*ಗೋಣಿಕೊಪ್ಪಲು, 30: ರಾಯಚೂರು ಜಿಲ್ಲೆಯ ಬೆಳಕು, ಶೈಕ್ಷಣಿಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ಇದರ ವತಿಯಿಂದ ನೀಡುವ ರಾಜ್ಯ ಮಟ್ಟದ ಮಾಂಡವ್ಯ ಮಹರ್ಷಿ ಪ್ರಶಸ್ತಿ ಲೇಖಕಿ ಹಾಗೂ ಪತ್ರಕರ್ತೆ ಕೆ.ಟಿ ವಾತ್ಸಲ್ಯ ಅವರಿಗೆ ಸಂದಿದೆ.

ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಗಿದೆ. ಮಂಡ್ಯ ಜಿಲ್ಲೆಯ ರೈತ ಸಭಾಂಗಣದಲ್ಲಿ ಡಾ. ಸುಕನ್ಯ ಸೂನಗಹಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪಂಚ ಜಿಲ್ಲಾ ಬೆಳಕು ಸಾಹಿತ್ಯ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಈ ಸಂದರ್ಭ ಜಿಲ್ಲೆಯ ಬೆಳಕು, ಶೈಕ್ಷಣಿಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ, ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್, ಡಾ. ಸಿ.ಪಿ. ಕೃಷ್ಣಕುಮಾರ್, ಪೆÇ್ರ. ಮಲೆಯೂರು ಗುರುಸ್ವಾಮಿ, ಸಾಹಿತಿ ಪೀರ್‍ಸಾಬ್ ನದಾಫ್, ವೈಜ್ಞಾನಿಕ ಚಿಂತಕ ಡಾ. ಹುಲಿಕಲ್ ನಟರಾಜ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.