ಕೂಡಿಗೆ, ಜ. 4: ಸಾಂಸ್ಕøತಿಕ ಕ್ಷೇತ್ರದಲ್ಲಿ ಕುಮಾರಿ ಚಂಗಚಂಡ ತ್ವಿಶಾ ತಂಗಮ್ಮ ಸಾಧನೆಯನ್ನು ಗುರುತಿಸಿ ಬೆಳಕು ಸಂಸ್ಥೆಯು ಮಂಡ್ಯದಲ್ಲಿ ನಡೆದ ಪಂಚ ಜಿಲ್ಲಾ ಸಮ್ಮೇಳನದಲ್ಲಿ ರಾಜ್ಯಮಟ್ಟದ ಕಲಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ತ್ವಿಶಾ ಹೊಸಪಟ್ಟಣ ಗ್ರಾಮದ ಚಂಗಚಂಡ ನಿತಿನ್ ಮತ್ತು ರಶ್ಮಿ ದಂಪತಿಯ ಪುತ್ರಿ.