ಮಡಿಕೇರಿ, ಜ. 2: ಮಡಿಕೇರಿಯ ಕೊಡವ ಕೇರಿಗಳ ಪೈಕಿ ಒಂದಾಗಿರುವ ಸುದರ್ಶನ ಕೊಡವಕೇರಿ ಸಂಘದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಕೊಡವ ಸಮಾಜದಲ್ಲಿ ಜರುಗಿತು.
ಕೇರಿಯ ಅಧ್ಯಕ್ಷ ಮಂಡುವಂಡ ಪಿ. ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿತು. ವಿವಿಧ ಕ್ರೀಡಾ ಸ್ಪರ್ಧೆಗಳೊಂದಿಗೆ ಉಮ್ಮತ್ತಾಟ್, ಬೊಳಕಾಟ್, ಕೋಲಾಟ್ ನಂತಹ ಜನಪದ ಪ್ರದರ್ಶನ, ಸಭಾಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿ ಬಲ್ಯಾಟಂಡ ಲತಾ ಚಂಗಪ್ಪ ಅವರು ಪಾಲ್ಗೊಂಡಿದ್ದರು. ನಿವೃತ್ತ ಏರ್ಮಾರ್ಷಲ್ ಕೆ.ಸಿ. ಕಾರ್ಯಪ್ಪ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು. ಈ ಸಂದರ್ಭ 2018ರ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಕೇರಿಯ ಅಧ್ಯಕ್ಷರೂ ಆಗಿರುವ ಮಂಡುವಂಡ ಮುತ್ತಪ್ಪ ಅವರನ್ನು ಸನ್ಮಾನಿಸಲಾಯಿತು. ಕೇರಿಯ ಉಪಾಧ್ಯಕ್ಷ ಬೈರೇಟಿರ ಬಿದ್ದಯ್ಯ, ಕಾರ್ಯದರ್ಶಿ ಕೇಕಡ ಗಣಪತಿ, ಖಜಾಂಚಿ ಮಂಡಚಂಡ ಭೀಮಯ್ಯ ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು.