ಗೋಣಿಕೊಪ್ಪ ವರದಿ, ಡಿ. 30: ಬಲ್ಯಮುಂಡೂರು ಬಸವೇಶ್ವರ ಯುವಕ ಸಂಘ ವತಿಯಿಂದ ಆಯೋಜಿಸಿದ್ದ ಹಿಂದು ವಾಲಿಬಾಲ್ ಟೂರ್ನಿ ಫೈನಲ್‍ನಲ್ಲಿ ಕುಟ್ಟ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಬಾಡಗರಕೇರಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಭಾನುವಾರ ಬಲ್ಯಮುಂಡೂರು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಫೈನಲ್ ಮುಖಾಮುಖಿಯಲ್ಲಿ ಕುಟ್ಟ ತಂಡವು 25-15, 25-15 ಅಂಕಗಳಿಂದ ಎರಡು ನೇರ ಸೆಟ್‍ಗಳ ಮೂಲಕ ಗೆದ್ದು ಬೀಗಿತು. ಪ್ರತಿರೋಧ ನೀಡದ ಬಾಡಗರಕೇರಿ ದ್ವಿತೀಯ ತಂಡವಾಗಿ ಹೊರಹೊಮ್ಮಿತು.
ಟೂರ್ನಿಯಲ್ಲಿ 16 ತಂಡಗಳು ಸೆಣೆಸಾಟ ನಡೆಸಿದವು. ವಿಜೇತ ಎರಡು ತಂಡಕ್ಕೆ ಪಾರಿತೋಷಕ ಮತ್ತು ನಗದು ಬಹುಮಾನ ನೀಡಲಾಯಿತು. ಬಸವೇಶ್ವರ ಯುವಕ ಸಂಘ ಅಧ್ಯಕ್ಷ ದೇಯಂಡ ಕಾಶಿ, ಹಿರಿಯರಾದ ಪೆಮ್ಮಂಡ ಪೊನ್ನಪ್ಪ ಬಹುಮಾನ ವಿತರಣೆ ಮಾಡಿದರು.