ನಾಪೆÇೀಕ್ಲು, ಡಿ. 30: ಮೈಕ್ರೋ ಫೈನಾನ್ಸ್ ಸಂಸ್ಥೆಯವರು ಕಡು ಬಡವರಿಗೆ ಸಹಕಾರ ನೀಡುವ ಹೆಸರಿನಲ್ಲಿ ಸಾ¯ ಸೌಲಭ್ಯ ನೀಡಿ, ನಂತರ ಚಕ್ರ ಬಡ್ಡಿ ಪಡೆದು ಸಾಲ ಮರುಪಾವತಿ ಮಾಡುವಂತೆ ಗ್ರಾಹಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಗ್ರಾಹಕರಾದ ಯವಕಪಾಡಿ ಗ್ರಾಮದ ಬಿದ್ದಪ್ಪ, ಪೆÇನ್ನಂಪೇಟೆಯ ಪುಷ್ಪ, ಕಡಂಗದ ಲತಾ, ಚೇರಂಬಾಣೆಯ ದಿವ್ಯ, ಮರಂದೋಡದ ವಿನುತಾ ಆರೋಪಿಸಿದ್ದಾರೆ.
ಈ ಬಗ್ಗೆ ನಾಪೆÇೀಕ್ಲು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಮೈಕ್ರೋ ಫೈನಾನ್ಸ್ ಸಂಸ್ಥೆಯವರು ಬೇರೆ ಬೇರೆ ಹೆಸರಿನಲ್ಲಿ ಜಿಲ್ಲೆಯ ನಾಗರಹೊಳೆ ಕಾಲೋನಿ ಸೇರಿದಂತೆ ಎಲ್ಲಾ ಬಡವರ್ಗದವರ ಮನೆ, ಕಾಲೋನಿಗಳಿಗೆ ತೆರಳಿ ಸ್ವಯಂ ಪ್ರೇರಿತವಾಗಿ ಸಾಲ ನೀಡಿದ್ದಾರೆ. ನಂತರ ಶೇ. 24ರಂತೆ ಬಡ್ಡಿ ಮತ್ತು ಸಾಲ ಮರುಪಾವತಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅನಾರೋಗ್ಯ ಪೀಡಿತ ಗ್ರಾಹಕರ ಮನೆಗೆ ತೆರಳುವ ಸಂಸ್ಥೆಯ ಸಿಬ್ಬಂದಿ ಅವರ ಕಷ್ಟದ ಅರಿವಿದ್ದರೂ, ಸಾಲ ಕಟ್ಟಲೂ ಸಾಧ್ಯವಾಗುತ್ತಿಲ್ಲ ಎಂದರೆ, ನಿನ್ನ ಮರಣ ದೃಡೀಕರಣ ಪತ್ರ ನೀಡಿದ್ದಲ್ಲಿ ಸಾಲ ಮನ್ನಾ ಮಾಡುವದಾಗಿ ಅಪಹಾಸ್ಯ ಮಾಡುವದಾಗಿ ಅವರು ದೂರಿದ್ದಾರೆ. ಹಲವು ಗ್ರಾಹಕರಿಗೆ ಸಾಲ ನೀಡುವ ಸಂದರ್ಭದಲ್ಲಿ ಪತಿ ಮರಣ ಹೊಂದಿದ್ದಲ್ಲಿ ಸಾಲ ಮನ್ನಾ ಎಂದಿದ್ದ ಸಂಸ್ಥೆ ಪತಿ ಮರಣ ಹೊಂದಿದರೂ ಕೂಡ ಸಾಲ ಮರುಪಾವತಿಗೆ ಕಿರುಕುಳ ನೀಡುತ್ತಿದೆ ಎಂದು ಹೇಳಿದರು. ಹತ್ತು ಸಾವಿರ ಸಾಲ ಪಡೆದು ಅದನ್ನು ಕಟ್ಟಲು ಸಾಧ್ಯವಾಗದವರಿಗೆ ಮತ್ತೆ 20 ಸಾವಿರ ಸಾಲ ನೀಡುತ್ತೇವೆ.
ಅದರಲ್ಲಿ ಹತ್ತು ಸಾವಿರ ಕಟ್ಟಿ ಎಂದು ಹೇಳುತ್ತಿರುವ ಮರ್ಮದ ಬಗ್ಗೆ ನಮಗೆ ತಿಳಿಯುತ್ತಿಲ್ಲ ಎಂದಿರುವ ಅವರು, ಕಳೆದ 2 ವರ್ಷ ಪ್ರಕೃತಿ ವಿಕೋಪದಿಂದ ಕೊಡಗು ತತ್ತರಿಸಿದೆ. ಸಾ¯ ಕಟ್ಟುವದು ಹಾಗಿರಲಿ ಅನ್ನ ತಿನ್ನುವದಕ್ಕೂ ಗತಿ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿರುವ ಅವರು ಇವರ ಕಿರುಕುಳಕ್ಕೆ ಹಲವರು ಮನೆ ಬಿಟ್ಟು ಪರಾರಿಯಾಗಿದ್ದಾರೆ. ಕೆಲವರು ಆತ್ನಹತ್ಯೆ ಒಂದೇ ಉಳಿದಿರುವ ದಾರಿ ಎನ್ನುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ, ನಾಪೆÇೀಕ್ಲು ಪೆÇಲೀಸ್ ಠಾಣೆಗೆ ದೂರು ನೀಡಿದರೂ ಯಾವದೇ ಕ್ರಮಕೈಗೊಂಡಿಲ್ಲ; ಇನ್ನಾದರೂ ಸಂಬಂಧಿಸಿದವರು ಈ ಬಗ್ಗೆ ಗಮನ ಹರಿಸದಿದ್ದರೆ ಜಿಲ್ಲೆಯಲ್ಲಿರುವ ನೊಂದ ಸಾವಿರಾರು ಗ್ರಾಹಕರೊಂದಿಗೆ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದ್ದಾರೆ.