ಸೋಮವಾರಪೇಟೆ,ಜ.2: ಪೊಲೀಸರೆಂದರೆ ಪ್ರತ್ಯೇಕ ದೃಷ್ಟಿಯಲ್ಲಿ ನೋಡುತ್ತಿದ್ದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಇದೀಗ ಈ ಪೊಲೀಸರೆಂದರೆ ಅಚ್ಚುಮೆಚ್ಚು. ತಾವು ಅನುಭವಿಸುತ್ತಿದ್ದ ಸಾರಿಗೆ ಸಮಸ್ಯೆಯನ್ನು ಕೆಲವೇ ದಿನಗಳಲ್ಲಿ ಬಗೆಹರಿಸಿದ ಇವರ ಕಾರ್ಯಕ್ಕೆ ಇದೀಗ ಮೆಚ್ಚುಗೆಯ ಮಹಾಪೂರ ..!
ಆರಕ್ಷಕರ ಎದುರಲ್ಲಿ ಮಕ್ಕಳು ಮಾಡಿಕೊಂಡ ಮನವಿಗೆ ತಕ್ಷಣ ಸ್ಪಂದನ ಲಭಿಸಿದ್ದು, ಸಮಸ್ಯೆ ಬಗೆಹರಿದ ಖುಷಿಯಲ್ಲಿ ವಿದ್ಯಾರ್ಥಿಗಳು ಇದೀಗ ಶಾಲಾ - ಕಾಲೇಜಿಗೆ ತೆರಳುತ್ತಿದ್ದಾರೆ. ಇಂತಹದೊಂದು ಖುಷಿಯ ಸಂಗತಿ ನಡೆದಿರುವದು ತಾಲೂಕಿನ ಕಾರೇಕೊಪ್ಪ ಗ್ರಾಮದಲ್ಲಿ.
ಬೇಳೂರು ಗ್ರಾಮ ಪಂಚಾಯಿತಿಗೆ ಒಳಪಡುವ ಕಾರೇಕೊಪ್ಪ ಗ್ರಾಮ, ಸೋಮವಾರಪೇಟೆ-ಕುಶಾಲನಗರ ರಾಜ್ಯಹೆದ್ದಾರಿಗೆ ಒತ್ತಿಕೊಂಡಂತೆ ಇದೆ. ಕುಶಾಲನಗರ ಹಾಗೂ ಸೋಮವಾರಪೇಟೆ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚರಿಸುತ್ತಿರುತ್ತಾರೆ.
ಪ್ರತಿದಿನ ಶಾಲಾ ಕಾಲೇಜಿಗೆ ತೆರಳಲು ಈ ಭಾಗದ 30ಕ್ಕೂ ಅಧಿಕ ವಿದ್ಯಾರ್ಥಿಗಳು ಅವಲಂಭಿಸಿದ್ದು, 8.20ಕ್ಕೆ ಕಾರೇಕೊಪ್ಪಕ್ಕೆ ಬರುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ನ್ನು. ಈ ಮಧ್ಯೆ ‘ಕಲೆಕ್ಷನ್’ ನೆಪವೊಡ್ಡಿ ಬಸ್ ಬಸ್ ಸಂಚಾರ ಸ್ಥಗಿತಗೊಂಡಿದ್ದ ಬಗ್ಗೆ ಕೆಎಸ್‍ಆರ್‍ಟಿಸಿಯ ಅಧಿಕಾರಿಗಳಿಗೆ ಹಲವಷ್ಟು ಬಾರಿ ಮನವಿ ಮಾಡಿದ್ದೆವು. ಕಲೆಕ್ಷನ್ ಇಲ್ಲ ಎಂದು ಹೇಳಿಕೆ ನೀಡುತ್ತಿದ್ದರೇ ಹೊರತು ಸೇವೆಯ ದೃಷ್ಟಿಯಿಂದ ಬಸ್ ನೀಡಿರಲಿಲ್ಲ. ಇದೀಗ ಪೊಲೀಸರ ಪ್ರಯತ್ನದಿಂದ ಸರಿಯಾದ ಸಮಯಕ್ಕೆ ಬಸ್ ಆಗಮಿಸುತ್ತಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಿದೆ. ಗ್ರಾಮಸ್ಥರ ಪರವಾಗಿ ಠಾಣಾಧಿಕಾರಿ, ಎಎಸ್‍ಐ ಮತ್ತು ಬೀಟ್ ಪೊಲೀಸರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
- ಲಕ್ಕಯ್ಯ, ಕಾರೇಕೊಪ್ಪ ನಿವಾಸಿ
ಬೀಟ್ ಸಭೆಯಲ್ಲಿ ಸಮಸ್ಯೆಯನ್ನು ಹೇಳಿಕೊಂಡಿದ್ದರು. ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ತನ್ನ ಕಾರ್ಯವ್ಯಾಪ್ತಿಯಲ್ಲಿ ಆಗುವಷ್ಟು ಸ್ಪಂದನ ನೀಡಿದ್ದೇನೆ. ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಯತ್ನದಿಂದ ಸಮಸ್ಯೆ ಬಗೆಹರಿದಿದೆ.
ಸಭೆಯಲ್ಲಿ ಚರ್ಚೆಗೆ ಬಂದ ವಿಷಯಗಳನ್ನು ಠಾಣಾಧಿಕಾರಿಯ ಗಮನಕ್ಕೆ ತಂದು, ಸ್ಪಂದಿಸುವ ಬಗ್ಗೆ ಮನವಿ ಮಾಡಿದ್ದೆವು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸೇವೆಯ ದೃಷ್ಟಿಯಿಂದ ಠಾಣಾಧಿಕಾರಿಗಳು ತುರ್ತು ಸ್ಪಂದಿಸಿ, ಸಂಬಂಧಿಸಿದವರಿಗೆ ಪತ್ರ ಬರೆದ ಹಿನ್ನೆಲೆ ಮತ್ತೆ ಬಸ್ ಸಂಚಾರ ಆರಂಭಗೊಂಡಿದೆ.
-ಪುಟ್ಟಪ್ಪ, ಬೀಟ್ ಉಸ್ತುವಾರಿ ಎಎಸ್‍ಐಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಅವರ ಗಮನಕ್ಕೆ ತಂದು, ಇಲಾಖೆಯಿಂದ ಸ್ಪಂದಿಸುವಂತೆ ಮನವಿ ಮಾಡಿದರು.
ಬೀಟ್ ಪೊಲೀಸ್ ಅನೀಸ್ ಮತ್ತು ಉಸ್ತುವಾರಿ ಎಎಸ್‍ಐ ಪುಟ್ಟಪ್ಪ ಅವರ ಕಾಳಜಿಗೆ ಬೆಲೆ ನೀಡಿದ ಠಾಣಾಧಿಕಾರಿ ಶಿವಶಂಕರ್ ಅವರು ಕಳೆದ ನವೆಂಬರ್ ಕೊನೆಯ ವಾರದಲ್ಲಿ ಕೆಎಸ್‍ಆರ್‍ಟಿಸಿಯ ಸಂಚಾರಿ ನಿಯಂತ್ರಕರು, ಮಂಗಳೂರು ವಲಯದ ಡಿ.ಸಿ., ಪುತ್ತೂರು ಉಪ ವಿಭಾಗದ ಅಧಿಕಾರಿಗಳಿಗೆ ಪತ್ರ ಬರೆದು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಯನ್ನು ನಿವಾರಿಸುವಂತೆ ವಿಜ್ಞಾಪಿಸಿದ್ದರು.
ಇವರ ಪತ್ರಕ್ಕೆ ಸ್ಪಂದಿಸಿದ ಕೆಎಸ್‍ಆರ್‍ಟಿಸಿಯ ಅಧಿಕಾರಿಗಳು, ಎರಡೇ ದಿನದಲ್ಲಿ ಮತ್ತೆ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಇದೀಗ ಬೆಳಗ್ಗೆ 7.45ಕ್ಕೆ ಕುಶಾಲನಗರ ದಿಂದ ಹೊರಟು 8.20ಕ್ಕೆ ಕಾರೇಕೊಪ್ಪಕ್ಕೆ ಆಗಮಿಸಿ, ಸೋಮವಾರಪೇಟೆ -ಮಡಿಕೇರಿ ಮಾರ್ಗವಾಗಿ ಮಂಗಳೂರಿಗೆ ಬಸ್ ತೆರಳುತ್ತಿದೆ.
ಇದಕ್ಕೂ ಮುನ್ನ ಬಸ್ ಸಂಚಾರವನ್ನು ಎಂದಿನಂತೆ ಅಳವಡಿಸುವಂತೆ ಅನೇಕ ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವದೇ ಪ್ರಯೋಜನವಾಗಿರಲಿಲ್ಲ. ಆದರೆ ಬೀಟ್ ಪೊಲೀಸ್ ಸಭೆಯಲ್ಲಿ ಪ್ರಸ್ತಾಪಿಸಿದ ಕೆಲವೇ ದಿನಗಳಲ್ಲಿ ಸಮಸ್ಯೆ ಬಗೆಹರಿದಿರುವದು, ಬೀಟ್ ಪೊಲೀಸ್, ಉಸ್ತುವಾರಿ ಎಎಸ್‍ಐ ಮತ್ತು ಠಾಣಾಧಿಕಾರಿಗಳ ಇಚ್ಚಾಶಕ್ತಿಯ ಕಾರ್ಯಕ್ಕೆ ಹಿಡಿದ ಕೈಗನ್ನಡಿ ಯಾಗಿದ್ದರೆ, ಇವರುಗಳ ಕಾರ್ಯ ಸ್ಥಳೀಯರ ಶ್ಲಾಘನೆಗೂ ಪಾತ್ರವಾಗಿದೆ.
-ವಿಜಯ್ ಹಾನಗಲ್