ಮೂರ್ನಾಡು, ಡಿ. 28: ಮೂರ್ನಾಡು ಸಮೀಪದ ಗಾಂಧೀನಗರದ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ದೇವಸ್ಥಾನದ ಸಂಸ್ಥಾಪಕ ಮಹಾಬಲೇಶ್ವರ ಗಾಂವ್ಕರ್ ರಚಿಸಿದ ಪುಸ್ತಕ ‘‘ಜ್ಯೋತಿಷ್ಯ ಸಾಂತ್ವನ-2020’’ ಪುಸ್ತಕವನ್ನು ಸ್ಥಳೀಯ ಸಾಹಿತಿ ಕಿಗ್ಗಾಲು ಗಿರೀಶ್ ಅವರು ಲೋಕಾರ್ಪಣೆ ಮಾಡಿದರು.

ಎಷ್ಟೋ ಸಹಸ್ರ ವರ್ಷಗಳ ಹಿಂದೆಯೇ ಜ್ಯೋತಿಷಿಗಳು ಸೂರ್ಯಗ್ರಹಣ, ಚಂದ್ರಗ್ರಹಣ ಮುಂತಾದ ಖಗೋಳ ವಿದ್ಯಮಾನಗಳನ್ನು ನಿಖರವಾಗಿ ಹೇಳುತ್ತಿದ್ದರು, ಇಂತಹ ಜ್ಯೋತಿಷ್ಯ ಶಾಸ್ತ್ರವು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಮರೆಯಾಗಬಾರದು ಎಂದು ಸಾಹಿತಿ ಕಿಗ್ಗಾಲು ಗಿರೀಶ್ ಪುಸ್ತಕದ ಬಿಡುಗಡೆಯ ನಂತರ ನುಡಿದರು. ಈ ಸಂದರ್ಭ ಫಲತಾಂಬೂಲಗಳಿಂದ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಮಹಾಬಲೇಶ್ವರ ಗಾಂವ್ಕರ್,ಮುಖ್ಯ ಅತಿಥಿಗಳಾಗಿ ಗ್ರೇಸಿ ವಿಜಯ, ರಂಜಿತ್ ಕಿಗ್ಗಾಲ್, ಗೌರಮ್, ಹೇಮಾವತಿ ಶಾಂತರಾಜ್ ಮತ್ತಿತರು ಉಪಸ್ಥಿತರಿದ್ದರು. ಹೇಮಾವತಿ ಶಾಂತರಾಜ್ ಸ್ವಾಗತಿಸಿ, ಜಯಂತಿ ವಂದಿಸಿದರು. ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷ ಪಿ.ಪಿ. ಸುಕುಮಾರ್ ಕಾರ್ಯಕ್ರಮ ನಿರೂಪಿಸಿದರು.