ಶನಿವಾರಸಂತೆ: ಪಟ್ಟಣದ ಕಾವೇರಿ ವಿದ್ಯಾಸಂಸ್ಥೆ, ಪ್ರಜ್ವಲ್ ಎಜುಕೇಶನ್ ಟ್ರಸ್ಟ್‍ನ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಚಿಣ್ಣರ ಕಲರವ ಮೊದಲ ದಿನದ ಕಾರ್ಯಕ್ರಮವನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಸಿ. ಲಿಂಗರಾಜ್ ಉದ್ಘಾಟಿಸಿದರು.
ನಂತರ ಮಕ್ಕಳ ಮಾರುಕಟ್ಟೆ ಹಾಗೂ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಮನೆಯಲ್ಲಿ ತಯಾರಿಸಿಕೊಂಡು ಬಂದ ತಿಂಡಿ-ತಿನಿಸು, ತರಕಾರಿ, ಹಣ್ಣು-ಹಂಪಲು, ಸಿದ್ಧ ಉಡುಪು ಮುಂತಾದ ಅಂಗಡಿ ಇಟ್ಟು ಭರದಿಂದ ವ್ಯಾಪಾರ ಮಾಡಿ ಗಮನಸೆಳೆದರು. ಪೋಷಕರೂ ಮಕ್ಕಳಿಂದ ಅಗತ್ಯ ವಸ್ತುಗಳನ್ನು ಖರೀದಿಸಿ ಸಂಭ್ರಮಿಸಿದರು.
ಛದ್ಮವೇಷ ಸ್ಪರ್ಧೆಯಲ್ಲಿ ಮಕ್ಕಳು ವೈವಿಧ್ಯಮಯ ವೇಷ ಧರಿಸಿ ಆಕರ್ಷಿಸಿದರು. ಅಂತರ ಶಾಲಾ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಿದ್ದು, ವಿವಿಧೆಡೆಯ ಶಾಲಾ ವಿದ್ಯಾರ್ಥಿಗಳು ಮನರಂಜಿಸಿದರು. ಸಂಸ್ಥೆ ಕಾರ್ಯದರ್ಶಿ ಜಿ.ಎಂ. ಹೂವಯ್ಯ, ಪ್ರಾಂಶುಪಾಲ ಹೆಚ್.ಎನ್. ದೇವರಾಜ್, ಮುಖ್ಯ ಶಿಕ್ಷಕ ಹೆಚ್.ಎನ್. ಹೂವಯ್ಯ, ಎ.ಸಿ. ಸಂತೋಷ್‍ಕುಮಾರ್, ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.
ಪೊನ್ನಂಪೇಟೆ: ಕಿರುಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿಶೇಷ ವಾರ್ಷಿಕ ಶಿಬಿರದಲ್ಲಿ ಚಿಕ್ಕಅಳುವಾರು ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಉಪನ್ಯಾಸಕ ಜಮೀರ್ ಅಹಮದ್ ಮಾತನಾಡಿ, ಯುವ ಜನತೆ, ಸಮುದಾಯದ ಜೊತೆ ಬೆರೆತಾಗ ಮಾತ್ರ ಸಂಸ್ಕøತಿ, ಆಚಾರ ವಿಚಾರಗಳ ಬಗ್ಗೆ ತಿಳಿದುಕೊಂಡು ಆದರ್ಶಮಯ ಬದುಕು ರೂಢಿಸಿಕೊಳ್ಳಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ವಹಿಸಿ ಮಾತನಾಡಿದರು. ಕಿರುಗೂರು ವಿ.ಎಸ್.ಎಸ್.ಎನ್. ನಿರ್ದೇಶಕ ಕೋದೇಂಗಡ ಬಬಿತ, ಕಿರುಗೂರು ಮಹದೇವರ ದೇವಸ್ಥಾನದ ಕಾರ್ಯದರ್ಶಿ ಕಾಕಮಾಡ ದೀಕ್ಷಿತ್, ಕಾಫಿ ಬೆಳೆಗಾರರಾದ ಕೋಪಟ್ಟಿರ ಕಾಶಿ, ಕೊಕ್ಕೇಂಗಡ ಸುಂದರ ಕಾಳಪ್ಪ, ಕಾಕೇರ ರಮೇಶ್, ಎನ್‍ಎಸ್‍ಎಸ್ ಯೋಜನಾಧಿಕಾರಿ ಎಂ.ಎನ್. ವನಿತ್‍ಕುಮಾರ್, ಎನ್.ಪಿ. ರೀತಾ, ಸಹ ಶಿಬಿರಾಧಿಕಾರಿ ಪ್ರವೀಣ್‍ಕುಮಾರ್ ಇದ್ದರು. ಸಂಜೆ ಶಿಬಿರಾರ್ಥಿಗಳಿಂದ ಹಾಸ್ಯ ಕಾರ್ಯಕ್ರಮ ಹಾಗೂ ಪೊನ್ನಂಪೇಟೆಯ ನಿಸರ್ಗ ಯುವತಿ ಮಂಡಳಿಯ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಗೋಣಿಕೊಪ್ಪಲು: ಕೇಂದ್ರ ಸರ್ಕಾರವೂ ಕಲಿಕೆಯೊಂದಿಗೆ ಕ್ರೀಡಾ ಚಟುವಟಿಕೆಯನ್ನೂ ಶಾಲೆಗಳಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ‘ಖೇಲೋ ಇಂಡಿಯಾ ಖೇಲೋ’ ಘೋಷಣೆಯಂತೆ ಎಲ್ಲ ಶಾಲೆಗಳೂ ಕ್ರೀಡೆಗೆ ಒತ್ತು ನೀಡಿದ್ದಲ್ಲಿ ಮಕ್ಕಳ ದೇಹ ಮತ್ತು ಮೆದುಳಿನ ಬೆಳವಣಿಗೆ ಹಾಗೂ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎಂದು ಕೊಲ್ಕೋತ್ತಾ ಆದಾಯ ತೆರಿಗೆ ನ್ಯಾಯಪೀಠದ ಮುಖ್ಯಾಧಿಕಾರಿ ಡಾ. ಪಿ.ಕೆ. ಶ್ರೀಹರಿ ಬಣ್ಣಿಸಿದರು.
ಗೋಣಿಕೊಪ್ಪಲು ಕಾಲ್ಸ್ ಮತ್ತು ಅಶ್ವಿನಿ ಕ್ರೀಡಾ ಪ್ರತಿಷ್ಠಾನದ ಮೂಲಕ ಜರುಗಿದ ಕಾಲ್ಸ್ ಕ್ರೀಡಾ ದಿವಸ್ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು. ಗೋಣಿಕೊಪ್ಪಲು ಕಾಲ್ಸ್ ಆವರಣದಲ್ಲಿರುವ ಅಂತರರಾಷ್ಟ್ರೀಯ ಗುಣಮಟ್ಟದ ‘ಸಿಂಥೆಟಿಕ್ ಅಥ್ಲೆಟಿಕ್ ಟರ್ಫ್’ ಮೈದಾನ ಸದ್ಭಳಕೆಯಾಗಲಿ. ಕಲಿಕೆಯೊಂದಿಗೆ ಕ್ರೀಡೆಯನ್ನು ಅಳವಡಿಸಿಕೊಳ್ಳುವ ಮೂಲಕ ಹಾಗೂ ಅಭ್ಯಾಸಕ್ಕೆ ಅಂತರರಾಷ್ಟ್ರೀಯ ಮಟ್ಟದ ವ್ಯವಸ್ಥೆಯನ್ನು ದತ್ತಾ ಕರುಂಬಯ್ಯ ಮತ್ತು ಅಶ್ವಿನಿ ದಂಪತಿ ಶಿಸ್ತು ಮತ್ತು ಬದ್ಧತೆಯೊಂದಿಗೆ ರೂಪಿಸಿದ್ದಾರೆ.
