ಮಡಿಕೇರಿ, ಡಿ. 25: ಜಿಲ್ಲೆಯ ವಿವಿಧ ದೇವಾಲಯಗಳಿಗೆ ರಾಜ್ಯ ಸರಕಾರ ಅನುದಾನ ಕಲ್ಪಿಸಿದ್ದು; ಇದರಲ್ಲಿ ಮುಕ್ಕೋಡ್ಲುವಿನ ಕಾಟ್ಲಪ್ಪ ದೇವಾಲಯಕ್ಕೆ ರೂ. 10 ಲಕ್ಷವನ್ನು ಒದಗಿಸಿದೆ. ರಾಜ್ಯ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರಲ್ಲಿ ಈ ಬಗ್ಗೆ ತಾವು ಸಲ್ಲಿಸಿದ ಮನವಿಗೆ ಸ್ಪಂದಿಸಿ ಅವರು ಅನುದಾನ ಕಲ್ಪಿಸಿರುವದಾಗಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ತಿಳಿಸಿದ್ದಾರೆ.