ಸಿದ್ದಾಪುರ, ಡಿ. 26: ಸಿ.ಎ.ಎ ಹಾಗೂ ಎನ್.ಆರ್.ಸಿ ಬಗ್ಗೆ ಇರುವ ಅಪಪ್ರಚಾರದ ಬಗ್ಗೆ ಕಿವಿಗೊಡಬಾರದು ಎಂದು ಮಡಿಕೇರಿ ಡಿ.ವೈ.ಎಸ್.ಪಿ ದಿನೇಶ್ ಕುಮಾರ್ ಮನವಿ ಮಾಡಿದರು. ಸಿದ್ದಾಪುರದ ಪ್ಲಾಟಿನಂ ಪ್ಲಾಝ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಕೆಲವು ಸುಳ್ಳುಗಳು ಹಬ್ಬುತ್ತಿದ್ದು, ಜನರು ಅದಕ್ಕೆ ಕಿವಿಗೊಡಬಾರದು. ಪ್ರತಿಭಟನೆಯ ವೇಳೆಯಲ್ಲಿ ಶಾಂತಿ ಕಾಪಾಡಬೇಕು ಎಂದರು. ಈ ಸಂದರ್ಭ ಮುಸ್ಲಿಂ ಜಮಾಅತ್ ಅಧ್ಯಕ್ಷ ಉಸ್ಮಾನ್ ಹಾಜಿ, ಪ್ರಮುಖರಾದ ಮುಸ್ತಫಾ, ಅಸ್ಗರ್, ನವಾಜ್, ಶುಕೂರ್ ಸೇರಿದಂತೆ ಇನ್ನಿತರರು ಇದ್ದರು.