ಸಿದ್ದಾಪುರ, ಡಿ.26: ನೆಲ್ಯಹುದಿಕೇರಿಯ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡುವ ನಿಟ್ಟಿನಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು. ಕೇರಳ ರಾಜ್ಯದ ತಣಲ್ ಸಂಸ್ಥೆಯ ವತಿಯಿಂದ ನೆಲ್ಯಹುದಿಕೇರಿ ಗ್ರಾಮದಲ್ಲಿ ಮೊದಲ ಹಂತದಲ್ಲಿ 12 ಮಂದಿ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಲು ಭೂಮಿ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಖತೀಬ್ ಅಬ್ದುಲ್ ಫೈಝಿ, ಜಮಾಯತ್ ಹಿಂದ್ ಮುಸ್ಲಿಂ ಸಂಘಟನೆಯ ಪ್ರಮುಖರಾದ ಎಂ.ಕೆ. ಅಶ್ರಫ್, ನೆಲ್ಯಹುದಿಕೇರಿ ಗ್ರಾ.ಪಂ. ಪಿ.ಡಿ.ಓ. ಅನಿಲ್‍ಕುಮಾರ್, ಹಾಗೂ ಗ್ರಾ.ಪಂ. ಸದಸ್ಯರುಗಳು ಹಾಜರಿದ್ದರು.