ಮಡಿಕೇರಿ: ಕೊಡಗಿನ ನೆಲ, ಸಂಸ್ಕøತಿ ರಾಜ್ಯದಲ್ಲಷ್ಟೇ ಅಲ್ಲದೆ ಇಡೀ ರಾಷ್ಟ್ರದಲ್ಲೇ ಅತ್ಯಂತ ವಿಶಿಷ್ಟವಾಗಿದ್ದು ಬದಲಾವಣೆಯ ಗಾಳಿ ಬೀಸುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಕೊಡಗಿನ ಸಂಸ್ಕøತಿಯನ್ನು ಸಂರಕ್ಷಿಸಿಕೊಂಡು ಹೋಗುವ ಹೊಣೆ ಬಹುಮುಖ್ಯವಾಗಿ ಇಂದಿನ ಯುವ ಜನರದ್ದಾಗಿದೆ ಎಂದು ಸಾಹಿತಿ ಬನ್ನೂರು ಕೆ. ರಾಜು ಹೇಳಿದರು.
ಕಡಂಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೈಸೂರಿನ ಕಾವೇರಿ ಬಳಗ ಮತ್ತು ಹಿರಣ್ಮಯಿ ಪ್ರತಿಷ್ಠಾನ ಏರ್ಪಡಿಸಿದ್ದ ಸಂಸ್ಕøತಿ ಸೌರಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎನ್. ಕಿರಣ್ ಕಾರ್ಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಕøತಿ ಸೌರಭದಂತಹ ಚಿಂತನಾತ್ಮಕ, ಗುಣಾತ್ಮಕ ಕಾರ್ಯಕ್ರಮಗಳು ಎಲ್ಲೆಡೆ ನಡೆಯುತ್ತಿರಬೇಕು. ವಿಶೇಷವಾಗಿ ಶಾಲೆಗಳಲ್ಲಿ ನಡೆಸುವುದರಿಂದ ಮಕ್ಕಳಿಗೆ ತಮ್ಮ ನೆಲದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕøತಿಯನ್ನು ತಿಳಿದುಕೊಳ್ಳುವುದಕ್ಕೆ ಅನುಕೂಲವಾಗುತ್ತದೆ ಎಂದರು.
ಕಾರ್ಯಕ್ರಮದ ಆಯೋಜನೆಗೆ ಕಾರಣರಾಗಿರುವ ಮೈಸೂರಿನ ಕಾವೇರಿ ಬಳಗದ ಅಧ್ಯಕ್ಷೆ ನಿವೃತ್ತ ಶಿಕ್ಷಕಿ ಎನ್.ಕೆ. ಕಾವೇರಿಯಮ್ಮ ಅವರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚಿತ್ರಕಲಾವಿದೆ ಚಿಂತಕಿ ಡಾ. ಜಮುನಾರಾಣಿ ಮಿರ್ಲೆ ಅವರು ನಿಸ್ಪ್ರಯೋಜಕ ವಸ್ತುಗಳಿಂದಲೂ ಪ್ರಯೋಜನಕಾರಿಯಾದ ಚಿತ್ರಕಲೆ ಮತ್ತು ಸುಂದರ ಕಲಾಕೃತಿಗಳನ್ನು ಹೇಗೆ ತಯಾರಿಸಬಹುದೆಂದು ಪ್ರಾತ್ಯಕ್ಷಿಕೆ ನೀಡಿದರು.
ಇದೇ ವೇಳೆ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತ ವಿದ್ಯಾರ್ಥಿಗಳಾದ ವಿ. ಸಂಗೀತಾ, ಜಾನಕಿ, ಎಂ.ವಿ. ಸಿಂಚನಾ, ಅದ್ಮಿನಾ, ಸಹನಾ ಸರೀನ್, ಅಜಯ್, ವಿನಾಯಕ, ಹಸರಿನಾ, ಅಭಿಷೇಕ್, ಅಶ್ವಿನ್ ಅವರಿಗೆ ಬಹುಮಾನ ನೀಡಿಲಾಯಿತಲ್ಲದೆ ಕಳೆದ ಸಾಲಿನಲ್ಲಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ತೇಜಸ್ವಿನಿ, ಕೃತಿಕಾ, ಸಹನಾ ಸಾಹರಿ ಅವರುಗಳನ್ನು ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ, ಶಿಕ್ಷಣ ತಜ್ಞ ಎ. ಸಂಗಪ್ಪ, ಮುಖ್ಯ ಶಿಕ್ಷಕಿ ವೈ.ಎ. ತಂಗಮ್ಮ, ಶಿಕ್ಷಕರಾದ ಬಿ.ಎ. ಉತ್ತಪ್ಪ, ಕೆ.ಎಂ. ವಿಮಲ, ವತ್ಸಲಾ ಶ್ರೀಶ, ಕವಿ ಪಿ.ಎಸ್. ವೈಲೇಶ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್‍ಡಿಎಂಸಿ ಉಪಾಧ್ಯಕ್ಷೆ ಎಂ.ಎ. ಇಂದಿರಾ ಶುಭ ಹಾರೈಸಿದರು.