ಉತ್ತಮವಾದ ಶಾಲಾ ವಾತಾವರಣ, ಉತ್ತಮ ಕ್ರೀಡಾಂಗಣ, ವಿದ್ಯಾರ್ಥಿಗಳಿಗೆ ಉತ್ತಮ ಪೌಷ್ಟಿಕ ಆಹಾರ ಒಳಗೊಂಡಂತೆ ಹಲವು ಮೂಲಭೂತ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗಿದೆ. ಕೇಂದ್ರ ಸರ್ಕಾರವೂ ಅಶ್ವಿನಿ ಕ್ರೀಡಾ ಪ್ರತಿಷ್ಠಾನದ ಸುಸಜ್ಜಿತ, ಗುಣಮಟ್ಟದ ವಿಧಾನಗಳನ್ನು ಇತರ ಶಾಲೆಗಳಲ್ಲಿಯೂ ಅಳವಡಿಸುವಂತಾದಲ್ಲಿ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಪ್ರತಿಭಾನ್ವಿತ ಕ್ರೀಡಾಪಟುಗಳ ಉತ್ಪಾದನೆ ಸಾಧ್ಯ ಎಂದು ಹೇಳಿದರು.
ಕಾಲ್ಸ್ ಶಾಲಾ ಮುಖ್ಯಸ್ಥ ದತ್ತಾ ಕರುಂಬಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕ್ರೀಡೋತ್ಸವದಲ್ಲಿ ಎಎಸ್‍ಎಫ್ ಮುಖ್ಯಸ್ಥೆ ಅಶ್ವಿನಿ ನಾಚಪ್ಪ ಮುಂತಾದ ಗಣ್ಯರು ಉಪಸ್ಥಿತರಿದ್ದರು. 100, 200 ಮೀಟರ್ ಓಟ, ರಿಲೇ ಹಾಗೂ ಪುಟ್ಟ ಮಕ್ಕಳಿಗಾಗಿ ವಿಶೇಷ ಕ್ರೀಡೆಯನ್ನು ಆಯೋಜಿಸಲಾಗಿತ್ತು. ಇದೇ ಪ್ರಥಮ ಬಾರಿಗೆ ಹೊನಲು ಬೆಳಕಿನಲ್ಲಿ ಕ್ರೀಡಾಕೂಟ ಹಾಗೂ ದೇಶಭಕ್ತಿ ಬಿಂಬಿಸುವ ಗುಂಪು ನೃತ್ಯ ಜರುಗಿತು.
ನಿವೃತ್ತಿ ಹೊಂದಿದ ಅಥ್ಲೆಟಿಕ್ ತರಬೇತುದಾರ ಜಗದೀಶನ್‍ರನ್ನು ಇದೇ ಸಂದರ್ಭ ಗೌರವಿಸಲಾಯಿತು. ಕಾಲ್ಸ್ ವಿದ್ಯಾರ್ಥಿಗಳ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ಪಥಸಂಚಲನ ಆಕರ್ಷಕವಾಗಿ ಮೂಡಿಬಂತು. ಕಾಲ್ಸ್ ಪ್ರಾಂಶುಪಾಲೆ ಗೌರಮ್ಮ ನಂಜಪ್ಪ ಸ್ವಾಗತಿಸಿದರೆ, ಕ್ರೀಡಾ ಸಂಯೋಜಕರಾಗಿ ಸ್ವರೂಪ್ ಪೆÇನ್ನಪ್ಪ ಕಾರ್ಯನಿರ್ವಹಿಸಿದರು. ನೀತಾ ಕಾವೇರಮ್ಮ ಮತ್ತು ಕಾವೇರಿ ಚಂಗಪ್ಪ ಕಾರ್ಯಕ್ರಮ ನಿರೂಪಿಸಿದರು.
ಮಡಿಕೇರಿ: ಅರಂತೋಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧರಲ್ಲಿ ರಾಜಕೀಯ ಕ್ಷೇತ್ರದಲ್ಲಿ ಸಾಧನೆಗೈದ ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ. ಶಾಹೀದ್ ಅವರನ್ನು ಬೆಂಗಳೂರಿನ ಉದ್ಯಮಿ ಆನಂದ ಕಲ್ಲುಗದ್ದೆ ಸನ್ಮಾನಿಸಿದರು.
ಸಮಾರಂಭದಲ್ಲಿ ಮಂಗಳೂರಿನ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸುಳ್ಯ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಸದಸ್ಯರು ಪುಷ್ಪ ಮೇದಪ್ಪ, ಅರಂತೋಡು ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಗ್ರಾ.ಪಂ. ಅಧ್ಯಕ್ಷ ಲೀಲಾವತಿ ಕೋಡಂಕೇರಿ, ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ನಿತ್ಯಾನಂದ ಮುಂಡೋಡಿ, ಶತಮಾನೋತ್ಸವ ಸಮಿತಿ ಅಧ್ಯಕ್ಷ ತೀರ್ಥರಾಮ ಅಡ್ಕಬಳೆ, ಕಾರ್ಯದರ್ಶಿ ಶೇಷಗಿರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪದ್ಮಯ್ಯ ಹಾಜರಿದ್ದರು.ಪೊನ್ನಂಪೇಟೆ: ಪೊನ್ನಂಪೇಟೆಯ ಸಂತ ಅಂತೋಣಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವ ಕಾರ್ಯಕ್ರಮ ನಡೆಯಿತು.
ವೀರಾಜಪೇಟೆ ಸಂತ ಅನ್ನಮ್ಮ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಮದಲೈಮುತ್ತು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ರೆ.ಫಾ. ಲುರ್ದು ಪ್ರಸಾದ್, ನಿರ್ಮಲ ಮಾತಾ ಚರ್ಚ್ ಕುಟ್ಟ ಇವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಚ್ಚಾಡೋ, ಕ್ಷೇತ್ರ ಶಿಕ್ಷಣ ಅಧಿಕಾರಿ ಶೈಲ ಬೆಳಗಿ, ರೆ.ಫಾ. ಚಾಲ್ರ್ಸ್ ನೊರಾನಾ, ರೆ.ಫಾ. ಇಗ್ನೀಸ್‍ಮುತ್ತು, ರೆ.ಫಾ. ಜಾನ್ ಸಗಯರಾಜ್, ಸಿಸ್ಟರ್ ಟ್ರೆಸ್ಸಿ ಪಿಂಟೋ ಮೊದಲಾದವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 34 ವೈವಿಧ್ಯತೆಯುಳ್ಳ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನೀಡಿ ಮೆಚ್ಚುಗೆಗಳಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಲಾಯಿತು. ಸಂತ ಅಂತೋಣಿ ಶಿಕ್ಷಣ ಸಂಸ್ಥೆಯ ಶಿಕ್ಷಕಿ ರಜನಿ ಸ್ವಾಗತಿಸಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಚಂದ್ರಿಕಾ ವಂದಿಸಿದರು. ಮಾಚಮ್ಮ ವರದಿ ವಾಚಿಸಿದರು. ನಿರೂಪಣೆಯನ್ನು ಪವನ್, ಅಶ್ವಥಿ, ಮೋಹಿತ್ ಮತ್ತು ನಂದಿತಾ ನಡೆಸಿಕೊಟ್ಟರು.
ಶನಿವಾರಸಂತೆ: ಕನ್ನಡ ಸಮೃದ್ಧ ಭಾಷೆಯಾಗಿದ್ದು, ಪ್ರಪಂಚದ 30 ಶ್ರೇಷ್ಠ ಭಾಷೆಗಳಲ್ಲಿ ಕನ್ನಡವೂ ಒಂದೆಂಬದು ಹೆಮ್ಮೆಯ ಸಂಗತಿ ಎಂದು ಮೈಸೂರಿನ ಖ್ಯಾತ ಹಾಸ್ಯ ಕಲಾವಿದ ಪ್ರೊ. ಎಂ. ಕೃಷ್ಣೇಗೌಡ ಅಭಿಪ್ರಾಯಪಟ್ಟರು.
ಪಟ್ಟಣದ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ಶಾಲಾ-ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೈಸೂರಿನ ಸೆಂಟ್ ಥೋಮಸ್ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಫಾ. ಜೋಸೆಫ್ ಫಿಲಿಪ್ ಮಾತನಾಡಿ, ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯ 44 ವರ್ಷಗಳ ಇತಿಹಾಸವಿದೆ. ಕರ್ನಾಟಕಕ್ಕೆ ಉತ್ತಮ ಮಕ್ಕಳ ಕೊಡುಗೆ ಕೊಡುವ ಉದ್ದೇಶದಿಂದ ರಾಜ್ಯದಾದ್ಯಂತ ವಿದ್ಯಾಸಂಸ್ಥೆಗಳಿವೆ. ದೇವರ ಪಾದದಲ್ಲಿ ಜೀವನ ಸಮರ್ಪಿಸಿದರೆ ಜೀವನ ಸಾರ್ಥಕ ಎಂದರು.
