ವೀರಾಜಪೇಟೆ, ಡಿ. 26: ವೀರಾಜಪೇಟೆ ಬಳಿಯ ಹೆಗ್ಗಳದ ಅಯ್ಯಪ್ಪ ಭಗವತಿ ದೇವಸ್ಥಾನಕ್ಕೆ ವರ್ಷಂಪ್ರತಿಯಂತೆ ತಾ:31ರಂದು ಕೇರಳದ ಬೈತೂರು ದೇವರು ಆಗಮಿಸಿ ಅಂದು ದೇವಸ್ಥಾನದಲ್ಲಿ ತಂಗುವರು. ಜನವರಿ 1 ರಂದು ಬೆಳಿಗ್ಗೆ 10.30ಗಂಟೆಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಂತೆಯೇ ದರ್ಶನ ಬಂದು ಭಕ್ತಾದಿಗಳಿಗೆ ಆಶೀರ್ವಚನ ನೀಡಲಿರುವರು. ದೇವರಿಗೆ ವಿಶೇಷ ಪೂಜೆ ದರ್ಶನದ ನಂತರ ಅಪರಾಹ್ನ 1 ಗಂಟೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಅಮ್ಮಣಿಚಂಡ ಬೋಪಣ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.