ಸೋಮವಾರಪೇಟೆ: ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್, ರೋಟರಿ ಹಿಲ್ಸ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ವಿಜ್ಞಾನ ಪ್ರಾತ್ಯಕ್ಷಿತೆಯಲ್ಲಿ ಐಗೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳಾದ ಕೆ.ಆರ್. ಹರ್ಷಿತ ಹಾಗೂ ಇ.ಕೆ. ಫಾತಿಮತ್ ಶಿಬಿಲ ಪ್ರಥಮ ಸ್ಥಾನ ಪಡೆದರು. ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆಯ ಆನಾಜ್ ಮತ್ತು ಅಭಿಷೇಕ್ ದ್ವಿತೀಯ ಸ್ಥಾನ ಪಡೆದರು.
ಆವರ್ತ ಕೋಷ್ಠಕ ರಚಿಸುವಿಕೆಯಲ್ಲಿ ಮಾದಾಪುರ ಸರಕಾರಿ ಪ್ರೌಢಶಾಲೆಯ ಎ.ಎಲ್. ಶ್ರಾವ್ಯ ಮತ್ತು ಎನ್.ಜೆ. ಪೃಥ್ವಿ ಪ್ರಥಮ ಸ್ಥಾನ ಪಡೆದರೆ, ಐಗೂರು ಪ್ರೌಢಶಾಲೆಯ ಟಿ.ಎ. ಆದರ್ಶ ಮತ್ತು ಬಿ.ಕೆ. ಚೇತನ್ ದ್ವಿತೀಯ ಸ್ಥಾನ ಪಡೆದರು. ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಶನಿವಾರಸಂತೆ ವಿಘ್ನೇಶ್ವರ ಪ್ರೌಢಶಾಲೆಯ ಕವನ್ ಹಾಗೂ ಸುಚಿತ್ರ ಪ್ರಥಮ ಸ್ಥಾನಗಳಿಸಿದರೆ, ಆಲೂರು-ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ಪ್ರಜ್ವಲ್ ಹಾಗೂ ಶಾಲಿನಿ ದ್ವಿತೀಯ ಸ್ಥಾನ ಪಡೆದರು.
ಸ್ವಾಮಿ ವಿವೇಕಾನಂದÀ ಯೂತ್ ಮೂವ್‍ಮೆಂಟ್‍ನ ಸಂಚಾಲಕ ಬಿ.ಎಸ್ ಸದಾನಂದ, ರೋಟರಿ ಸಂಸ್ಥೆ ಅಧ್ಯಕ್ಷ ಡಿ.ಪಿ. ರಮೇಶ್ ಬಹುಮಾನ ವಿತರಿಸಿದರು. ಮಂಜುನಾಥ್ ಉಪಸ್ಥಿತರಿದ್ದರು.
ಚೆಟ್ಟಳ್ಳಿ: ಪ್ರಶಸ್ತಿ ಪಡೆದ ಎಲಿಯಂಗಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಸುಬ್ರಮಣ್ಯ ಹಾಗೂ ನಟರಾಜ್ ಇವರಿಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಸನ್ಮಾನಿಸಿದರು.
ಅಮ್ಮತ್ತಿ ವಲಯ ಸಂಪನ್ಮೂಲ ವ್ಯಕ್ತಿ ಶುಷ, ಕೆ.ಎ. ಅಬ್ದುಲ್ಲಾ, ಶಿಯಾಬುದ್ಧೀನ್ ಮುಸ್ಲಿಯಾರ್, ಷಂಶುದ್ದೀನ್, ಅಬ್ದುಲ್ ರಹ್ಮಾನ್, ಆಡಳಿತ ಮಂಡಳಿ ಅಧ್ಯಕ್ಷ ಹಂಸ, ಗ್ರಾಮ ಪಂಚಾಯಿತಿ ಸದಸ್ಯರಾದ ಲೋಕೇಶ್, ಯೂಸುಫ್, ಅಭಿವೃದ್ಧಿ ಅಧಿಕಾರಿ ಕಾಂಚನ ಇದ್ದರು.
