ಕೂಡಿಗೆ, ಜ. 3: ಕೂಡಿಗೆಯ ಪವಿತ್ರ ತಿರು ಕುಟುಂಬದ ಚರ್ಚ್‍ನ ವಾರ್ಷಿಕ ಪೂಜೋತ್ಸವ ತಾ. 5 ರಂದು ನಡೆಯಲಿದೆ. ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಧರ್ಮ ಕೇಂದ್ರಗಳ ಗುರುಗಳು ಭಾಗವಹಿಸಲಿದ್ದಾರೆ.

ಮೊದಲಿಗೆ ಬಲಿಪೂಜೆ ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಕಾರ್ಯಕ್ರಮ ಕೂಡಿಗೆ ಚರ್ಚ್‍ನ ಧರ್ಮಗುರು ಜಾನ್ ಡಿಗೋನ್ನ ನೇತೃತ್ವದಲ್ಲಿ ನಡೆಯಲಿದೆ.