ಮಾನವ ಮೂಲತಃ ಸಂಘ ಜೀವಿ ಮತ್ತು ಪರಾವಲಂಬಿಯು ಕೂಡ. ಆತ ಹೆಚ್ಚು ಸಮಯ ಏಕಾಂಗಿಯಾಗಿ ಕಳೆಯುವು ದನ್ನು ಇಷ್ಟ ಪಡುವುದಿಲ್ಲ. ಅದಕ್ಕೆ ಒಬ್ಬಂಟಿ ಜೀವಕ್ಕೆ ಜಂಟಿಯಾಗಿ ಸುವ ಸಮಾಜಮುಖಿ ಬಂಧವೇ ಮದುವೆ. ಇಂಥಹ ಮದುವೆಗೆ ಅದೆಷ್ಟು ವರಾನ್ವೇಷಣೆ, ವಧುವಿನ ಶೋಧನೆ ಆಗಿಬಿಟ್ಟಿರುತ್ತದೆ ಎಂದರೆ ಅದರ ಅನುಭವ ಇರುವವರಿಗೆ ಮಾತ್ರ ತಿಳಿದಿರು ತ್ತದೆಯಷ್ಟೆ. ಅದಕ್ಕಾಗೆ ಇಂದು ಬಹಳಷ್ಟು ಮಂದಿ ನೀನು ಓದುವುದರೊಂದಿಗೆ ಜೀವನ ಸಂಗಾತಿಯ ಶೋಧನೆ ಮಾಡಿಕೊಳ್ಳಬೇಕಾಗಿತ್ತು ಎಂದು ಹೇಳುವುದೂ ಇದೆ. ಅದರಲ್ಲೂ ವರಾನ್ವೇಷಣೆಯಲ್ಲಿ ಕೆಲವು ಹುಡುಗಿಯ ಕಡೆಯವರ ಬೇಡಿಕೆಗಳ ಪಟ್ಟಿ ನೋಡುತ್ತ ಹೋದರೆ ಉಸ್ಸಪ್ಪ ಎಂದೆನಿಸಿ ಬಿಡುತ್ತದೆ. ಹುಡುಗನಿಗೆ ಎರಡಂಕಿಯ ಆಸ್ತಿ-ಪಾಸ್ತಿ ಇರಬೇಕು, ಕನಿಷ್ಟ ಐದಂಕಿ ವೇತನ ಬರುವ ಕೆಲಸ ಇರಬೇಕು, ಸ್ವಂತ ಮನೆ ಬೇಕು, ಓಡಾಡಲು ಒಬ್ಬರಿಗೊಂದರಂತೆ ಕಾರಿರಬೇಕು ಹೀಗೆ ಬೇಡಿಕೆಗಳ ಪಟ್ಟಿ ಇರುತ್ತದೆ. ಹುಡುಗ ಇದ್ದಾನೆ ಎಂದು ತಿಳಿದಾಕ್ಷಣ ಕೆಲವರಿಗೆ (ಹುಡುಗನಿಗೆ ಅಪ್ಪ, ಅಮ್ಮ ಇದ್ದರೆ ಅತ್ತೆ ಕಾಟದ ಭಯವಿರಬೇಕು) ಆ ಸಂಬಂಧ ಬೇಡ.

ಹುಡುಗ ಓದು ಮುಗಿಸಿ ಮನೆಯಲ್ಲಿ ಬೀಡು ಬಿಟ್ಟದ್ದಾನೆ ಎಂದರೆ, ಆತನನ್ನು ಕನಿಷ್ಟ ಮಟ್ಟದಲ್ಲಿ ಕಾಣುವುದುಂಟು.

