ಪೆರಾಜೆ, ಡಿ. 30: ಫ್ರೆಂಡ್ಸ್ ಕ್ಲಬ್ ನಾಗಪಟ್ಟಣ ಅಲೆಟ್ಟಿ ಇವರ ಆಶ್ರಯದಲ್ಲಿ ನಡೆದ ಅಹ್ವಾನಿತ ಪುರುಷರ ಪ್ರೋ ಮಾದರಿಯ ಮ್ಯಾಟ್ ಕಬಡ್ಡಿ ಪಂದ್ಯಾಟ ‘ಎ.ಕೆ.ಎಲ್. ಟ್ರೋಫಿ 2019’ರಲ್ಲಿ ಚಿಗುರು ಯುವಕ ಮಂಡಲ ಪೆರಾಜೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ರನ್ನರ್ಸ್ ಅಪ್ ಪ್ರಶಸ್ತಿಯನ್ನು ಎಂ.ಜಿ.ಶ್ರೀ ಸುಳ್ಯ ಪಡೆದುಕೊಂಡಿತು.

ಪೈನಲ್ ಪಂದ್ಯದಲ್ಲಿ ಪೆರಾಜೆ ಚಿಗುರು ಯುವಕ ಮಂಡಲವು ಎಂ.ಜಿ.ಶ್ರೀ ಸುಳ್ಯ ತಂಡವನ್ನು 43-8 ಅಂಕಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಸೆಮಿಫೈನಲ್ಸ್‍ನಲ್ಲಿ ಚಿಗುರು ಯುವಕ ಮಂಡಲ ತಂಡವು ಕಲ್ಲುಮುಟ್ಲು ತಂಡವನ್ನು 16-9ರಿಂದ ಮಣಿಸಿ ಪೈನಲ್ ಪ್ರವೇಶಿಸಿದರೆ, ಎಂ.ಜಿ.ಶ್ರೀ ಸುಳ್ಯವು ನ್ಯಾಚುರಲ್ ಕ್ಯಾಶ್ಯೂ ತಂಡವನ್ನು 14-9 ಅಕಂಗಳಿಂದ ಸೋಲಿಸಿ ಪೈನಲ್ ಪ್ರವೇಶಿಸಿತು.

ಪಂದ್ಯಕೂಟದ ಸರ್ವಾಂಗೀಣ ಆಟಗಾರ ಪ್ರಶಸ್ತಿಯನ್ನು ದೀಪಕ್ ಮಜಿಕೋಡಿ ಮತ್ತು ಉತ್ತಮ ದಾಳಿಗಾರ ಪುರಸ್ಕಾರಕ್ಕೆ ತಾರೇಶ್ ಕುಂಬಳಚೇರಿ ಭಾಜನರಾದರು.