ನಾಪೆÇೀಕ್ಲು, ಡಿ. 25: ನಮ್ಮ ಸಂಸ್ಕøತಿ, ಸಂಪ್ರದಾಯವೇ ಮುಂದಿನ ಪೀಳಿಗೆಗೆ ಜೀವಾಳ. ಅದನ್ನು ಮರೆತರೆ ನಮ್ಮ ವಿನಾಶ ಖಂಡಿತ ಎಂದು ಅಂತರಾಷ್ಟ್ರೀಯ ಕ್ರೀಡಾಪಟು, ಏಕಲವ್ಯ ಪ್ರಶಸ್ತಿ ವಿಜೇತ ತೀತಮಾಡ ಅರ್ಜುನ್ ದೇವಯ್ಯ ಹೇಳಿದರು.
ನಾಪೆÇೀಕ್ಲು ಕೊಡವ ಸಮಾಜದಲ್ಲಿ ಏರ್ಪಡಿಸಲಾಗಿದ್ದ ಅಂತರ ಗ್ರಾಮ ‘ಪುತ್ತರಿ ಊರೊರ್ಮೆ-ಸಂಸ್ಕøತಿರ ಆಯಿಮೆ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡವರಿಗೆ ತಮ್ಮದೇ ಆದ ಸಂಸ್ಕøತಿ, ಪದ್ಧತಿ-ಪರಂಪರೆ ಇದೆ. ಅದನ್ನು ಎಲ್ಲರೂ ಪಾಲಿಸಬೇಕು. ಅದನ್ನು ಮರೆತರೆ ನಮ್ಮನ್ನು ನಾವು ಮರೆತಂತೆ ಎಂದರು. ಕೊಡವರ ಸಂಖ್ಯೆ ಕಡಿಮೆಯಿದ್ದ ಕಾರಣ ಅವರು ಬರೀ ಕಿಂಗ್ ಮೇಕರ್ಸ್ ಎಂದು ಕರೆಯಲ್ಪಡುತ್ತಾರೆ. ಆದರೆ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್, ಐಪಿಎಸ್, ಕೆಎಎಸ್ ಪರೀಕ್ಷೆ ಬರೆಯಬೇಕು. ಆಗ ಮುಂದಿನ 20 ವರ್ಷಗಳಲ್ಲಿ ಕೊಡವರು ಕಿಂಗ್ ಮೇಕರ್ಸ್ ಅಲ್ಲ, ಕಿಂಗ್ ಆಗಲು ಸಾಧ್ಯ ಎಂದರು.
ಮಕ್ಕಳನ್ನು ದುಡ್ಡು ಮಾಡುವ ಯಂತ್ರ ಮಾಡಬೇಡಿ. ಮಕ್ಕಳು ಎಲ್ಲರಿಗೂ ಮಾದರಿಯಾಗಬೇಕು. ಆಗ ಮಾತ್ರ ಉನ್ನತ ಸಾಧನೆ ಮಾಡಿ ದಂತಾಗುತ್ತದೆ ಎಂದು ಪೆÇೀಷಕರಿಗೆ ಸಲಹೆ ನೀಡಿದರು. ಕೊಡವರಿಗೆ ಅಹಂ ಜಾಸ್ತಿ ಎಂಬ ಮಾತಿದೆ. ಆದರೆ ಕೊಡವರಿಗೆ ಅಹಂ ಇಲ್ಲ. ಆತ್ಮಾಭಿಮಾನ ಹೆಚ್ಚಿದೆ. ಆತ್ಮಾಭಿಮಾನ ಅಹಂ ಆಗಬಾರದು. ಅಹಂನಿಂದ ನಮ್ಮ ನಮ್ಮೊಳಗೆ ಬಿರುಕು ಉಂಟಾಗಬಾರದು ಎಂದು ಎಚ್ಚರಿಸಿ ದರು. ಬಿನ್ನಾಭಿಪ್ರಾಯ ಸಹಜ. ಅದನ್ನು ತಿದ್ದಿ ನಡೆಯಬೇಕು. ಹಿಂದಿನಿಂದ ನಿಂದಿಸುವದನ್ನು ಬಿಟ್ಟು, ಅವರವರು ಮಾಡಿದ ತಪ್ಪುಗಳನ್ನು ಸರಿಪಡಿಸಿ ಕೊಳ್ಳಬೇಕು ಎಂದರು.
ವಿಚಾರ ಮತ್ತು ತತ್ವಗಳಿಂದ ಜನರ ಜೀವನ ಬದಲಿಸಲು ಸಾಧ್ಯವಿಲ್ಲ. ಜನಾಂಗ ಉಳಿಯಬೇಕಾದರೆ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೇಕು. ಮಾತೃಭಾಷೆ ಯನ್ನು ಮಕ್ಕಳಿಗೆ ಕಲಿಸಬೇಕು. ಕೊಡವ ಭಾಷೆಯನ್ನು ಕೊಡವ ಭಾಷೆಯ ಲ್ಲಿಯೇ ಮಾತನಾಡಬೇಕು ಎಂದು ಸಲಹೆ ನೀಡಿದರು. ಯಾವ ದೇಶ ತಮ್ಮ ಸಂಸ್ಕøತಿಯನ್ನು ಮರೆಯುತ್ತ ದೆಯೋ ಆ ದೇಶ ನಿರ್ನಾಮವಾಗು ತ್ತದೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ ಮಾತನ್ನು ನೆನಪಿಸಿದರು.