ಗೋಣಿಕೊಪ್ಪ ವರದಿ: ಇಲ್ಲಿನ ಕಾವೇರಿ ಕಾಲೇಜು ಬಿಸಿಎ ವಿಭಾಗದಿಂದ ಇತ್ತೀಚೆಗೆ ಆಯೋಜಿಸಿದ್ದ ಅಚಿಂತ್ಯ ಟೆಕ್‍ಫೆಸ್ಟ್‍ನಲ್ಲಿ ಭಾಗವಹಿಸಿದ್ದ ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಪಿ.ಯು. ಕಾಲೇಜು ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಆ ಮೂಲಕ ಸತತ ಎರಡು ವರ್ಷ ಈ ಸಾಧನೆ ಮಾಡಿದೆ.
ಗೇಮ್ ಆನ್ ಸ್ಪರ್ಧೆ, ಟ್ರೆಷರ್ ಮೇನಿಯಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಬಾಂಬ್ ಶೆಲ್ ಹಾಗೂ ಡಾನ್ಸ್ ಬ್ಯಾಟಲ್‍ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಳ್ಳುವ ಮೂಲಕ 4 ಬಹುಮಾನಗಳೊಂದಿಗೆ ಚಾಂಪಿಯನ್ ಪ್ರಶಸ್ತಿ ತನ್ನದಾಗಿಸಿಕೊಂಡಿತು. 14 ವಿದ್ಯಾರ್ಥಿಗಳು ಸ್ಫರ್ಧೆಯಲ್ಲಿ ಪಾಲ್ಗೊಂಡಿದ್ದರು. ಕಾಲೇಜು ವತಿಯಿಂದ ಗೌರವಿಸಿದ ಸಂದರ್ಭ ಪ್ರಾಂಶುಪಾಲೆ ಡಾ. ಸಣ್ಣುವಂಡ ರೋಹಿಣಿ ತಿಮ್ಮಯ್ಯ, ವಿಜ್ಞಾನ ಉಪನ್ಯಾಸಕಿ ರಾಧಿಕಾ ಕುಟ್ಟಪ್ಪ ಇದ್ದರು.ಮಡಿಕೇರಿ: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್‍ಎಂಎಸ್‍ಎ) ನೂತನ ಕಟ್ಟಡ ಹಾಗೂ ಸಭಾಂಗಣ ಉದ್ಘಾಟನೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ (ಎನ್‍ಎಸ್‍ಎಸ್) ಘಟಕದ ಉದ್ಘಾಟನಾ ಸಮಾರಂಭ ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿ ಕೊಂಡು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು. ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ವಿದ್ಯಾರ್ಥಿಗಳು ಸೇವಾ ಮನೋಭಾವನೆ ಬೆಳೆಸಿಕೊಳ್ಳುತ್ತಾ ಸಮಾಜ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಅಧ್ಯಕ್ಷತೆಯನ್ನು ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಸುನೀತಾ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಮೇಕೇರಿ ಗ್ರಾ.ಪಂ. ಉಪಾಧ್ಯಕ್ಷ ಭೀಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಸುಕುಮಾರ್, ಜಿಲ್ಲಾ ಶಿಕ್ಷಣ ಸಂಯೋಜಕ ಕಾಶಿನಾಥ್, ದೈಹಿಕ ಶಿಕ್ಷಣ ಪರಿವೀಕ್ಷಕ ವೆಂಕಟೇಶ್, ಎಸ್.ಡಿ.ಎಂ.ಸಿ. ಗೌರವ ಅಧ್ಯಕ್ಷ ಅಬೂಬಕರ್, ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗೋಣಿಕೊಪ್ಪ ವರದಿ: ವೀರಾಜಪೇಟೆ ಕಾವೇರಿ ಪದವಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರ ಹಾತೂರು ಪ್ರೌಢಶಾಲೆಯಲ್ಲಿ ಆರಂಭಗೊಂಡಿದ್ದು, ವಿವಿಧ ಕಾರ್ಯಕ್ರಮಗಳ ಮೂಲಕ ಗ್ರಾಮದಲ್ಲಿ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಕಾರ್ಯಕ್ರಮವನ್ನು ಕಾಲೇಜು ನಿವೃತ್ತ ಪ್ರಾಧ್ಯಾಪಕಿ ಪಿ.ಎ. ಸುಶೀಲ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ಮಿತ್ರತ್ವ, ಏಕಾಗ್ರತೆ, ಸಮಯ ಪಾಲನೆ ಮೈಗೂಡಿಸಿಕೊಳ್ಳಲು ಶಿಬಿರಗಳು ಸಹಕಾರಿಯಾಗಲಿವೆ. ಜಾತಿ ಮನೋಭಾವನೆಯನ್ನು ತೊಡೆದು ಹಾಕುವಲ್ಲಿ ಹೆಚ್ಚು ಪ್ರಯೋಜನಕಾರಿ. ಸಮಯ ಪ್ರಜ್ಞೆ ಹಾಗೂ ಪರಿಸರ ಪ್ರೇಮ ರೂಡಿಸಿಕೊಳ್ಳಬೇಕು ಎಂದರು.
