ಮಡಿಕೇರಿ, ಡಿ. 26: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 2019 -20ನೇ ಕೊಡಗಿನ ಗೌರಮ್ಮ ದತ್ತಿ ಪುರಸ್ಕಾರ ಕಾರ್ಯಕ್ರಮ ತಾ. 28 ರಂದು ಮಧ್ಯಾಹ್ನ 2 ಗಂಟೆಗೆ ಭಾರತೀಯ ವಿದ್ಯಾಭವನದಲ್ಲಿ ನಡೆಯಲಿದೆ.

ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ವಹಿಸಲಿದ್ದಾರೆ. ಉದ್ಘಾಟನೆಯನ್ನು ನಿಕಟ ಪೂರ್ವ ಅಧ್ಯಕ್ಷ ಟಿ.ಪಿ. ರಮೇಶ್ ನೆರವೇರಿಸಲಿದ್ದಾರೆ. ಸಾಹಿತಿ ಸುನಿತ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಮುಖ್ಯ ಭಾಷಣವನ್ನು ಹಿರಿಯ ಸಾಹಿತಿ ವೈದೇಹಿ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್.ಪಿ. ಡಾ. ಸುಮನ್ ಡಿ.ಪಿ. ‘ಶಕ್ತಿ’ ಸಂಪಾದಕ ಚಿದ್ವಿಲಾಸ್, ಕಲಾವಿದ ಉಮೇಶ್, ಎಂ. ಸಾಲಿಯಾನ, ಲೇಖಕಿಯರ ಬಳಗದ ಅಧ್ಯಕ್ಷೆ ಕಸ್ತೂರಿ ಗೋವಿಂದಮಯ್ಯ, ಹಿರಿಯ ಸಾಹಿತಿ ಶೋಭಾ ಸುಬ್ಬಯ್ಯ, ಪ್ರಾಧ್ಯಾಪಕಿ ಡಾ. ಕೋರನ ಸರಸ್ವತಿ, ಹಿರಿಯ ಸಾಹಿತಿಗಳಾದ ಕಿಗ್ಗಾಲು ಗಿರೀಶ್, ಭಾರಧ್ವಾಜ್ ಕೆ. ಆನಂದ ತೀರ್ಥ, ನಿಕಟ ಪೂರ್ವ ಅಧ್ಯಕ್ಷ ಮುನೀರ್ ಅಹಮ್ಮದ್, ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಕಥೆಗಾರರಾದ ಅಶೋಕ್ ಕೃಷ್ಣ ಭಾಗವಹಿಸಲಿದ್ದಾರೆ.