ಸೆಂಟ್ ಥೋಮಸ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಫಾ. ಡಾ. ಕೆ.ಜೆ. ವರ್ಗೀಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಜಾನ್‍ಪಾಲ್ ಡಿಸೋಜ, ವಿದ್ಯಾಸಂಸ್ಥೆ ವ್ಯವಸ್ಥಾಪಕ ಡಾ. ಜೋಸೆಫ್ ಅಚಾಂಡಿ, ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಹೆಚ್. ಮಹಮ್ಮದ್ ಗೌಸ್, ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್, ಸಿನೆಮಾ ನಿರ್ದೇಶಕ ವಿಕಾಸ್ ಪುಷ್ಪಗಿರಿ, ಪಟ್ಟಣದ ವಿವಿಧ ಶಾಲಾ-ಕಾಲೇಜುಗಳ ಪ್ರಾಂಶುಪಾಲರು ಹಾಗೂ ಮುಖ್ಯ ಶಿಕ್ಷಕರು, ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆ ಫಾದರ್ ಅಯ್ಯನ್ ಕುಡಿ, ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.
ಮಡಿಕೇರಿ: ಇಲ್ಲಿನ ಸಂತ ಮೈಕಲರ ವಿದ್ಯಾಸಂಸ್ಥೆಯ ಕ್ರೀಡಾ ದಿನ ತಾ. 21 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಮೈಕಲರ ವಿದ್ಯಾಸಂಸ್ಥೆಯ ವಂದನೀಯ ಗುರು ನವೀನ್ ಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ, ಡಿವೈಎಸ್ಪಿ ದಿನೇಶ್ ಕುಮಾರ್ ಅವರು ಆಗಮಿಸಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಪಿ.ಎಸ್. ಮಚ್ಚಾಡೋ ಪಥಸಂಚಲನೆಯ ವಂದನೆ ಸ್ವೀಕರಿಸಿದರು. ಧ್ವಜಾರೋಹಣವನ್ನು ಸಂತ ಮೈಕಲರ ದೇವಾಲಯದ ಗುರುಗಳಾದ ವಂದನೀಯ ಆಲ್‍ಫ್ರೆಡ್ ಜಾನ್ ಮೆಂಡೋನ್ಸ ನೆರವೇರಿಸಿದರು. ವೇದಿಕೆಯಲ್ಲಿ, ಎಲ್ಲಾ ವಿಭಾಗದ ಮುಖ್ಯಸ್ಥರು ನೆರೆದಿದ್ದರು.
ಶನಿವಾರಸಂತೆ: ಹಿಂದಿನ ಆಚಾರ-ವಿಚಾರ ಮೌಢ್ಯವಲ್ಲ. ಮಕ್ಕಳಲ್ಲಿ ಸಂಸ್ಕøತಿ-ಸಂಸ್ಕಾರ ರೂಢಿಗತವಾಗಿ ಬರಬೇಕು ಎಂದು ಚಿಕ್ಕಅಳುವಾರದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಸಹಪ್ರಾಧ್ಯಾಪಕ ಝಮೀರ್ ಅಹಮ್ಮದ್ ಅಭಿಪ್ರಾಯಪಟ್ಟರು.