ಕಾವೇರಿ ಎಜುಕೇಶನ್ ಸೊಸೈಟಿ ನಿರ್ದೇಶಕ ಇಟ್ಟೀರ ಕೆ. ಬಿದ್ದಪ್ಪ ಮಾತನಾಡಿ, ಸೇವಕರು ಸೈನ್ಯಕ್ಕೆ ಸೇರಲು ಉತ್ಸುಕರಾಗಬೇಕು ಎಂದರು. ಸ್ಥಳೀಯರಾದ ಗಣಪತಿ ಹಾಗೂ ಮಹೇಶ್ ಅವರ ಮಾರ್ಗದರ್ಶನದಲ್ಲಿ ಗೋಣಿಕೊಪ್ಪ ಮುಖ್ಯ ರಸ್ತೆಯ ಬದಿಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಈ ಸಂದರ್ಭ ಗ್ರಾಮದ ಪ್ರಮುಖರಾದ ಗುಮ್ಮಟ್ಟೀರ ದರ್ಶನ್, ಮುಕ್ಕಾಟೀರ ಸುಬ್ರಮಣಿ, ಶ್ರೀನಿವಾಸ್, ಪಾಲಚಂಡ ಜಗನ್, ಕೊಡಂದೇರ ಮಾದಪ್ಪ, ಪ್ರಾಂಶುಪಾಲೆ ಇಟ್ಟೀರ ಕಮಲಾಕ್ಷಿ, ಯೋಜನಾಧಿಕಾರಿಗಳಾದ ನಾಗರಾಜು, ನಿರ್ಮಿತಾ ಉಪಸ್ಥಿತರಿದ್ದರು.
ನಾಪೋಕ್ಲು: ಶ್ರದ್ಧೆ ನಿಷ್ಠೆ, ಶ್ರಮ ಇವುಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡಿದ್ದೇ ಆದರೆ ಯಶಸ್ಸು ಸಾಧ್ಯ ಎಂದು ಬೆಂಗಳೂರಿನ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ನ ಉಪಾಧ್ಯಕ್ಷ ಅಪ್ಪಚೆಟ್ಟೋಳಂಡ ಸೋಮಣ್ಣ ಹೇಳಿದರು.
ಇಲ್ಲಿನ ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಹಳೆ ವಿದ್ಯಾರ್ಥಿಗಳ ಸಮಾಗಮ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಅಭಿವೃದ್ಧಿಗೆ ಸಹಕರಿಸುವುದರೊಂದಿಗೆ ಸಮಾಜಮುಖಿ ಕಾರ್ಯಗಳಿಗೆ ಒತ್ತು ನೀಡುವಂತಾಗಬೇಕು ಎಂದರು. ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷ ಪ್ರೊ. ಕಲ್ಯಾಟಂಡ ಪೂಣಚ್ಚ ಮಾತನಾಡಿ, ಶಾಲೆಯ ಸ್ಥಾಪಕ ಅಧ್ಯಕ್ಷ ಮೇಕೇರಿರ ಕಾರ್ಯಪ್ಪ ನ್ಯಾಯ, ನಿಷ್ಠೆಯ ವ್ಯಕ್ತಿಯಾಗಿದ್ದರು. ಅವರ ಆದರ್ಶ ಗುಣಗಳು ಸದಾ ಸ್ಮರಣೀಯ ಎಂದರು.
ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ. ಬೊಪ್ಪಂಡ ಜಾಲಿ ಬೋಪಯ್ಯ, ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ಕಾರ್ಯದರ್ಶಿ ಬಿದ್ದಾಟಂಡ ಪಾಪ ಮುದ್ದಯ್ಯ, ನಿರ್ದೇಶಕರಾದ ನಾಯಕಂಡ ದೀಪು ಚೆಂಗಪ್ಪ, ಅರೆಯಡ ಸೋಮಪ್ಪ, ಬಿದ್ದಾಟಂಡ ಮುತ್ತಣ್ಣ, ಬಿದ್ದಾಟಂಡ ಪಾಪ ಮುದ್ದಯ್ಯ, ಅಪ್ಪಾರಂಡ ಅಪ್ಪಯ್ಯ, ಬೊಪ್ಪಂಡ ಕುಶಾಲಪ್ಪ, ಪ್ರಾಂಶುಪಾಲೆ ಬಿ.ಎಂ. ಶಾರದ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಕೋಟೆರ ದಿಲೀಪ್ ದೇವಯ್ಯ, ಲತೇಶ್, ಅಪ್ಪಾರಂಡ ಚೇತನ್, ಡಾ. ಸಫಿಯ, ರೋಶನ್, ಮೇಜರ್ ಶಿವಚಾಳಿಯಂಡ ಗಿರೀಶ್, ಧನ್ಯ, ಬಲ್ಲಚಂಡ ಪೊನ್ನಮ್ಮ, ತಡಿಯಂಗಡ ಸೌಮ್ಯ, ಕೈಬುಲಿರ ಕುಟ್ಟಪ್ಪ, ಕೇಟೋಳಿರ ಅರುಣ್ ದೇವಯ್ಯ, ಕುಲ್ಲೇಟಿರ ದರ್ಶನ್ ಪೊನ್ನಣ್ಣ, ಇವರನ್ನು ಸನ್ಮಾನಿಸಲಾಯಿತು. ಬಳಿಕ ಸನ್ಮಾನಿತರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಹಳೆ ವಿದ್ಯಾರ್ಥಿನಿ ಕೃಪಾಲಿ ಪ್ರಾರ್ಥಿಸಿದರು. ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಡಾ. ಕೆ.ಎಂ. ಬೋಪಣ್ಣ ಸ್ವಾಗತಿಸಿ, ಕಾರ್ಯದರ್ಶಿ ಬಾಳೆಯಡ ಪ್ರತೀಶ್ ವಂದಿಸಿದರು. ಬಳಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಗೋಣಿಕೊಪ್ಪ ವರದಿ: ಗೋಣಿಕೊಪ್ಪ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಯೋಜಿಸಿದ್ದ ಚಿಗುರು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ನೂರಾರು ಯುವ ಕಲಾವಿದರು ಪಾಲ್ಗೊಂಡು ಕಲೆ ಅನಾವರಣಗೊಳಿಸಿದರು.
ಸ್ಥಳೀಯ ವಿದ್ಯಾರ್ಥಿಗಳು ಸೇರಿದಂತೆ ಮೈಸೂರು, ಹುಣಸೂರು ಭಾಗದ ಯುವ ಕಲಾವಿದರುಗಳು ಸುಗಮ ಸಂಗೀತ, ಜಾನಪದ ಗೀತೆ, ಕೊಳಲು ವಾದನ, ಶಾಸ್ತ್ರೀಯ ಸಂಗೀತ, ಕೋಲಾಟ, ಜಾನಪದ ನೃತ್ಯ, ಸಮೂಹ ನೃತ್ಯ, ಭರತನಾಟ್ಯ, ಹಾಡುಗಾರಿಕೆ ಮತ್ತು ಚಿತ್ರಕಲೆ ಪ್ರದರ್ಶನ ನೀಡಿದರು. ವಿಜಯ ಸೂರ್ಯ ಅವರಿಂದ ಕೊಳಲು ವಾದನ, ಶ್ರೀ ದುರ್ಗ ನೃತ್ಯ ಮಂಡಳಿ ತಂಡದಿಂದ ಶಾಸ್ತ್ರೀಯ ಸಂಗೀತ, ರುಚಿತಾ ರಾಜೇಶ್ ತಂಡದ ಸುಗಮ ಸಂಗೀತ, ನಯನಾ ನಾಗರಾಜ್ ತಂಡದ ಜನಪದ ಗೀತೆ, ವೈಷ್ಣವಿ ತಂಡದ ಶಾಸ್ತ್ರೀಯ ನೃತ್ಯ, ಸ್ಥಳೀಯ ವಿದ್ಯಾರ್ಥಿಗಳ ಸಮೂಹ ನೃತ್ಯ ಗಮನ ಸೆಳೆಯಿತು.