ಇಂದು ಮೇಟಿ ವಿದ್ಯೆ ಕಲಿತು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿರುವ ಕೆಲವೇ ಕೆಲವು ಯುವಕರನ್ನು ಕಡೆಗಣಿಸಿ ಕೇವಲ ಡಾಕ್ಟರ್, ಇಂಜಿನಿಯರ್, ಸಾಫ್ಟ್‍ವೇರ್ ಇಂಜಿನಿಯರ್, ಲಾಯರ್, ಫ್ರೊಫೆಸರ್, ಸರಕಾರಿ ಕೆಲಸದಲ್ಲಿ ಇರುವವರಿಗೆ ಸೈನ್ಯದಲ್ಲಿರು ವವರಿಗೆ ಮಣೆ ಹಾಕುತ್ತಾ ಅಲ್ಲಲ್ಲೆ ಜೋಡಿಗಳನ್ನು ಕಂಡುಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಅಲ್ಲದೆ ಕೃಷಿಕರ ಮಕ್ಕಳು ಕೂಡ ಓದಿನ ದಿಸೆಯಲ್ಲಿ ದೂರದೂರಿಗೆ ತೆರಳಿ, ವಿದ್ಯಾಭ್ಯಾಸದ ನಂತರ ಅಲ್ಲೇ ಕೆಲಸ ಹುಡುಕಿ ಜೋಡಿ ಯನ್ನು ಕಂಡುಕೊಳ್ಳುವುದರಿಂದ ಹಳ್ಳಿಗಾಡಿನಲ್ಲಿ ನೆಲೆಯೂರುವ ಕೃಷಿಕ ಪುರುಷರಿಗೆ ಮದುವೆ ಎಂಬುದು ಸವಾಲಾಗಿ ಪರಿಣಮಿಸಿದೆ.

ಇನ್ನು ಮದುವೆ ಎಂಬುದು ಯೋಗ ಹಾಗೂ ಯೋಗ್ಯತೆಗಳ ಬೆಸುಗೆಯು ಹೌದು.

ಮದುವೆ ಎರಡು ಜೀವಿ ಗಳನ್ನು ಬೆಸೆಯುವ ಸುಂದರ ಚೌಕಟ್ಟು , ಕುಟುಂಬಗಳ ಸಮಾಗಮ, ಸಮಾಜದ ಕಟ್ಟುಪಾಡು. ವಿವಾಹಗಳಲ್ಲಿ ಗಾಂಧರ್ವ ವಿವಾಹದಿಂದ ಮೊದಲ್ಗೊಂಡು, ಧಾರ್ಮಿಕ ವಿವಾಹದಿಂದ ಆರಂಭವಾಗಿ, ಪ್ರೇಮ ವಿವಾಹದ ಅನೇಕ ರೀತಿಗಳಿವೆ. ಸಮನ್ವಯ ಸಹಬಾಳ್ವೆ ಕೀಲಿಕೈ ಆಗಿರುವ ಮದುವೆಯಲ್ಲಿ ಮನಸ್ಸನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಭವಿಷ್ಯದ ಭದ್ರತೆ ಅಡಗಿರುವುದು ಸತ್ಯ ಸಹಜ.

