ನಾಪೋಕ್ಲು, ಡಿ. 25: ಬಿಟ್ಟಂಗಾಲದ ಕೊಡವ ಬ್ಯಾಡ್ಮಿಂಟನ್ ಕ್ಲಬ್ ಆಶ್ರಯದಲ್ಲಿ ಸಂಘದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ಡಬಲ್ಸ್ ವಿಭಾಗದಲ್ಲಿ ಪೆಮ್ಮುಡಿಯಂಡ ವೇಣು ಹಾಗೂ ಕನ್ನಂಬೀರ ಸುಧಿತಿಮ್ಮಯ್ಯ ವಿಜೇತರಾಗಿದ್ದಾರೆ.

ದ್ವಿತೀಯ ಸ್ಥಾನವನ್ನು ಅಮ್ಮಣಿಚಂಡ ಸುಬ್ರಮಣಿ ಹಾಗೂ ಕೂತಂಡ ಸುರೇಶ್ ಪಡೆದುಕೊಂಡಿದ್ದು, ಪುರುಷರ ಮುಕ್ತ ಡಬಲ್ಸ್ ಪಂದ್ಯಾಟದಲ್ಲಿ ಕುಪ್ಪಂಡ ರಜತ್ ಮತ್ತು ಕಾಳಿಮಾಡ ನಂಜಪ್ಪ ಪ್ರಥಮ ಸ್ಥಾನಗಳಿಸಿದರೆ ದ್ವಿತೀಯ ಸ್ಥಾನವನ್ನು ಅರಮಣಮಾಡ ಬೋಪಣ್ಣ ಮತ್ತು ಐಚಂಡ ಕುಶಾಲ್ ಪಡೆದಿದ್ದಾರೆ.

ಮಹಿಳೆಯರ ಡಬಲ್ಸ್‍ನಲ್ಲಿ ಕೊಲ್ಲೀರ ರಚನಾ ಮತ್ತು ಐಚಂಡ ಬಿಂದು ಪ್ರಥಮ ಸ್ಥಾನಗಳಿಸಿದರೆ ದ್ವಿತೀಯ ಸ್ಥಾನವನ್ನು ತಾತಪಂಡ ಜ್ಯೋತಿ ಸೋಮಯ್ಯ ಮತ್ತು ಪೆಮ್ಮುಡಿಯಂಡ ಪಾಯಲ್ ಪಡೆದುಕೊಂಡಿದ್ದಾರೆ. 40 ವರ್ಷ ಮೇಲ್ಪಟ್ಟ ಪುರುಷರ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಅರಮಣಮಾಡ ಬೋಪಣ್ಣ ಹಾಗೂ ಅರಮಣಮಾಡ ಸೋಮಣ್ಣ ಸಹೋದರರುಗಳಿಸಿದರೆ ದ್ವಿತೀಯ ಸ್ಥಾನವನ್ನು ಕುಕ್ಕೇರ ಧನ್ಯ ಮತ್ತು ಕಳ್ಳೇಂಗಡ ಅಪ್ಪಣ್ಣ ಪಡೆದಿದ್ದಾರೆ. ಮಿಶ್ರ ಡಬಲ್ಸ್‍ನಲ್ಲಿ ಪ್ರಥಮ ಸ್ಥಾನವನ್ನು ಕೊಲ್ಲೀರ ರಚನಾ ಮತ್ತು ಐಚಂಡ ಕುಶಾಲ್ ಪ್ರಥಮ ಸ್ಥಾನಗಳಿಸಿದರೆ ದ್ವಿತೀಯ ಸ್ಥಾನವನ್ನು ಕುಪ್ಪಂಡ ರಜತ್ ಮತ್ತು ಚೆರಿಯಪಂಡ ಸಹನಾ ಪಡೆದಿದ್ದಾರೆ.

ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕಂಜಿತಂಡ ಪ್ರಕಾಶ್ ಮಂದಣ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವನ್ಯಜೀವಿ ವಾರ್ಡನ್ ಹಾಗೂ ಛಾಯಾಚಿತ್ರ ಗ್ರಾಹಕ ಕÀಂಜಿತಂಡ ಬೋಸ್ ಮಾದಪ್ಪ, ಉದಿಯಂಡ ಸುನಿಲ್, ಮೂಕಂಡ ರಮೇಶ್, ನಾಪೋಕ್ಲುವಿನ ಶಾಂತ, ಕಂಜಿತಂಡ ಮಂದಣ್ಣ, ಉಪಸ್ಥಿತರಿದ್ದರು. ಪಂದ್ಯಾಟದ ನಿರ್ದೇಶಕರಾಗಿ ಚೇಂದ್ರಿಮಾಡ ಮಧು ಬೋಪಣ್ಣ ವಹಿಸಿದ್ದು, ಪಂದ್ಯಾಟದ ವಿಜೇತರಿಗೆ ಟ್ರೋಫಿಗಳನ್ನು ವಿತರಿಸಿದರು