ಶನಿವಾರಸಂತೆ, ಜ. 3: ಇಂದು ರಾತ್ರಿ ಮದ್ಯ ಸೇವಿಸಿ ಕಾರು (ಕೆಎ 12 ಎ 3136) ಚಾಲನೆ ಮಾಡಿದ ನವೀನ್ ಅವರಿಗೆ ನ್ಯಾಯಾಲಯ ರೂ. 11 ಸಾವಿರ ದಂಡ ವಿಧಿಸಿದೆ.

ಗೋಪಾಲಪುರ ಗ್ರಾಮದ ನವೀನ್ ತನ್ನ ಕಾರನ್ನು ಮದ್ಯ ಸೇವನೆ ಮಾಡಿ ಚಾಲನೆ ಮಾಡಿ ಸಾರ್ವಜನಿಕರೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿದ್ದಾಗ ಕರ್ತವ್ಯದಲ್ಲಿದ ಸಹಾಯಕ ಠಾಣಾಧಿಕಾರಿ ಹೆಚ್.ಎಂ. ಗೋವಿಂದ ಅವರು ಕಾರನ್ನು ವಶಪಡಿಸಿಕೊಂಡು ಆಲ್ಕೋ ಮೀಟರ್ ಉಪಯೋಗಿಸಿ ಪರಿಶೀಲನೆ ಮಾಡಿ ಮದ್ಯ ಸೇವನೆ ಮಾಡಿದ ಬಗ್ಗೆ ಸೋಮವಾರಪೇಟೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು. ನ್ಯಾಯಾಲಯ ನವೀನ್‍ಗೆ ರೂ. 11 ಸಾವಿರ ದಂಡ ವಿಧಿಸಿ ತೀರ್ಪು ನೀಡಿತ್ತು. ನವೀನ್ ನ್ಯಾಯಾಲಯಕ್ಕೆ ದಂಡ ಪಾವತಿಸಿ ಶನಿವಾರಸಂತೆ ಪೊಲೀಸ್ ಠಾಣೆಯ ವಶದಲ್ಲಿದ್ದ ತನ್ನ ಕಾರನ್ನು ಬಿಡಿಸಿಕೊಂಡಿರುತ್ತಾರೆ.