ನಮ್ಮ ಹಿರಿಯರ ಕಾಲದಲ್ಲಿ ಹುಡುಗನನ್ನು ನೋಡುವ ಪರಿಪಾಠವಿದ್ದರೂ ಹುಡುಗಿಯ ಒಪ್ಪಿಗೆಗೆ ಪ್ರಾಮುಖ್ಯತೆಯೆ ಇರುತ್ತಿರಲಿಲ್ಲ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ಗಾದೆಯಂತೆ ಕಷ್ಟವೋ ಸುಖವೋ ಹೊಂದಿಕೊಂಡು ಹೋಗಲೇಬೇಕು, ಏಗಿಕೊಂಡೆ ಬಾಳಲೇಬೇಕಿತ್ತು. ಮುಂದುವರೆದ ಕಾಲಘಟ್ಟದಲ್ಲಿ ವಿವಿಧರೀತಿಯಲ್ಲಿ ಶೋಧಿಸಿ, ವಿಚಾರಿಸಿ ಸಂಬಂಧ ಜೋಡಿಸುವದೂ ಒಂದೆಡೆ ಯಾದರೆ ಮತ್ತೊಂದೆಡೆ ಐಶ್ವರ್ಯಕ್ಕೆ ಮಣೆ ಹಾಕುವುದುಂಟು. ಇನ್ನು ಆಧುನಿಕ ಯುವಕ-ಯುವತಿ ಯರು ಮದುವೆಗೆ ಮುನ್ನವೇ ಪರಸ್ಪರ ಪರಿಚಯ, ಒಡನಾಟ ನಡೆದಿದ್ದರೂ ಮದುವೆಯ ನಂತರ ಸಾಮರಸ್ಯದ ಕೊರತೆಯಿಂದಾಗಿ ಸಂಬಂಧ ಕಳಚಿಕೊಳ್ಳುತ್ತಿರುವುದನ್ನೂ ಕಾಣಬಹುದು. ಆದ ಕಾರಣ ಇತ್ತೀಚೆಗೆ ಭಾರತದಲ್ಲಿ ವಿಚ್ಚೇದನ ಪಡೆಯುತ್ತಿರುವವರ ಸಂಖ್ಯೆ ಸಾಮಾನ್ಯವೆಂಬಂತೆ ಕೇಳಿ ಬರುತ್ತಿದೆ ಸಾಮರಸ್ಯದ ಕೊರತೆಯಿಂದ ಸಹಬಾಳ್ವೆ ಅಸಾಧ್ಯ ಎನ್ನುವ ಕಾರಣಕ್ಕೆ ದಾಂಪತ್ಯಜೀವನ ಭದ್ರ ಬುನಾದಿಯ ಮೇಲೆ ತಳ ಊರುವ ಮೊದಲೇ ಕುಸಿಯುತ್ತಿದೆ. ವಿಚ್ಚೇದನ ಹೊಂದಿ ಬಾಳಲು ಅಸಾಧ್ಯ ಎಂದೆನ್ನುವವರಿಗೆ ಸ್ವಾತಂತ್ರ್ಯವನ್ನೇನೋ ಕೊಡಬಹುದಾದರೂ ಭವಿಷ್ಯದ ಜೀವನಕ್ಕೆ ದುಃಖದ ಮುಡಿಪನ್ನು ನೀಡದಿರದು. ಅಂತೆಯೆ ಅನುಸರಿಸಿ ಬಾಳುವ ಕಲೆ ತಿಳಿದಿದ್ದರೆ ಬೇರ್ಪಡುವ ಪ್ರಶ್ನೆ ಬರುವುದಿಲ್ಲ. ಚಿಕ್ಕ-ಪುಟ್ಟ ತಪ್ಪುಗಳು ಎದುರಾದಾಗ ಅದನ್ನು ಬಗೆಹರಿಸಿಕೊಂಡು ಸಕಾರಾತ್ಮಕ ಚಿಂತನೆಯೊಂದಿಗೆ, ನಕಾರಾತ್ಮಕ ಧೋರಣೆಯನ್ನು ಇಲ್ಲವಾಗಿಸಿ ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆಗಳಿಸಲು ಸೇತುವೆಯಾಗುತ್ತದೆ. ಜೊತೆ ಯಾಗಿ ಎರಡು ಜೀವಗಳು ಮಾನಸಿಕ ಸ್ಥಿತಿಯನ್ನು ಅರ್ಥೈಸಿಕೊಂಡು ಜೀವನಾರಂಭದಲ್ಲಿ ಇರುವ ಉತ್ಸಾಹ ಪ್ರೀತಿಯನ್ನು ಸದಾಕಾಯ್ದುಕೊಂಡರೆ ಇಳಿ ವಯಸ್ಸಿನಲ್ಲೂ ಅಪ್ಪುವ ಕೈಗಳಾಗಿ ಸಾಂತ್ವನ ನೀಡುತ್ತವೆ.

ವೈವಾಹಿಕ ಜೀವನದ ಅನ್ಯೋನ್ಯ ಸಂಬಂಧದಿಂದ ಉತ್ತಮ ದಾಂಪತ್ಯ ರೂಪು ಗೊಳ್ಳುವುದಲ್ಲದೆ ಅಂತಿಮ ಹಂತದವರೆಗೂ ಸುಖ-ಸಂತೋಷ ನೆಮ್ಮದಿ ನೀಡುವುದರಲ್ಲಿ ಸಂದೇಹವಿಲ್ಲ.

-ಇಟ್ಟಿರ ಉತ್ತಪ್ಪ ಸುಬ್ರಮಣಿ

ಹರಿಹರ-ಮುಗುಟುಗೇರಿ.