ಪೊಲೀಸ್ ಇಲಾಖೆ ವತಿಯಿಂದ ನಾಗರಿಕರಿಗೆ ಏರ್ಪಡಿಸಲಾಗಿದ್ದ ಬಂದೂಕು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದೇನೆ. ಸಾಕಷ್ಟು ಅನುಭವಗಳನ್ನು ಪಡೆಯುವ ಮೂಲಕ ಶಿಬಿರಕ್ಕೆ ವಿವಿಧ ಭಾಗದಿಂದ ಆಗಮಿಸಿದ ಹಲವಾರು ಸ್ನೇಹಿತರ ಪರಿಚಯವಾಗಿದೆ. ಅಧಿಕಾರಿಗಳು ನೀಡುತ್ತಿರುವ ತರಬೇತಿ ಉತ್ತಮವಾಗಿತ್ತು.
- ಎನ್.ಆರ್. ರಾಜ, ಗೋಣಿಕೊಪ್ಪಲು, ತರಬೇತಿ ಪಡೆದವರು.
ಮಹಿಳೆಯರಿಗೆ ವಿಶೇಷವಾಗಿ ಈ ನಾಗರಿಕ ಬಂದೂಕು ತರಬೇತಿ ಶಿಬಿರ ಅನುಕೂಲವಾಗಿದೆ. ತೋಟದ ಮನೆಯಲ್ಲಿ ಒಂಟಿಯಾಗಿ ಮಹಿಳೆಯರು ಇದ್ದ ಸಂದರ್ಭ ಅಪಾಯ ಎದುರಾದಲ್ಲಿ ಮನೆಯಲ್ಲಿರುವ ಬಂದೂಕನ್ನು ಬಳಸುವ ಅವಕಾಶ ಈ ತರಬೇತಿಯಿಂದ ಲಭ್ಯವಾಗಿದೆ.
- ಐನಂಡ ಭಾರತಿ ಬೋಪಣ್ಣ,
ತರಬೇತಿ ಪಡೆದ ಮಹಿಳೆ, ಪೊನ್ನಂಪೇಟೆ
ಇಲಾಖೆ ವತಿಯಿಂದ ನೀಡಿದ ನಾಗರಿಕ ಬಂದೂಕು ಶಿಬಿರ ತರಬೇತಿಯಲ್ಲಿ ಮಹಿಳೆಯರು ಭಾಗವಹಿಸಿರುವುದು ಅಚ್ಚರಿ ತಂದಿದೆ. ಅಲ್ಲದೆ ಸಮಯಕ್ಕೆ ಸರಿಯಾಗಿ ಆಗಮಿಸುವ ಮೂಲಕ ಅಗತ್ಯ ಮಾಹಿತಿಗಳನ್ನು ಚಾಚು ತಪ್ಪದೆ ಪಡೆಯುತ್ತಿದ್ದಾರೆ.
- ಎಸ್.ಕೆ. ವೆಂಕಪ್ಪ, ತರಬೇತುದಾರರು