ಪಟ್ಟಣದ ಕಾವೇರಿ ವಿದ್ಯಾಸಂಸ್ಥೆ, ಪ್ರಜ್ವಲ್ ಎಜುಕೇಶನ್ ಟ್ರಸ್ಟ್‍ನ ವಾರ್ಷಿಕೋತ್ಸವ ಚಿಣ್ಣರ ಕಲರವ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ತಾಯಂದಿರಲ್ಲಿ ತಾಳ್ಮೆ ಮುಖ್ಯವಾಗಿದ್ದು, ಮಕ್ಕಳ ಹೋಲಿಕೆ ಸರಿಯಲ್ಲ. ಮಗು ಬಯಸುವುದು ಅಪ್ಪ-ಅಮ್ಮನ ಪ್ರೋತ್ಸಾಹ. ಮಕ್ಕಳಿಗೆ ಸ್ವಾಭಿಮಾನದ, ಶ್ರಮದ ಅರಿವು ಮೂಡಿಸಿದರೆ ತಕ್ಕ ಪ್ರತಿಫಲ ನಿರೀಕ್ಷಿಸಬಹುದು ಎಂದರು.
ಬೆಂಗಳೂರಿನ ಉದ್ಯಮಿ ರವೀಂದ್ರ ಹರಪಳ್ಳಿ ಮಾತನಾಡಿ, ವಿದ್ಯೆಗೆ ವಿನಯವೇ ಭೂಷಣ. ಉನ್ನತ ಶಿಕ್ಷಣ ಪಡೆದರೂ ವಿನಯ ಜತೆಗಿರಬೇಕು ಎಂದರು. ಸಂಪನ್ಮೂಲ ವ್ಯಕ್ತಿ ಜಾನ್‍ಪಾಲ್ ಡಿಸೋಜ ಮಾತನಾಡಿ, ಮಕ್ಕಳಿಗೆ ವಿದ್ಯೆ ಕಲಿಸುವಾಗಲೇ ಕಷ್ಟದ ಅರಿವು ಮೂಡಿಸಬೇಕು. ಭೂಮಿ ಮೇಲೆ ಮನುಷ್ಯರಾಗಿ, ಯೋಗ್ಯ ಪ್ರಜೆಯಾಗಿ ಬಾಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಹೆಚ್.ಎನ್. ದೇವರಾಜ್ ಪ್ರಾಸ್ತಾವಿಕ ನುಡಿಯಾಡಿದರು. ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್, ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್ ಹಾಗೂ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಅಧ್ಯಕ್ಷ ಹೆಚ್.ಸಿ. ಗುಂಡಪ್ಪ ಮಾತನಾಡಿದರು.
ಸಂಸ್ಥೆ ಕಾರ್ಯದರ್ಶಿ ಜಿ.ಎಂ. ಹೂವಯ್ಯ, ನಿರ್ದೇಶಕರಾದ ಜಿ.ವಿ. ತಿಮ್ಮಪ್ಪ, ಖಾನರಾಂ, ಬಿ. ಧರ್ಮೇಂದ್ರ, ಕಾಲೇಜು ಪ್ರಾಂಶುಪಾಲ ದೇವರಾಜ್, ಮುಖ್ಯ ಶಿಕ್ಷಕ ಹೆಚ್.ಎನ್. ಹೂವಯ್ಯ, ಎ.ಸಿ. ಸಂತೋಷ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್.ಸಿ. ಲಿಂಗರಾಜ್ ಉಪಸ್ಥಿತರಿದ್ದರು. ಉಪನ್ಯಾಸಕರಾದ ವನಿತಾ ವಾರ್ಷಿಕ ವರದಿ ಮಂಡಿಸಿದರೆ, ಲಲಿತಾ, ಕಾಂತರಾಜ್ ಕಾರ್ಯಕ್ರಮ ನಿರ್ವಹಿಸಿದರು.ಕುಶಾಲನಗರ: ದೇಶದ ಶಾಂತಿ ಕಾಪಾಡುವಲ್ಲಿ ಯುವ ಜನತೆ ಪಾತ್ರ ಬಹುಮುಖ್ಯ ಎಂದು ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪೆÇ್ರ. ಹೆಚ್.ಬಿ. ಲಿಂಗಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಾಲ್ನೂರು-ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಸ್ತಾವಿಕ ನುಡಿಗಳಾಡಿದ ಶಿಬಿರಾಧಿಕಾರಿ ಟಿ.ಎಂ. ಸುಧಾಕರ್, ಶಿಬಿರಾರ್ಥಿಗಳಿಗೆ ಶಿಸ್ತು, ಸಮಯ ಪ್ರಜ್ಞೆ, ಸದ್ಭಾವನೆ ಮತ್ತು ಸೌಹಾರ್ದತೆಯ ಮೂಲಕ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವುದು ಶಿಬಿರದ ಆಶಯವಾಗಿದೆ ಎಂದರು.