ಕೊಡವರು ಕಬ್ಬಿಣದಂತೆ. ಅದನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ. ಆದರೆ ಕಬ್ಬಿಣಕ್ಕೆ ತುಕ್ಕು ಹಿಡಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಎಲ್ಲರೂ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು. ಒಡಕು ಮೂಡಿಸುವ, ಸಣ್ಣ ಸಣ್ಣ ವಿಚಾರಗಳಿಗೆ ಕಿಚ್ಚು ಹಚ್ಚಿಸುವ ಕೆಲಸ ಮಾಡಬೇಡಿ ಎಂದು ಕಿವಿಮಾತು ಹೇಳಿದರು.
ಸಂಸಾರದಲ್ಲಿ ಸಂಸ್ಕಾರವಿಲ್ಲದಿದ್ದರೆ ಸಂಸಾರ ನಿರ್ಮೂಲ ಆಗುತ್ತದೆ. ವ್ಯಕ್ತಿಯಲ್ಲಿ ಸಂಸ್ಕಾರವಿಲ್ಲದಿದ್ದರೆ ಆ ವ್ಯಕ್ತಿ ಏಳಿಗೆಯಾಗಲು ಸಾಧ್ಯವಿಲ್ಲ. ಯುವ ಜನಾಂಗ ಕೊಡವಾಮೆ ಏನು ಎಂಬುದನ್ನು ಕಲಿಯಬೇಕು. ಸಾಧನೆ ಮಾಡುವದು ಮುಖ್ಯವಲ್ಲ. ಸಾಧಿಸುವ ಛಲ ಮುಖ್ಯ ಎಂದರು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪೆÇ್ರೀತ್ಸಾಹಿಸಿ. ಮಕ್ಕಳ ಮನಸ್ಸಿನ ವಿಚಾರಕ್ಕೆ ಸ್ಪಂದಿಸಿ ಎಂದು ಪೆÇೀಷಕರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಚೆಕ್ಕೇರ ಮನು ಸೋಮಯ್ಯ, ಬೊಟ್ಟೋಳಂಡ ಕಾಶಿ ಅಚ್ಚಯ್ಯ, ಡಿವೈಎಸ್‍ಪಿ ಅಂಜಪರವಂಡ ಕವಿತಾ ಕಾರ್ಯಪ್ಪ, ತೆಕ್ಕಡ ಭವಾನಿ ಮಾತನಾಡಿದರು.
ಈ ಸಂದರ್ಭದಲ್ಲಿ ಕೊಡವ ಸಾಂಸ್ಕøತಿಕ ತರಬೇತುದಾರ ಬೊಟ್ಟೋಳಂಡ ಕಾಶಿ ಅಚ್ಚಯ್ಯ, ಡಿವೈಎಸ್‍ಪಿ ಅಂಜಪರವಂಡ ಕವಿತಾ ಕಾರ್ಯಪ್ಪ, ಪರ್ವತಾರೋಹಿ ತೆಕ್ಕಡ ಭವಾನಿ ಅವರನ್ನು ಸನ್ಮಾನಿಸಲಾಯಿತು. 10ನೇ ತರಗತಿಯಿಂದ ಸ್ನಾತಕೋತ್ತರ ದಲ್ಲಿ ವ್ಯಾಸಂಗ ಮಾಡುತ್ತಿರುವ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸಮಾಜದ ಸದಸ್ಯರ 26 ಮಕ್ಕಳಿಗೆ ಅವರ ಪೆÇೀಷಕರ ಜೊತೆಯಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಪೆÇೀಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ವಹಿಸಿದ್ದರು.
ವೇದಿಕೆಯಲ್ಲಿ ಮಾಜಿ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಉಪಾಧ್ಯಕ್ಷ ಮಾಳೆಯಂಡ ಅಯ್ಯಪ್ಪ, ಖಜಾಂಚಿ ಅಪ್ಪಾರಂಡ ಸುಧೀರ್ ಅಯ್ಯಪ್ಪ, ಸಹಕಾರ್ಯದರ್ಶಿ ಮಾಚೆಟ್ಟಿರ ಕುಶು ಕುಶಾಲಪ್ಪ, ಎಲ್ಲಾ ನಿರ್ದೇಶಕರು ಇದ್ದರು.
ಬಟ್ಟೀರ ಡಯನಾ ಸುಬ್ಬಯ್ಯ ಪ್ರಾರ್ಥನೆ, ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಸ್ವಾಗತ, ಬಾಳೆಯಡ ದಿವ್ಯಾ ಮಂದಪ್ಪ ನಿರೂಪಿಸಿ, ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಪೇರೂರು ತಂಡದಿಂದ ಬೊಳಕಾಟ್, ನಾಪೆÇೀಕ್ಲು ತಂಡದಿಂದ ಕೋಲಾಟ್, ಕೊಳಕೇರಿ ತಂಡದಿಂದ ಉಮ್ಮತ್ತಾಟ್ ಹಾಗೂ ಪರೆಯಕಳಿ ಪ್ರದರ್ಶನ ಏರ್ಪಡಿಸಲಾಗಿತ್ತು.
ತೆಂಗಿನಕಾಯಿಗೆ ಗುಂಡು ಹಾರಿಸುವ ಸ್ಪರ್ಧೆಯಲ್ಲಿ ಅಜ್ಜೇಟಿರ ಗೌತಮ್ ಪ್ರಥಮ, ಮಾಳೆಯಂಡ ಅಶ್ವಿನಿ ಅಪ್ಪಣ್ಣ ದ್ವಿತೀಯ, ಮಣವಟ್ಟಿರ ಬೋಪಣ್ಣ ತೃತೀಯ ಸ್ಥಾನ ಪಡೆದರು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿಜೇತ ತಂಡಗಳಿಗೆ ಟ್ರೋಫಿ ವಿತರಿಸಲಾಯಿತು.
- ಪ್ರಭಾಕರ್ / ದುಗ್ಗಳ