ಕೂಡಿಗೆ, ಜ. 2: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸೋಮವಾರಪೇಟೆ, ಕೂಡಿಗೆ ವಲಯದ ವತಿಯಿಂದ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಮುಳ್ಳುಸೋಗೆ ಯಲ್ಲಿ ನಡೆಯಿತು.
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಬೆಳಿಗ್ಗೆ 7.30 ಗಂಟೆಗೆ ವಿಜಯನಗರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಪರಮೇಶ್ವರ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ನಂತರ 11 ಗಂಟೆಗೆ ಮಹಾಮಂಗಳಾರತಿ ನೆರವೇರಿತು. ಪೂಜಾ ವಿಧಿ ವಿಧಾನಗಳ ನಂತರ ನಡೆದ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಕೈಗಾರಿಕೋದ್ಯಮ ಬ್ಯಾಂಕ್ನ ಅಧ್ಯಕ್ಷ ಶರವಣಕುಮಾರ್ ಉದ್ಘಾಟಿಸಿದರು.
ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶಸ್ವಾಮೀಜಿಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳ ವಹಿಸಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ಪ್ರಕಾಶ್ ವೈ. ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರ ಮಾಡಿದರು. ಮುಖ್ಯ ಅತಿಥಿಗಳಾಗಿ ಮುಳ್ಳುಸೋಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜಶೇಖರ್, ಸದಸ್ಯರಾದ ಎಂ.ಎಸ್. ಶಿವಾನಂದ, ಕೊಡಗು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಚಂದ್ರ ಮೋಹನ್, ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರ ಪವನ್ಕುಮಾರ್, ಕೂಡ್ಲೂರು ಶ್ರೀ ರಾಮೇಶ್ವರ ರೈತ ಸಹಕಾರ ಸಂಘದ ಮಾಜಿ ನಿರ್ದೇಶಕ ಕೆ.ಕೆ. ಭೊಗಪ್ಪ, ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗಣಿ ಪ್ರಸಾದ್, ಕೂಡಿಗೆ ಗ್ರಾ.ಪಂ. ಸದಸ್ಯರಾದ ಧನ್ಯ, ಮುಳ್ಳುಸೋಗೆ ಗ್ರಾ.ಪಂ. ಸದಸ್ಯ ಜಗದೀಶ್, ಮಾಜಿ ಸದಸ್ಯ ಗೋವಿಂದಪ್ಪ, ಮುಳ್ಳುಸೋಗೆ ಪಂಚಲಿಂಗೇಶ್ವರ ಬೋರ್ವೆಲ್ನ ಮಂಜುನಾಥ್, ಕೂಡುಮಂಗಳೂರು ಶ್ರೀ ರಾಮೇಶ್ವರ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಟಿ.ಕೆ. ವಿಶ್ವನಾಥ್, ಕೂಡಿಗೆ ಗ್ರಾ.ಪಂ. ಸದಸ್ಯೆ ಕಲ್ಪನ ಸೇರಿದಂತೆ ಒಕ್ಕೂಟಗಳ ಪದಾಧಿಕಾರಿಗಳು ಇದ್ದರು.
ಕಾರ್ಯಕ್ರಮವನ್ನು ಒಕ್ಕೂಟದ ನಿರ್ಮಲ, ಕುಸುಮ ನಿರ್ವಹಿಸಿದರು.