ಸಿದ್ದಾಪುರ: ವಾಲ್ನೂರು-ತ್ಯಾಗತ್ತೂರಿನಲ್ಲಿ ವ್ಯಕ್ತಿಯೋರ್ವರು ಯುವಕ ನೋರ್ವನ ಮೇಲೆ ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಿಸಿ ದಂತೆ ಪೊಲೀಸ್ ದೂರು ದಾಖಲಾಗಿದೆ. ಹಲ್ಲೆಗೊಳಗಾದ ಯುವಕ ಸಿದ್ದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮಡಿಕೇರಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದಾನೆ.(ಮೊದಲ ಪುಟದಿಂದ) ವಾಲ್ನೂರು-ತ್ಯಾಗತ್ತೂರು ಕಾಫಿ ಬೆಳೆಗಾರ ಚಂದಪಂಡ ಮದನ್ ಎಂಬವರು ಅದೇ ಗ್ರಾಮದ ಸುದೀಶ್ ಎಂಬ ಯುವಕನಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನಿನ್ನೆ ಸಂಜೆ ವೇಳೆ ಸುದೀಶ್ ರಸ್ತೆ ಮಧ್ಯೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಹಿಂದಿನಿಂದ ಬೈಕ್‍ನಲ್ಲಿ ಬಂದ ಮದನ್ ಬದಿಗೆ ಸರಿಯುವಂತೆ ಹಾರ್ನ್ ಮಾಡಿದಾಗ ಮಾತಿಗೆ ಮಾತು ಬೆಳೆದಿದೆ. ಕುಪಿತನಾದ ಮದನ್ ಸುದೀಶ್‍ನನ್ನು ನಿಂದಿಸಿ ‘ಅಣ್ಣ’ ಎಂದು ಕರೆಯುವಂತೆ ಹೇಳಿ ಮುಖ ಭಾಗಕ್ಕೆ ಒದ್ದಿದ್ದಾರೆ. ಸುದೀಶನ ಮೂಗಿಗೆ, ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿವೆ.