ಶ್ರೀಮಂಗಲ, ಡಿ. 25: ಬೆಪ್ಪುನಾಡ್‍ಗೆ ಸೇರಿರುವ ಕಾಕೋಟುಪರಂಬುವಿನಲ್ಲಿ ಇಂದು ಕೊಡವ ಜನಪದೀಯದ ವಿಶೇಷತೆ ಹಾಗೂ ಇದಕ್ಕೆ ಮತ್ತಷ್ಟು ಆಕರ್ಷಣೆ, ಮಹತ್ವ ಪೂರ್ಣದ ಕಾರ್ಯಕ್ರಮಗಳನ್ನು ಒಳಗೊಂಡಂತೆ ಜರುಗಿದ ಕೊಡವ ಮಂದ್ ನಮ್ಮೆ - 2019ರ ಸಂಭ್ರಮ ಮೇಳೈಸಿತು.ಯುನೈಟೆಡ್ ಕೊಡವ ಆರ್ಗನೈಸೇಷನ್ (ಯುಕೋ) ಸಂಘಟನೆ ಪ್ರಾರಂಭಿಸಿದ ಈ ಕೊಡವಮಂದ್ ನಮ್ಮೆ ಈ ಬಾರಿ 6ನೇ ವರ್ಷ ತಲುಪಿದ್ದು; ಈ ಹಿಂದಿನ ಕಾರ್ಯಕ್ರಮಗಳೊಂದಿಗೆ ಇನ್ನಿತರ ಹಲವು ವಿಶೇಷತೆಗಳ ಮೂಲಕ ದಿನವಿಡೀ ಜರುಗಿತು. ಜಿಲ್ಲೆಯಲ್ಲಿ ಕೊಡವ ಸಂಸ್ಕøತಿಯ ಪ್ರತೀಕವಾದ ಮಂದ್‍ನ ಮಹತ್ವವನ್ನು ಸಾರುವ ವಿವಿಧ ಜನಪದೀಯ ಪ್ರದರ್ಶನದ ಪೈಪೋಟಿ, ಸಾಂಸ್ಕøತಿಕ ರಂಗು, ವಿಚಾರ ಸಂಕಿರಣದಲ್ಲಿ ವಿಚಾರ ಮಂಡನೆ, ‘ಕೊಂಬೊ ಮೀಸೆರ ಬಂಬೊ’ - ಬೋಜಿ ಜಡೆರ ಬೋಜಕ್ಕ’ ವಿಚಾರದ ಕುರಿತ ನೇರ ಚರ್ಚೆಯಂತಹ ಕಾರ್ಯಕ್ರಮಗಳ ಮೂಲಕ ಈ ಕಾರ್ಯಕ್ರಮ ಜರುಗಿದ್ದು; ಹಲವಾರು ಮಂದಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಯುಕೋ ಸಂಘಟನೆಯೊಂದಿಗೆ ಕಾಕೋಟುಪರಂಬು ಪಾರಂಪಾರಿಕತಕ್ಕ ಮುಖ್ಯಸ್ಥರು ಮತ್ತು ಗ್ರಾಮಸ್ಥರ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಚಾಮುಂಡಿ ದೇವರಿಗೆ ಪ್ರಾರ್ಥಿಸಿ ನಂತರ ವೇದಿಕೆಯಲ್ಲಿ ತೂಕ್ ಬೊಳ್‍ಕ್‍ಗೆ ಕಾಕೋಟ್ ಅಚ್ಚ ದೇವರು ಹಾಗೂ ಗುರುಕಾರೋಣರನ್ನು ಪ್ರಾರ್ಥಿಸಿ ಅಕ್ಕಿ ಹಾಕಲಾಯಿತು.ನಂತರ 6ನೇ ವರ್ಷದ ಮಂದ್ ನಮ್ಮೆಯ ಸಂಕೇತವಾಗಿ ಆರು ಕುಶಾಲತೋಪುಗಳನ್ನು ಯುಕೊ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಕಾಕೋಟುಪರಂಬುವಿನ ಮೂಳೆರ ಪ್ರತಾಪ್, ದೆಹಲಿ ಕೊಡವ ಸಮಾಜದ ಅಧ್ಯಕ್ಷ ಮಾಚಿಮಂಡತಮ್ಮು , ಕುಯ್ಮಂಡ ಕಾಳಯ್ಯ, ಚೆಪ್ಪುಡೀರ ಸುಜುಕರುಂಬಯ್ಯ, ನೆಲ್ಲಮಕ್ಕಡ ಮಾದಯ್ಯ (ಮೊದಲ ಪುಟದಿಂದ) ಗುಂಡು ಹಾರಿಸಿ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಆಗಮಿಸುವ ಮಂದ್‍ಗಳಿಗೆ ಸಾಂಪ್ರದಾಯಿಕವಾಗಿ ತಳಿಯತಕ್ಕಿ ಬೊಳಕ್, ಒಡ್ಡೋಲಗ, ದುಡಿಕೊಟ್ಟ್ ಪಾಟ್‍ನೊಂದಿಗೆ ಕೆಂಪು ವಸ್ತ್ರವನ್ನು ಮಂದ್‍ನ ಹಿರಿಯರಿಗೆ ತಕ್ಕನ ಸಂಕೇತವಾಗಿ ನೀಡುವ ಮೂಲಕ ಮಂದ್ ಮರ್ಯಾದಿ ನೀಡಿ ಸ್ವಾಗತಿಸ ಲಾಯಿತು. ಮಂದ್ ನಮ್ಮೆಯಲ್ಲಿ ಮಹಿಳೆಯರು, ಪುರುಷರು, ಯುವಕರು, ಯುವತಿಯರು ಮತ್ತು ಮಕ್ಕಳು ಸಾಂಪ್ರದಾಯಿಕ ಉಡುಗೆ ಯಲ್ಲಿ ಸಡಗರ ಸಂಭ್ರಮದಲ್ಲಿ ಓಡಾಡುತ್ತಿದ್ದರು. ವಿಚಾರ ಗೋಷ್ಠಿಯಲ್ಲಿ ತದೇಕಚಿತ್ತದಿಂದ ಆಲಿಸಿ ವಿಚಾರ ತಿಳಿದುಕೊಂಡರು. ನಂತರ ನಡೆದ ಸಾಂಸ್ಕøತಿಕ ಪೈಪೋಟಿ ಕಾರ್ಯಕ್ರಮ ದಲ್ಲಿಕೋಲಾಟ್, ಉಮ್ಮತ್ತಾಟ್, ಬೊಳಕಾಟ್, ಕಪ್ಪೆಯಾಟ್, ಪರೆಯಕಳಿ, ತೆಂಗಿನಕಾಯಿಗೆಗುಂಡು ಹೊಡೆಯುವ ಸ್ಪರ್ಧೆಗೆ ಚಾಲನೆ ನೀಡಲಾಯಿತು.
ನಂತರ ನಡೆದ “ಆರಅರ್‍ಂಜಿತ್ ಬೇರ ಪರಿವೊ” ವಿಚಾರ ಗೋಷ್ಠಿಯು ಕರ್ನಾಟಕಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಳ್ಳಿಯಡ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಂದ್‍ರ ಬೀರ್ಯ ವಿಚಾರದಲ್ಲಿ ಉಪನ್ಯಾಸಕಿ ಚೋಕಿರ ಅನಿತಾದೇವಯ್ಯ ಅವರು ಮಾತನಾಡಿ ಮಂದ್‍ನ ಪ್ರಾಮುಖ್ಯತೆ, ಉದ್ದೇಶದ ವಿವರಣೆಯೊಂದಿಗೆ ಮಂದ್‍ಕೊಡವರ ಸಾಂಸ್ಕøತಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ ಎಂದರು. ಮಂದ್‍ಗಳು ಕೊಡವರ ನ್ಯಾಯ ಪಂಚಾಯಿತಿಯ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದ್ದವು. ಈಗಲು ಸಹ ಹಲವು ಮಂದ್‍ಗಳು ಈ ಕಾರ್ಯ ಮಾಡುತ್ತಿವೆ. ಕೊಡವರ ಸಂಸ್ಕøತಿಯಲ್ಲಿ ಮಂದ್‍ಗೆ ಹೆಚ್ಚಿನ ಪ್ರಾಮುಖ್ಯತೆ ಇರುವ ಬಗ್ಗೆ ವಿಚಾರ ಮಂಡಿಸಿದರು.
“ದೇಶತ್‍ರ ಸ್ವಾತಂತ್ರ ಮಾಪಡೆಲ್ ಕೊಡವ ಮೂಪಂಗ” ಎಂಬ ವಿಚಾರದಲ್ಲಿ ಪ್ರೊ.ಇಟ್ಟೀರ ಬಿದ್ದಪ್ಪ ಅವರು ವಿಚಾರ ಮಂಡಿಸಿ ಕೊಡವರು ಸ್ವಾಂತತ್ರ್ಯ ಹೋರಾಟದಲ್ಲಿ ಕೆಜ್ಜೆದೆ ಯಿಂದ ಹೋರಾಟ ಮಾಡಿದ್ದಾರೆ. ಕೊಡವರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಯಾರು ಸಂಶಯದ ದೃಷ್ಠಿಯಿಂದ ನೋಡುವ ಅಗತ್ಯವಿಲ್ಲ. ಕೊಡವರು ಈ ಹೋರಾಟದಲ್ಲಿ ಗುಂಡಿಗೆ ಎದೆ ಒಡ್ಡಿದ್ದಾರೆ ಹೊರತು ಬೆನ್ನು ಒಡ್ಡಿದ ಯಾವುದೇ ಉದಾ ಹರಣೆ ಇಲ್ಲ ಎಂದು ಹೇಳಿದರು. ಇತಿಹಾಸಗಾರರು ಅಲ್ಪಸಂಖ್ಯಾತ ಕೊಡವರನ್ನು ಸ್ವಾಂತತ್ರ್ಯ ಹೋರಾಟದಲ್ಲಿ ತೊಡಗಿಸಿ ಕೊಂಡವರ ತ್ಯಾಗ ಬಲಿದಾನ ಮತ್ತು ದೇಶಪ್ರೇಮ ಮತ್ತು ಸಾಹಸವನ್ನು ಉಲ್ಲೇಖಿಸದೆ ಬಹುಸಂಖ್ಯಾತರ ಬಗ್ಗೆ ಬೆಳಕು ಚೆಲ್ಲಿದ್ದಾರೆ ಎಂದು ಹೇಳಿದರು.
ಸ್ವಾಂತತ್ರ್ಯ ಚಳುವಳಿಯಲ್ಲಿ ನೂರಾರೂಕೊಡವ ಮುಖಂಡರು ಕೆಚ್ಚೆದೆ ಯಿಂದ ಹೋರಾಟ ಮಾಡಿದ್ದಾರೆ. ಮಡಿಕೇರಿ ಕೋಟೆಯಲ್ಲಿ ಬ್ರಿಟೀಷ್ ಧ್ವಜವನ್ನು ಕೆಳಗಿಳಿಸಿದವರೇ ಮಲ್ಲೇಂಗಡ ಚಂಗಪ್ಪ, ಮಂಡೇಪಂಡ ಕಾರ್ಯಪ್ಪ, ಬಿ.ಜಿ.ಗಣಪಯ್ಯ ಎಂದು ಹೇಳಿದ ಅವರು ಸ್ವಾತಂತ್ರ್ಯ ಚಳುವಳಿಗೆ ಹೋಗಲು ಬಿಡದೆ ಇದ್ದದಕ್ಕಾಗಿ ಯುವತಿ ಕೋಳೆರ ಕಾವೇರಿಅವರು ಪ್ರಾಣತ್ಯಾಗ ಮಾಡಿರುವ ಉದಾಹರಣೆ ಇದೆ. ಕೊಡವರಲ್ಲಿ ಮಹಿಳೆಯರು ಸಹ ಸ್ವಾತಂತ್ರ್ಯ ಚಳುವಳಿಯಲ್ಲಿ ದುಮುಕ್ಕಿರು ವುದಕ್ಕೆ ಇದು ಉದಾಹರಣೆ ಎಂದು ಹೇಳಿದರು.
ಕೊಡವಾಮೆರ ಬೊಳ್‍ಚೆಲ್ ಪೊಮ್ಮಕ್ಕಡ ನೈಪು ವಿಷಯದಲ್ಲಿ ವಿಚಾರ ಮಂಡಿಸಿದ ಪತ್ರಕರ್ತ ಡಾ.ಐತಿಚಂಡ ರಮೇಶ್‍ಉತ್ತಪ್ಪ ಅವರು ಕೊಡವ ಸಂಸ್ಕøತಿಯಲ್ಲಿ ಕೊಡವ ಮಹಿಳೆಯರ ಪಾತ್ರ ಹಿರಿಯದ್ದಾಗಿದೆ. ಕೊಡವ ಮಹಿಳೆಯರು ಕೊಡವ ಸಂಸ್ಕøತಿಯ ಹೆಗ್ಗುರುತು ಮತ್ತು ಭಾಗ್ಯಲಕ್ಷ್ಮಿಗಳು ಎಂದು ಬಣ್ಣಿಸಿದ ಅವರು ಕೊಡವರ ಪುರುಷರು, ಮಕ್ಕಳ ಸಾಧನೆಯ ಹಿಂದೆ ತಾಯಿಯ ಪಾತ್ರ ಇದೆ ಎಂದು ಹೇಳಿದರು.
‘ದೇವನೆಲೆಲ್ ಕೊಡವ ಸಾಂಸ್ಕøತಿಕ ಆಟ್’ ವಿಚಾರದಲ್ಲಿ ಚೇನಂಡ ಸುರೇಶ್ ನಾಣಯ್ಯ ಅವರು ಕೊಡವ ಜಾನಪದ ಮತ್ತು ಸಾಂಸ್ಕøತಿಕ ಕಲೆಯು ದೇವನೆಲೆಯಲ್ಲಿ ಪ್ರಾಮುಖ್ಯತೆ ಪಡೆದಿದೆ. ಪಾರಂಪರಿಕವಾಗಿ ದೇವ ನೆಲೆಯಲ್ಲಿ ಕೊಡವ ಜಾನಪದ ಕಲೆ, ಸಾಂಸ್ಕøತಿಕ ಪ್ರದರ್ಶನ ಹಬ್ಬದ ಅವಿಭಾಜ್ಯ ಅಂಗವಾಗಿದೆ ಎಂದು ವಿವರಿಸಿದರು.
ಈ ಸಂದರ್ಭ ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ ಕಳೆದ 6ವರ್ಷದಿಂದ ಯುಕೊ ಸಂಘಟನೆಯಿಂದ ಮಂದ್ ನಮ್ಮೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ನಮ್ಮೆ ಆಚರಣೆಯ ಪ್ರಭಾವದಿಂದ ಮುಚ್ಚಿ ಹೋಗಿದ್ದ ಬಹಳಷ್ಟು ಮಂದ್‍ಗಳು ತೆರೆದಿವೆ. ಕೊಡವರ ಧಾರ್ಮಿಕ, ಸಾಂಸ್ಕøತಿಕ ಹೆಗ್ಗುರುತಾದ ಮಂದ್‍ಗಳಲ್ಲಿ ಹಿಂದಿನ ಗತವೈಭವವನ್ನು ಕಾಣಬೇಕಾಗಿದೆ ಈ ನಿಟ್ಟಿನಲ್ಲಿ ಮಂದ್‍ಗಳನ್ನು ಉಳಿಸಿ ಕೊಂಡು ಅವುಗಳಿಗೆ ಮಹತ್ವ ನೀಡಬೇಕಾದಅಗತ್ಯತೆ ಬಗ್ಗೆ ಒತ್ತಿ ಹೇಳಿದರು.
ಆಗಮಿಸಿದ ಸಾವಿರಾರೂಜನರಿಗೆ ಪುತ್ತರಿ ವಿಶೇಷ ಖಾದ್ಯ ತಂಬಿಟ್ಟಿ ನೊಂದಿಗೆ ಊಟೋಪ ಚಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ವೇದಿಕೆಯಲ್ಲಿ ಕಾಕೋಟ್‍ಪರಂಬು ದೇವತಕ್ಕರಾದ ಅಮ್ಮಂಡಿರಚೇತನ್, ಬೇರೆರ ಬೆಳ್ಯಪ್ಪ, ಕೊಂಡಿರ ಪೃಥ್ವಿ ಮುತ್ತಣ್ಣ ವೇದಿಕೆಯಲ್ಲಿ ಹಾಜರಿದ್ದರು.
-ಅಣ್ಣೀರ ಹರೀಶ್ ಮಾದಪ್ಪ