ಹಲವು ಸಂಗೀತ ಕಾರ್ಯಕ್ರಮ ನೀಡಿರುವ ಹಾಡುಗಾರರಾದ ನಯನಾ ನಾಗರಾಜ್, ರುಚಿತಾ ಅವರುಗಳು ಹಾಡಿನ ಮೂಲಕ ಮನಸೆಳೆದರು. ನಾಡಗೀತೆ ಮೂಲಕ ಆರಂಭಗೊಂಡ ಕಾರ್ಯಕ್ರಮದಲ್ಲಿ ಹಾಡುಗಳು ಹೆಚ್ಚು ಗಮನ ಸೆಳೆಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಕೆ.ಆರ್. ಶಾಂತಿ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ ಮಾತನಾಡಿ, ನಾಡಿನ ಕಲೆಯನ್ನು ಗಟ್ಟಿಗೊಳಿಸಲು ಸಣ್ಣ ಮಕ್ಕಳಲ್ಲಿ ಕಲೆಯ ಬಗ್ಗೆ ಆಸಕ್ತಿ ಹುಟ್ಟುಹಾಕಲು ಚಿಗುರು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸಮಾಜದಲ್ಲಿ ಕಲೆ, ಸಂಸ್ಕøತಿ ಉಳಿಸಿಕೊಳ್ಳಲು ಸಹಕಾರಿಯಾಗುತ್ತಿದೆ ಎಂದರು.
ಈ ಸಂದರ್ಭ ಶಾಲಾ ಮುಖ್ಯಶಿಕ್ಷಕಿ ಕೆ.ಆರ್. ಶಶಿಕಲಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರ. ಕಾರ್ಯದರ್ಶಿ ಟಿ.ಡಿ. ರಮಾನಂದ, ಸರ್ಕಾರಿ ನೌಕರರ ಸಂಘದ ರಾಜ್ಯ ನಿರ್ದೇಶಕ ಎ.ವಿ. ಮಂಜುನಾಥ್, ಸಮೂಹ ಸಂಪನ್ಮೂಲ ವ್ಯಕ್ತಿ ಹೆಚ್.ಹೆಚ್. ಜ್ಯೋತೀಶ್ವರಿ, ಕಲಾವಿದ ಬಿ.ಆರ್. ಸತೀಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ಜಪ್ಪು ಸುಬ್ಬಯ್ಯ ಉಪಸ್ಥಿತರಿದ್ದರು.
ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಜಯನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಕ್ರೀಡಾ ಸಾಮಗ್ರಿಗಳನ್ನು ಜಿ.ಪಂ. ಸದಸ್ಯೆ ಕೆ.ಆರ್. ಮಂಜಳಾ ವಿತರಣೆ ಮಾಡಿದರು. ಈ ಸಂದರ್ಭ ಶಾಲಾ ಶಿಕ್ಷಕರ ವೃಂದದವರು ಹಾಜರಿದ್ದರು.
ಮಡಿಕೇರಿ: ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಬ್ಲಾಸಂ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಹಾಗೂ ಶಾಲೆಯ ಅಧ್ಯಕ್ಷೆ ಅನೀಸ್ ಕಣ್ಮಣಿÂ ಜಾಯ್, ಆಫೀಸರ್ಸ್ ಕ್ಲಬ್ ವತಿಯಿಂದ ಉತ್ತಮ ರೀತಿಯಲ್ಲಿ ಶಾಲೆಯು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಶಾಲೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ಮಕ್ಕಳ ಉತ್ತಮ ಭವಿಷ್ಯ ಶಾಲೆಯಲ್ಲಿ ರೂಪುಗೊಳ್ಳುತ್ತದೆ. ಶಿಕ್ಷಕರ ಹಾಗೂ ಪೋಷಕರ ಪಾತ್ರವು ವಿದ್ಯಾರ್ಥಿಗಳ ಭವಿಷ್ಯ ರೂಪುಗೊಳ್ಳುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಅನಸೂಯ ಶಾಲಾ ವಾರ್ಷಿಕ ವರದಿ ಮಂಡಿಸಿದರು. ವಿವಿಧ ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಯೋಗಾಧಿಕಾರಿ ಹಾಗೂ ಆಫೀಸರ್ಸ್ ಕ್ಲಬ್ ಖಜಾಂಚಿ ಜಗನ್ನಾಥ್, ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ನಗರಸಭೆ ಆಯುಕ್ತ ರಮೇಶ್ ಹಾಗೂ ಇತರರು ಇದ್ದರು.ಕುಶಾಲನಗರ: ಶಿಕ್ಷಣವನ್ನು ಕೇವಲ ಅಂಕಗಳಿಗೆ ಸೀಮಿತಗೊಳಿಸದೆ ಮೌಲ್ಯಯುತ ಗುಣಗಳನ್ನು ಬಿತ್ತುವ ಮೂಲಕ ಮಕ್ಕಳನ್ನು ಸಮಾಜದ ಆಸ್ತಿಯಾಗಿ ರೂಪಿಸಬೇಕಿದೆ ಎಂದು ಮೈಸೂರಿನ ಡಯಟ್ ಹಿರಿಯ ಉಪನ್ಯಾಸಕ ಸಿ.ಆರ್. ನಾಗರಾಜಯ್ಯ ಹೇಳಿದರು.
ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆದ ಕೂಡ್ಲೂರಿನ ಯೂನಿಕ್ ಅಕಾಡೆಮಿ ಶಿಕ್ಷಣ ಸಂಸ್ಥೆಯ 10ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕತೆಗೆ ಮಾರುಹೋಗುತ್ತಿರುವ ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯ ಮತ್ತು ದೈಹಿಕ ಆರೋಗ್ಯ ಕ್ಷೀಣಿಸುತ್ತಿದೆ. ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ರೂಢಿಗತಗೊಳಿಸಬೇಕು. ದುಶ್ಚಟಗಳು, ಸಂಸಾರದ ಸಮಸ್ಯೆಗಳನ್ನು ಮಕ್ಕಳ ಗಮನಕ್ಕೆ ತರದೆ ಅವರ ಮುಂದೆ ಸ್ಪೂರ್ತಿದಾಯಕ ವಿಚಾರಗಳ ಬಗ್ಗೆ ಚರ್ಚಿಸಬೇಕಿದೆ. ಸದಾ ಅವರನ್ನು ಕ್ರಿಯಾಶೀಲರಾಗಿಸುವ ಮೂಲಕ ಸಕಾರಾತ್ಮಕ ಚಿಂತನೆಗಳು ಒಡಮೂಡಿಸಲು ಸಹಕಾರಿಗಳಾಗಬೇಕಿದೆ ಎಂದರು.
ಸಂಸ್ಥೆಯ ಮುಖ್ಯಸ್ಥ ರವಿ ತೊರೆನೂರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಣ ಸಂಯೋಜಕಿ ಎ.ಎಸ್. ಸುಪ್ರಿತಾ ಶಾಲೆಯ ವರದಿ ವಾಚನ ಮಾಡಿರದು. ದೈಹಿಕ ಶಿಕ್ಷಣ ಶಿಕ್ಷಕ ಚೇತನ್ ಕ್ರೀಡಾ ವರದಿ ವಾಚಿಸಿದರು.
ಇದೇ ಸಂದರ್ಭ ಅತ್ಯುತ್ತಮ ಅಂಕಗಳಿಸಿದ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಸಂಸ್ಥೆಯ ಮುಖ್ಯ ಶಿಕ್ಷಕಿ ನೇತ್ರಾವತಿ ಸೇರಿದಂತೆ ಶಿಕ್ಷಕ ವೃಂದ, ವಿದ್ಯಾರ್ಥಿಗಳ ಪೋಷಕರು ಇದ್ದರು.
*ಗೋಣಿಕೊಪ್ಪಲು: ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ 10 ದಿನಗಳ ಕಾಲ ನಡೆಯುವ ಎನ್‍ಸಿಸಿ ಕ್ಯಾಂಪ್ ಆರಂಭಗೊಂಡಿದೆ. ಶಿಬಿರದಲ್ಲಿ ಕೊಡಗು ಸೇರಿದಂತೆ ಪುತ್ತೂರು, ಮಂಗಳೂರು, ಸುಳ್ಯ ಭಾಗದ 600 ಕೆಡೆಟ್‍ಗಳು ಹಾಗೂ 35 ಎನ್‍ಸಿಸಿ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.
ಶಿಬಿರದಲ್ಲಿ ಪ್ರತಿ ದಿನ ಫೈರಿಂಗ್, ಡ್ರಿಲ್, ಮ್ಯಾಪ್ ರೀಡಿಂಗ್, ಉಪನ್ಯಾಸ ನಡೆಯಲಿದೆ ಎಂದು ಕೂರ್ಗ್ ಪಬ್ಲಿಕ್ ಶಾಲೆ ಎನ್‍ಸಿಸಿ ಅಧಿಕಾರಿ ಬಿ.ಎಂ. ಗಣೇಶ್ ತಿಳಿಸಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ನವದೀಪ್‍ಸಿಂಗ್ ಬೇಡಿ, ಲೆಫ್ಟಿನೆಂಟ್ ಕರ್ನಲ್ ಸ್ವಿಕೇರಾ, ಡೆಪ್ಯೂಟಿ ಕ್ಯಾಂಪ್ ಕಮಾಡೆಂಟ್ ಕ್ಯಾಪ್ಟನ್ ದಿನೇಶ್ ಪಾಲ್ಗೊಂಡಿದ್ದಾರೆ.
