ಮಡಿಕೇರಿ, ಡಿ. 27: ಅಮ್ಮತ್ತಿ ಕೊಡವ ಸಮಾಜದ ವತಿಯಿಂದ ಪುತ್ತರಿ ಊರೊರ್ಮೆ ಕಾರ್ಯಕ್ರಮ ಹಾಗೂ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಜರುಗಿತು. ಸಮಾಜದ ಅಧ್ಯಕ್ಷ ಮೂಕೋಂಡ ಬೋಸ್ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ಸಭಾ ಕಾರ್ಯಕ್ರಮದೊಂದಿಗೆ; ಕೋಲಾಟ ಸೇರಿದಂತೆ ವಿವಿಧ ಜನಪದ ಪ್ರದರ್ಶನ ನೆರವೇರಿತು.
ಈ ಸಂದರ್ಭ ಈ ಹಿಂದಿನ ಉಸ್ತುವಾರಿ ಸಚಿವರಾಗಿದ್ದ ಎಂ.ಆರ್. ಸೀತಾರಾಮ್ ಅವರ ಆಪ್ತ ಕಾರ್ಯದರ್ಶಿಯಾಗಿದ್ದು; ಸಮಾಜದ ನೂತನ ಕಟ್ಟಡ ನಿರ್ಮಾಣಕ್ಕೆ ರೂ. 10 ಲಕ್ಷ ಅನುದಾನ ಕಲ್ಪಿಸಲು ನೆರವಾಗಿದ್ದ ಕದ್ದಣಿಯಂಡ ಹರೀಶ್ ಬೋಪಣ್ಣ, ದೆಹಲಿ ಕೊಡವ ಸಮಾಜದ ಅಧ್ಯಕ್ಷ ಮಾಚಿಮಂಡ ತಮ್ಮಯ್ಯ, ಇನ್‍ಫೋಸಿಸ್‍ನ ನಿವೃತ್ತ ಉಪಾಧ್ಯಕ್ಷ ಮಾಚಿಮಂಡ ಮೋಹನ್ ಮಾದಪ್ಪ ಹಾಗೂ ಐನಂಡ ಗೌರಮ್ಮ ಪೊನ್ನಪ್ಪ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಟ್ಟಡ ಉದ್ಘಾಟಿಸಿದ ಹರೀಶ್ ಬೋಪಣ್ಣ ಅವರು ಮಾತನಾಡಿ ಜನಾಂಗದ ಅಭಿವೃದ್ಧಿ ಹಾಗೂ ಕೊಡಗಿನ ಏಳಿಗೆಗೆ ಕೈಜೋಡಿಸುವಂತೆ ಕರೆ ನೀಡಿದರು.
ಈ ಸಂದರ್ಭ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಕಡ್‍ಂಬುಟ್ಟ್ ಉರ್‍ಟ್‍ವ ಸ್ಪರ್ಧೆ ಆಯೋಜಿಸಲಾಗಿತ್ತು. ಕುಂಞಂಡ ಲಾಲಿಪೂಣಚ್ಚ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಮುಂಡೋಣಿಯ ಐನಂಡ ಜಾಲಿ ತಂಡದಿಂದ ದುಡಿಕೊಟ್ಟ್‍ಪಾಟ್, ಹೊಸೂರುವಿನ ಮಕ್ಕಳಿಂದ ನೃತ್ಯ, ಕಾವಾಡಿ- ಕಾರ್ಮಾಡು ತಂಡದಿಂದ ಕೋಲಾಟ್, ಕಪ್ಪೆಯಾಟ್, ಪರೆಯಕಳಿ, ವೀರಾಜಪೇಟೆ ಕಾವೇರಿ ಕಾಲೇಜು ತಂಡದಿಂದ ಉಮ್ಮತ್ತಾಟ್ ಪ್ರದರ್ಶನ ನಡೆಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಮೂಕೋಂಡ ಸಾವರಿ ದೇಚಮ್ಮ ಪ್ರಾರ್ಥಿಸಿ, ಬೋಸ್ ದೇವಯ್ಯ ಸ್ವಾಗತಿಸಿದರು. ನಿರ್ದೇಶಕಿ ಮಚ್ಚಾರಂಡ ಶಾಲಿ ಬೋಪಣ್ಣ ಬಹುಮಾನ ವಿಜೇತರ ಪಟ್ಟಿ ನೀಡಿದರು. ನೆಲ್ಲಮಕ್ಕಡ ಸಂಪತ್ ದೇವಯ್ಯ ವಂದಿಸಿದರು. ಸಮಾಜದ ಉಪಾಧ್ಯಕ್ಷ ಮೊಳ್ಳೆರ ಸದಾ ಅಪ್ಪಚ್ಚು, ಖಜಾಂಚಿ ಕುಟ್ಟಂಡ ಬೋಜು, ಅಯ್ಯಪ್ಪ, ನಿರ್ದೇಶಕರಾದ ಬಲ್ಲಟಿಕಾಳಂಡ ರವಿ ಮೇದಪ್ಪ, ಪಾಲಚಂಡ ಮನು ಮುತ್ತಣ್ಣ, ಕಾವಾಡಿಚಂಡ ದೀಪಕ್ ಉತ್ತಯ್ಯ, ಉದ್ದಪಂಡ ಚಂಗಪ್ಪ, ಮಂಡೇಪಂಡ ಗಿರೀಶ್ ಉತ್ತಪ್ಪ, ಮೇಕೇರಿರ ಜಾನ್ಸಿ ತಮ್ಮಯ್ಯ ಹಾಜರಿದ್ದರು.