ಗೋಣಿಕೊಪ್ಪ ವರದಿ, ಜ. 2: ಕಾವೇರಿ ಹಿಲ್ಸ್ ಬಡಾವಣೆಯಲ್ಲಿರುವ ಕಾವೇರಿ ಸಂಘದ ವತಿಯಿಂದ ಬಲ್ಲಡಿಚಂಡ ಪೊನ್ನಪ್ಪ ಸ್ಮರಣಾರ್ಥ 6ನೇ ವರ್ಷದ ಕ್ರೀಡಾಕೂಟ ನಡೆಯಿತು. ಸಂಘದ ಅಧ್ಯಕ್ಷ ಎಂ.ಎಂ ಥೋಮಸ್ ಚಾಲನೆ ನೀಡಿದರು. ಬಡಾವಣೆ ನಿವಾಸಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ವಿಜೇತರು: ಪ್ರೀ ಕೆ.ಜಿ. ಕಾಳು ಹೆಕ್ಕುವುದರಲ್ಲಿ ಸಾನಿಬ, ಅಲಿಷಾ, ಮಿಸ್ನಾ, ಓಟದಲ್ಲಿ ಸಾನಿಬ, ಅಲಿಷಾ, ಎಲ್‍ಕೆಜಿ ಮತ್ತು ಯುಕೆಜಿ ಕಾಳು ಹೆಕ್ಕುವುದರಲ್ಲಿ ನಿದಾ ಫಾತಿಮ, ಅರ್ಫ್, ಅಶಂ, ಓಟದಲ್ಲಿ ಅರ್ಫ್, ಅಶಂ, ರಿಜ್ವನ್, 1-3 ನೇ ತರಗತಿ ಬಾಲಕರ ಓಟದಲ್ಲಿ ಹಿಲನ್, ಸಾದಿಲ್, ಬಾಲಕಿಯರಲ್ಲಿ ಪ್ರೀತಲ್, ತಾನಿಯ, ಬಾಲಕರ ಬಕೆಟ್‍ಗೆ ಬಾಲ್ ಹಾಕುವ ವಿಭಾಗದಲ್ಲಿ ನಾತಿಫ್ ನೆಫ್‍ನಾನ್, ಸಾದಿಲ್, ಬಾಲಕಿಯ ರಲ್ಲಿ ಸಿ. ಆರ್. ಫಿದಾ, ಪ್ರೀತಲ್ ಬಹುಮಾನ ಪಡೆದರು.

4-6 ನೇ ತರಗತಿ ಬಾಲಕರ ಓಟದಲ್ಲಿ ಸ್ನೇಹಲ್, ಸಿ.ಬಿ. ತನಿಷ್, ಬಾಲಕಿಯರಲ್ಲಿ ಗಾಯನ, ನೌಶಿಯ, ಬಾಲಕರ ಪಾಸಿಂಗ್ ದ ಬಾಲ್ ಸ್ಪರ್ಧೆಯಲ್ಲಿ ಭುವನ್, ತಾನಿಫ್, 3-6 ತರಗತಿಯ ಬಾಲಕಿಯರ ಮ್ಯೂಸಿಕಲ್ ಚೇರ್‍ನಲ್ಲಿ ನೌಶಿಯ, ಸಿಫಾನ, 7-10 ನೇ ತರಗತಿಯ ಬಾಲಕರ ಓಟದ ಸ್ಪರ್ಧೆಯಲ್ಲಿ ಲಿಯನ್, ಆದರ್ಶ್, ತನುಷ್, ಬಾಲಕಿಯರಲ್ಲಿ ವಂದನ, ತಬು, ಪಿಯುಸಿ ಬಾಲಕರ ಓಟದಲ್ಲಿ ಮನ್ಸ್‍ರ್, ರೋಶನ್, ನಿಕಿಲ್, ಫುಟ್‍ಬಾಲ್ ಬಾಲಕರ ವಿಭಾಗದಲ್ಲಿ ಲಿಯನ್ ಮತ್ತು ತಂಡ, ಮನ್ಸ್‍ರ್ ಮತ್ತು ತಂಡ, ಬಾಡ್ಮಿಂಟನ್ ಬಾಲಕಿಯರಲ್ಲಿ ಪ್ರೇಕ್ಷಾ ಮತ್ತು ತಂಡ, ಗಾಯನ ಮತ್ತು ತಂಡ, ಶಟಲ್ ಬಾಡ್ಮಿಂಟನ್ ಬಾಲಕರಲ್ಲಿ ಸಿಬಿಲ್ ಮತ್ತು ತಂಡ, ರಕ್ಷಿತ್ ಮತ್ತು ತಂಡ ಬಹುಮಾನ ಪಡೆದರು.

ಸಾರ್ವಜನಿಕ ಮಹಿಳೆಯರಿಗೆ ಮಡಿಕೆ ಹೊಡೆಯುವ ಸ್ಪರ್ಧೆಯಲ್ಲಿ ರೋಹಿಣಿ, ಹ್ಯಾನ್ಸಿ, ತಬ್ಸುಮ್, ಪಾಸ್ ಇನ್ ದ ಬಾಲ್ ರಾಜೇಶ್ವರಿ, ಕಾವೇರಿ, ಹಗ್ಗಜಗ್ಗಾಟ ವಿಭಾಗದಲ್ಲಿ ರಾಜೇಶ್ವರಿ ಮತ್ತು ತಂಡ, ಹ್ಯಾನ್ಸಿ ಮತ್ತು ತಂಡ, ಶಟಲ್ ಬಾಡ್ಮಿಂಟನ್ ವಿಭಾಗದಲ್ಲಿ ತಬ್‍ಶಿಬ - ಜೀಶಾ, ಕಾವೇರಿ-ಯೋಗಿತಾ, ಡಬಲ್ಸ್‍ನಲ್ಲಿ ಅಣ್ಣಯ್ಯ-ತಬ್‍ಸಿಬ, ಶ್ರೀಕುಮಾರ್ - ಯೋಗಿತಾ, ಪುರುಷರ ಮಿಶ್ರ ಡಬಲ್ಸ್‍ನಲ್ಲಿ ರಫೀಕ್ - ಮುಕ್ತಾರ್, ಶ್ರೀಕುಮಾರ್- ಹೊಂಬಳಯ್ಯ, ತೆಂಗಿನ ಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆಯಲ್ಲಿ ರಫೀಕ್, ಪ್ರದೀಪ್ ಸ್ಥಾನ ಪಡೆದರು. ಕಾರ್ಯದರ್ಶಿ ಕೆ.ವಿ ರಫೀಕ್, ಉಪಾಧ್ಯಕ್ಷ ಅನಿಲ್, ಖಜಾಂಚಿ ಚೋನಿರ ಸತ್ಯ, ಗೌರವಾಧ್ಯಕ್ಷ ಮಧುಮಾಚಯ್ಯ, ನಿರ್ದೇಶಕರಾದ ರವಿ, ಪ್ರಜೇಶ್, ಅಣ್ಣಯ್ಯ, ಅಜ್ಜಿಕುಟ್ಟೀರ ದೇವಯ್ಯ, ತಿರುನೆಲ್ಲಿಮಡ ಜೀವನ್, ಕ್ರೀಡಾ ಸಂಚಾಲಕರಾದ ಹರೀಶ್, ಅಣ್ಣಯ್ಯ ಇದ್ದರು.