ವಾಲ್ನೂರು-ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಹೆಚ್.ಕೆ. ಕುಮಾರ್ ಮಾತನಾಡಿ, ಎಲ್ಲಾ ಶಿಬಿರಾರ್ಥಿಗಳು ಒಂದೇ ಕುಟುಂಬದ ಮಕ್ಕಳಂತೆ ಒಂದುಗೂಡಿ ಶಿಬಿರದ ಯಶಸ್ಸಿಗೆ ಸಹಕರಿಸಬೇಕು ಎಂದರು.
ಈ ಸಂದರ್ಭ ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅನಿಲ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪುರಂದರ ಹಾಗೂ ಸದಸ್ಯರು, ಶಿಬಿರಾಧಿಕಾರಿ ಕಾವೇರಪ್ಪ ಮತ್ತಿತರರು ಇದ್ದರು.
ಸಿದ್ದಾಪುರ: ಸ್ಥಳೀಯ ಸಂತ ಅನ್ನಮ್ಮ ಶಾಲಾ ವಾರ್ಷಿಕೋತ್ಸವ ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ನೃತ್ಯ ವೈಭವ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಶಾಲಾ ಆವರಣದಲ್ಲಿ ನಡೆಯಿತು. ಎಲ್ಲಾ ಭಾಷೆಗಳ ಸಂಗೀತಕ್ಕೆ ಶಾಲಾ ವಿದ್ಯಾರ್ಥಿಗಳು ನೃತ್ಯ ಮಾಡುವ ಮೂಲಕ ನೆರೆದಿದ್ದವರ ಗಮನ ಸೆಳೆದರು.
ಕ್ರಿಸ್ಮಸ್ ಅಂಗವಾಗಿ ಶುಭಾಶಯ ಕೋರುವ ರೀತಿಯಲ್ಲಿ ಪ್ಲೇ ಹೋಮ್, ನರ್ಸರಿ, ಎಲ್‍ಕೆಜಿ, ಯುಕೆಜಿ ಪುಟಾಣಿಗಳ ನೃತ್ಯ ವೈಭವ ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು. ಈ ಸಂದರ್ಭ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್. ವೆಂಕಟೇಶ್ ಮಾತನಾಡಿ, ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದ ಮೂಲಕ ಸಮಾಜದಲ್ಲಿ ಸಾಧನೆ ಮಾಡುವುದರೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.
ಸಿದ್ದಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ಚರ್ಚ್ ಫಾದರ್ ಜೋನಸ್ಸ್, ಶಾಲಾ ಮುಖ್ಯ ಶಿಕ್ಷಕಿ ಫ್ಲೋರಾ, ವ್ಯವಸ್ಥಾಪಕಿ ಸಿಸ್ಟರ್ ಜಸ್ಮಿತಾ, ಪ್ರೌಢಶಾಲಾ ಶಿಕ್ಷಕಿ ಪವಿತ್ರ, ಇಕ್ರಾ ಶಾಲಾ ಮುಖ್ಯ ಶಿಕ್ಷಕ ಕೆ.ಯು. ರಜಾಕ್ ಸೇರಿದಂತೆ ಶಾಲಾ ಶಿಕ್ಷಕಿಯರು ಹಾಗೂ ಪೋಷಕರು ಹಾಜರಿದ್ದರು.
ಗೋಣಿಕೊಪ್ಪಲು: ವೀರಾಜಪೇಟೆ ಕಾವೇರಿ ಕಾಲೇಜು ಎನ್.ಎಸ್.ಎಸ್. ಘಟಕ ಮತ್ತು ಮಂಗಳೂರು ವಿ.ವಿ. ಕಾಲೇಜು ಶಿಕ್ಷಣ ಇಲಾಖೆ ಆಶ್ರಯದಲ್ಲಿ ಹಾತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಆರಂಭಗೊಂಡಿದ್ದು ತಾ. 28 ರಂದು ಸಮಾರೋಪಗೊಳ್ಳಲಿದೆ.
