ಮಡಿಕೇರಿ, ಜ. 4: ಕಾರು ಚಾಲಕ ವೃತ್ತಿ ನಿರ್ವಹಿಸುತ್ತಿದ್ದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹಾಕತ್ತೂರು ನಿವಾಸಿ ದಕ್ಷತ್ (27) ಎಂಬಾತ ನಿನ್ನೆ ರಾತ್ರಿ ನಗರದ ‘ಫೋರ್ಟ್ವ್ಯೂ ಲಾಡ್ಜ್’ನಲ್ಲಿ ಕೊಠಡಿ ಪಡೆದು ತಂಗಿದ್ದು, ಇಂದು ಬೆಳಿಗ್ಗೆಯಿಂದಲೂ ಕೊಠಡಿಯಿಂದ ಹೊರ ಬಾರದ ಹಿನ್ನೆಲೆಯಲ್ಲಿ ವಸತಿಗೃಹದ ಸಿಬ್ಬಂದಿ ಮಡಿಕೇರಿ ನಗರ ಪೊಲೀಸರಿಗೆ ಮಾಹಿತಿ ನೀಡಿ ಬಳಿಕ ಬಾಗಿಲು ಮುರಿದು ಪರಿಶೀಲಿಸಿದಾಗ ದಕ್ಷತ್ ನೇಣಿಗೆ ಶರಣಾಗಿರುವುದು ಕಂಡುಬಂದಿದೆ. ಆತ್ಮಹತ್ಯೆಗೂ ಮುನ್ನ ತನ್ನ ವಾಟ್ಸ್ಯಾಪ್ ಸ್ಟೇಟಸ್ನಲ್ಲಿ ತಂದೆ - ತಾಯಿಯ ಫೋಟೋ ಹಾಕಿ ‘ಮಿಸ್ಯೂ’ ಎಂದು ಬರೆದಿದ್ದಾನೆ. ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.