ಭೂಮಿ ಸೂರ್ಯರ ನಡುವೆ ಚಂದ್ರ ದಾಟುವ ಸಮಯದಲ್ಲಿ ಸೂರ್ಯನ ಅಂಚು ಬೆಂಕಿಯ ಉಂಗುರದಂತೆ ನಮ್ಮ ಕಣ್ಣಿಗೆ ಕಾಣಿಸುತ್ತದೆ. ಆ ತರಹದ ಸೂರ್ಯಗ್ರಹಣವು ತಾ. 26ರಂದು ಬೆಳಿಗ್ಗೆ 8 ಗಂಟೆಯಿಂದ ಸುಮಾರು 3 ಗಂಟೆಗಳ ಕಾಲ ಇರುತ್ತದೆ.

ಕೊಡಗಿನಲ್ಲಿ ಬೆಳಿಗ್ಗೆ ಸುಮಾರು 8-05 ಗಂಟೆಯಿಂದ 11-10ರ ತನಕ ಗ್ರಹಣ ಕಾಲವು ಇರುವದು. ಗ್ರಹಣ ಕಾಲದಲ್ಲಿ ಸೂರ್ಯ, ಚಂದ್ರ, ಬುಧ, ಗುರು, ಶನಿ, ಕೇತು ಸಂಗಮದೊಡನೆ, ಶುಕ್ರನು ಮುಂದಿನ ರಾಶಿಯಲ್ಲಿ ಕುಜನು ಹಿಂದಿನ ರಾಶಿಯಲ್ಲಿ ಇರುತ್ತಾರೆ. ಗ್ರಹಣವು ಮೂಲಾ ನಕ್ಷತ್ರದಲ್ಲಿ ನಡೆಯುವದರಿಂದ ಧÀನುರ್‍ಲಗ್ನ, ಧನುರ್‍ರಾಶಿಯವರು ದೈವಿಕ ಪ್ರಾರ್ಥನೆ ಮಾಡಿದರೆ ಶಾಂತಿ ಲಭಿಸುತ್ತದೆ. ಮೂಲ ನಕ್ಷತ್ರ ಮತ್ತು ಪೂರ್ವಷಾಢ ನಕ್ಷತ್ರದವರು ವಿಶೇಷ ಪ್ರಾರ್ಥನೆ ಸಲ್ಲಿಸಬೇಕು. ಈ ತರಹದ ಗ್ರಹಣ ಕಾಲದಲ್ಲಿ ಶುಭ ಕಾರ್ಯಗಳನ್ನು ಮಾಡುವದು ಒಳ್ಳೆಯದಲ್ಲವೆಂದು ವೇದವು ಹೇಳುತ್ತದೆ. ನಾವೆಲ್ಲಾ ಸಾಮಾನ್ಯ ಹುಲುಮಾನವರು, ಈ ಭೂಮಿಗೆ ಪ್ರಾಣವನ್ನೀಯುತ್ತಿರುವ ಸೂರ್ಯ ಶಕ್ತಿಯು ಗ್ರಹಣ ಕಾಲದಲ್ಲಿ ಕಡಿಮೆಯಾಗುತ್ತದೆ ಎಂದು ವೇದವೂ ಹೇಳುತ್ತದೆ. ವಿಜ್ಞಾನವು ಹೇಳುತ್ತದೆ. ಆ ಕಠಿಣ ಕಾಲದಲ್ಲಿ ಭೂಮಿಯಲ್ಲಿರುವ ಎಲ್ಲಾ ಜೀವಿಗಳ ಪ್ರಜ್ಞೆಗೆ ಮಂಕು ಕವಿದಿರುತ್ತದೆ ಎಂದೂ ಹೇಳಲಾಗುತ್ತದೆ. ಗ್ರಹಣವು ಗೋಚರಿಸುವ ಭೂಮಿಯ ಭಾಗಕ್ಕೆ ಆಪತ್ತು, ಯುದ್ಧ ಸಮಾನವಾದ ಆಪತ್ತು ಎದುರಾಗಬಹುದು.

ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗಿರುವ ನಾಯಕರು ಜನವಿರೋಧಿ ಕಾನೂನು ವಿರೋಧಿ ತೀರ್ಮಾನ ಕೈಗೊಳ್ಳುವದು. ಲೋಕಾಪವಾದ ಪ್ರಪಂಚದಲ್ಲಿ ಹೆಸರುಗಳಿಸಿರುವ ಕೆಲವು ನಾಯಕರುಗಳಿಗೆ ಬರಬಹುದು. ರಾಜಕಾರಣಿಗಳು ಭದ್ರತೆಯನ್ನು ಗಟ್ಟಿಗೊಳಿಸುವದೊಳಿತು. ಕೆಲವು ವಿಶ್ವ ಮಟ್ಟದ ನಾಯಕರುಗಳಿಗೆ ಪ್ರಾಣಾಪಾಯವು ಎದುರಾಗಬಹುದು. ಗ್ರಹಣವು ಧನುರ್‍ರಾಶಿಯಲ್ಲಿ ನಡೆಯುವದರಿಂದ ಸೌದಿ ಅರೇಬಿಯಾ, ಸಿಂಗಾಪುರ ದೇಶಗಳಿಗೆ ಹೆಚ್ಚಿನ ಕಷ್ಟಕಾಲವನ್ನೆಬಹುದು. ಪ್ರಾಕೃತಿಕ ವಿಕೋಪ ಸಾಧ್ಯತೆಯಿದೆ ಗ್ರಹಣ ಕಾಲಕ್ಕೆ ಮೂರು ಗಂಟೆಗಳ ಹಿಂದೆ ಊಟ ಮಾಡುವದು, ತಿಂಡಿ-ತಿನಿಸು ತಿನ್ನುವದು ಒಳಿತಲ್ಲ, ಸೂರ್ಯ ಗ್ರಹಣ ಕಳೆದು 7 ದಿನಗಳ ಕಾಲ ಗ್ರಹಣದ ಪ್ರಭಾವ ಇರುತ್ತದೆ. ಗ್ರಹಣ ಕಾಲದಲ್ಲಿ ಗಾಯಿತ್ರಿ ಮಂತ್ರ, ಪಂಚಾಕ್ಷರಿ ಜಪಿಸಿದರೆ ಒಳ್ಳೆಯದು. ರಾಮಾಯಣದ ಸುಂದರ ಕಾಂಡ, ಪಾರಾಯಣವು ಒಳಿತು.

?ಕರೋಟಿರ ಶಶಿ ಸುಬ್ರಮಣಿ,

ವೀರಾಜಪೇಟೆ.ಭೂಮಿ ಸೂರ್ಯರ ನಡುವೆ ಚಂದ್ರ ದಾಟುವ ಸಮಯದಲ್ಲಿ ಸೂರ್ಯನ ಅಂಚು ಬೆಂಕಿಯ ಉಂಗುರದಂತೆ ನಮ್ಮ ಕಣ್ಣಿಗೆ ಕಾಣಿಸುತ್ತದೆ. ಆ ತರಹದ ಸೂರ್ಯಗ್ರಹಣವು ತಾ. 26ರಂದು ಬೆಳಿಗ್ಗೆ 8 ಗಂಟೆಯಿಂದ ಸುಮಾರು 3 ಗಂಟೆಗಳ ಕಾಲ ಇರುತ್ತದೆ.

ವೀರಾಜಪೇಟೆ.