ಮಡಿಕೇರಿ, ಡಿ. 30: ಮಡಿಕೇರಿ ತಾಲೂಕಿನ ಮೇಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಸುಮಾರು 11 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ಚಾಲನೆ ನೀಡಿದರು.

2019-20ನೇ ಸಾಲಿನ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಅನುದಾನ ರೂ.1.88 ಕೋಟಿ, ಲೋಕೋಪಯೋಗಿ ಇಲಾಖೆಯ ರೂ.4 ಕೋಟಿ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಅನುದಾನ ರೂ.5 ಕೋಟಿ, ಹೀಗೆ ಒಟ್ಟು ಸುಮಾರು 11 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.

ಇದೇ ಸಂದರ್ಭ 2018-19 ರಲ್ಲಿ ಪೂರ್ಣಗೊಂಡ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.

ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್, ತಾ.ಪಂ. ಸದಸ್ಯೆ ಕುಮುದಾ ರಶ್ಮಿ, ಗ್ರಾ.ಪಂ ಅದ್ಯಕ್ಷೆ ಜಯಂತಿ, ಉಪಾಧ್ಯಕ್ಷ ಭೀಮಯ್ಯ, ಸದಸ್ಯರಾದ ನಾಚಪ್ಪ, ಪ್ರಕಾಶ, ರಕ್ಷಿತ್, ವಾಣಿ ಚರ್ಮಣ, ಅನುಸೂಯ, ಅರ್ಪಿತ, ಬಿಜೆಪಿ ಮಡಿಕೇರಿ ತಾಲೂಕು ಅಧಕ್ಷ ಕಾಂಗೀರ ಸತೀಶ್, ಸ್ಥಾನಿಯ ಸಮಿತಿಯ ಮಾಜಿ ಅಧ್ಯಕ್ಷ ಪರ್ಲಕೋಟಿ ಕಾವೇರಪ್ಪ, ಮಾಜಿ ಕಾರ್ಯದರ್ಶಿ ಕುಮಾರ, ಮೇಕೇರಿ ಸ್ಥಾನಿಯ ಸಮಿತಿಯ ಅಧ್ಯಕ್ಷ ಚೋಂಡಿರ ಕಿರಣ, ಕಾರ್ಯದರ್ಶಿ ಮಂಞ್ಞರ ಉಮೇಶ್, ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಮಂಡುವಂಡ ಜೋಯಪ್ಪ, ಎಇಇ ಶ್ರೀಕಂಠಯ್ಯ, ಹೆಚ್.ಬಿ.ಶಿವರಾಂ, ಜೂನಿಯರ್ ಇಂಜಿನಿಯರ್ ಪ್ರಮೋದ್, ಎಂಜಿಎಸ್‍ವೈನ ಸಹಾಯಕ ಇಂಜಿನಿಯರ್ ಪೂವಯ್ಯ, ಗುತ್ತಿಗೆದಾರರಾದ ರಾಜೀವ್ ಲೋಚನ, ಖದೀರ್, ವಿಜಯ ಭಂಡಾರಿ, ವಸಂತ ಹಾಗೂ ಗ್ರಾಮಸ್ಥರು ಹಾಜರಿದ್ದರು.