಪಸ್ಥಿತರಿದ್ದರು. ರಸಪ್ರಶ್ನೆ ನಿರ್ವಾಹಕರಾಗಿ ಶಿಕ್ಷಣ ಸಂಯೋಜಕ ಪಿ.ಆರ್. ಅಯ್ಯಪ್ಪ, ನೇತಾಜಿ ಪ್ರೌಢಶಾಲೆಯ ಗಣಿತ ಶಿಕ್ಷಕ ಸಿ.ಎಸ್. ಸುರೇಶ್ ಕಾರ್ಯನಿರ್ವಹಿಸಿದರು.