ಶನಿವಾರಸಂತೆ: ವಿದ್ಯಾರ್ಥಿಗಲ್ಲಿ ಕಲಿಯುವ ಸಾಮಥ್ರ್ಯಕ್ಕಿಂತ ಕಲಿಕೆಯ ಬಗ್ಗೆ ಆಸಕ್ತಿ ಮುಖ್ಯವಾಗಿರುತ್ತದೆ ಎಂದು ಕೂಡಿಗೆ ಡಯಟ್‍ನ ಉಪನ್ಯಾಸಕ ಶಿವಕುಮಾರ್ ತಿಳಿಸಿದರು.
ಪಟ್ಟಣದ ಶ್ರೀ ವಿಘ್ನೇಶ್ವರ ಬಾಲಿಕಾ ವಿದ್ಯಾಸಂಸ್ಥೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ವೇದಿಕೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜ್ಞಾನ, ವಿದ್ಯೆಯನ್ನು ಸಂಪಾದಿಸುವುದೇ ವಿದ್ಯಾರ್ಥಿಯ ಗುರಿಯಾಗಿರಬೇಕು. ಕಲಿಕೆಗೆ ಆದ್ಯತೆ ನೀಡಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆ ನಿರ್ದೇಶಕ ಗೋವಿಂದೇಗೌಡ ಮಾತನಾಡಿ, ಶಿಕ್ಷಣದಿಂದ ಹೆಣ್ಣು ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ. ಪೋಷಕರು ಹೆಣ್ಣು ಮಕ್ಕಳಿಗೆ ಆಸ್ತಿ, ಬಂಗಾರ ಕೊಡುವ ಬದಲು ಉತ್ತಮ ಶಿಕ್ಷಣ ಕೊಡಿ ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ, ತಾಲೂಕು ಪಂಚಾಯಿತಿ ಸದಸ್ಯ ಬಿ.ಎಸ್. ಅನಂತಕುಮಾರ್, ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್, ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್ ಮಾತನಾಡಿದರು.
ವಿದ್ಯಾಸಂಸ್ಥೆಯ ಸಂಸ್ಥಾಪನಾ ಕಾರ್ಯದರ್ಶಿ ದಿ. ಡಿ.ಕೆ. ಗಣೇಶ್ ಸ್ಮರಣಾರ್ಥ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಂಸ್ಕøತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು.
ಸಂಸ್ಥೆ ಉಪಾಧ್ಯಕ್ಷ ಕೆ.ಈ. ಕೃಷ್ಣರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿರ್ದೇಶಕ ಸಿ.ಎನ್. ಬೆಳಿಯಪ್ಪ ಪ್ರಾಸ್ತಾವಿಕ ನುಡಿಯಾಡಿದರು. ಅಧ್ಯಕ್ಷ ಬಿ.ಕೆ. ಸುಬ್ರಮಣ್ಯ, ನಿರ್ದೇಶಕರು, ಪ್ರಾಂಶುಪಾಲ ಟಿ.ಪಿ. ಶಿವಪ್ರಕಾಶ್, ಸಂಪನ್ಮೂಲ ವ್ಯಕ್ತಿ ಜಾನ್‍ಪಾಲ್ ಡಿಸೋಜ, ಉಪನ್ಯಾಸಕರಾದ ನಿತ್ಯಾನಿಧಿ, ಮಹಮ್ಮದ್ ಜಹೀರ್, ಮುಖ್ಯ ಶಿಕ್ಷಕ ಷಣ್ಮುಖ, ಎಸ್.ಡಿ.ಎಂ.ಸಿ. ಅಧ್ಯಕ್ಷ ಸಿ.ಆರ್. ಸತೀಶ್, ಪ್ರಮುಖರಾದ ಯಶೋದಾ ಗಣೇಶ್, ಸುಮತಿ ಸತೀಶ್, ಉಮಾಶಂಕರ್ ಉಪಸ್ಥಿತರಿದ್ದರು.
ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಆಶ್ರಮ ಶಾಲೆಯ ಸುಮಾರು 198 ಮಕ್ಕಳಿಗೆ ಬೈಲಕೊಪ್ಪದ ಟಿಬಿಟಿಯನ್ ಡೈಕೊಂಗ್ ಚಾರಿಟೇಬಲ್ ಸೊಸೈಟಿ ವತಿಯಿಂದ ಬಟ್ಟೆಗಳನ್ನು ಮತ್ತು ಶೂಗಳನ್ನು ವಿತರಿಸಲಾ