ಹಾತೂರು ಶಾಲಾ ಆವರಣ ಸ್ವಚ್ಛತಾ ಕಾರ್ಯಕ್ರಮವಲ್ಲದೆ ಅಪರಾಹ್ನ ಶೈಕ್ಷಣಿಕ ಕಾರ್ಯಕ್ರಮ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಬಿರದ ಉದ್ಘಾಟನೆಯನ್ನು ನಿವೃತ್ತ ಪ್ರಾಧ್ಯಾಪಕಿ ಪೆÇ್ರ. ಪಿ.ಎಂ. ಸುಶೀಲ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾವೇರಿ ಕಾಲೇಜು ನಿವೃತ್ತ ಪ್ರಾಂಶುಪಾಲ ಇಟ್ಟೀರ ಕೆ. ಬಿದ್ದಪ್ಪ ಮಾತನಾಡಿ, ಭಾರತೀಯ ಸೈನ್ಯಕ್ಕೆ ಪುಟ್ಟಜಿಲ್ಲೆ ಕೊಡಗು ಹಲವು ವೀರಯೋಧರನ್ನು ನೀಡಿದೆ. ಇಂದಿನ ಯುವ ಜನಾಂಗ ಸೈನ್ಯಕ್ಕೆ ಸೇರುವದಕ್ಕೆ ಹಿಂದೇಟು ಹಾಕಬಾರದು ಎಂದು ಸಲಹೆ ನೀಡಿದರು.
ಹಾತೂರು ಗ್ರಾ.ಪಂ. ಉಪಾಧ್ಯಕ್ಷ ಗುಮ್ಮಟೀರ ದರ್ಶನ್, ಹಾತೂರು ಪ್ರೌಢಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಮುಕ್ಕಾಟೀರ ಎಂ. ಸುಬ್ರಮಣಿ, ಗ್ರಾ.ಪಂ. ಸದಸ್ಯ ಶ್ರೀನಿವಾಸ್, ವೀರಾಜಪೇಟೆ ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲರಾದ ಪೆÇ್ರ. ಎ.ಎಂ. ಕಮಲಾಕ್ಷಿ, ಪಾಲಚಂಡ ಜಗನ್, ಸುಮಿ ಜಗನ್, ಕೊಡಂದೇರ ಮುದ್ದಪ್ಪ ಮುಂತಾದವರು ಉಪಸ್ಥಿತರಿದ್ದರು. ಎನ್.ಎಸ್.ಎಸ್. ಯೋಜನಾಧಿಕಾರಿ ಹೆಚ್.ವಿ. ನಾಗರಾಜು ಸ್ವಾಗತ, ನಿರೂಪಣೆ ಕಾವೇರಪ್ಪ ಹಾಗೂ ಡಾ. ಆನಂದ ಕಾರ್ಲ ವಂದನಾರ್ಪಣೆ ಮಾಡಿದರು.
ಸಮಾರೋಪ: ತಾ. 28 ರಂದು ಪೂರ್ವಾಹ್ನ 11.30 ಗಂಟೆಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದ್ದು, ಗೋಣಿಕೊಪ್ಪಲು ವೈದ್ಯ ಡಾ. ಕಾಳಿಮಾಡ ಕೆ. ಶಿವಪ್ಪ ಸಮಾರೋಪ ಭಾಷಣ ಮಾಡಲಿದ್ದಾರೆ.
ಶನಿವಾರಸಂತೆ: ಶ್ರೀ ವಿಘ್ನೇಶ್ವರ ಬಾಲಿಕಾ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರು ಶಿಕ್ಷಕಿ ಸವಿತಾ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಸರಕಾರಿ ಪಿ.ಯು. ಕಾಲೇಜಿನಲ್ಲಿ ವಿವೇಕಾನಂದ ವಿದ್ಯಾಸಂಸ್ಥೆ ಹಾಗೂ ರೋಟರಿ ಸಂಸ್ಥೆ ವತಿಯಿಂದ ನಡೆದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸಿದ್ದಾರೆ.