ಮಡಿಕೇರಿ, ಡಿ. 27: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಸೋಮವಾರ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ನಡೆಯಿತು. ಉದ್ಯೋಗ ಮೇಳದಲ್ಲಿ ಮೆಡಿಸೇವ್ ಹೆಲ್ತ್, ರಾಮನಗರ, ಸಿಐಪಿಇಟಿ, ಮೈಸೂರು, ಹಿಮಸ್ತಾಸಿಂಗ ಲೈನ್ಸ್, ಹಾಸನ, ಬಿಎಸ್‍ಎಲ್ ಇಂಡಿಯಾ ಪ್ರೈ.ಲಿ. ಉಡುಪಿ ಹಾಗೂ ಯುಬಿಇಆರ್ ಇಂಡಿಯಾ ಪ್ರೈ.ಲಿ., ಬೆಂಗಳೂರು ಸಂಸ್ಥೆಗಳು ಭಾಗವಹಿಸಿದ್ದವು.