ಚೆಟ್ಟಳ್ಳಿ, ಡಿ. 24: ಸುಂಟಿಕೊಪ್ಪ ಸಮೀಪದ ಅಮಿಟಿ ಯುನೈಟೆಡ್ ಗದ್ದೆಹಳ್ಳ ಇವರ ವತಿಯಿಂದ ಗದ್ದೆಹಳ್ಳದಲ್ಲಿ ಎರಡು ದಿನಗಳ ಕಾಲ ನಡೆದ 20 ವರ್ಷ ವಯೋಮಿತಿ ಯೊಳಗಿನ ಜಿಲ್ಲಾ ಮಟ್ಟದ 6+2 ಜನರ ಕಾಲ್ಚೆಂಡು ಪಂದ್ಯಾಟದಲ್ಲಿ ಬ್ಲೂಸ್ಟಾರ್ ಪಾಲೆಮಾಡು ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿದೆ.
ದ್ವಿತೀಯ ಸ್ಥಾನವನ್ನು ಯುನೈಟೆಡ್ ಎಫ್.ಸಿ ಪಡೆದಿದೆ. ಫೈನಲ್ ಪಂದ್ಯದಲ್ಲಿ ಪಾಲೆಮಾಡು ತಂಡವು 2-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು. ಇದಕ್ಕೂ ಮೊದಲು ನಡೆದ ಮೊದಲನೇ ಸೆಮಿಫೈನಲ್ ಪಂದ್ಯವು ಹೊಲಮಾಳ ಹಾಗೂ ಬ್ಲೂಸ್ಟಾರ್ ಪಾಲೆಮಾಡು ತಂಡಗಳ ನಡುವೆ ನಡೆಯಿತು. ಪಾಲೆಮಾಡು ತಂಡವು 1-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ದ್ವಿತೀಯ ಸೆಮಿಫೈನಲ್ ಪಂದ್ಯವು ಯುನೈಟೆಡ್ ಎಫ್.ಸಿ ಅಮ್ಮತ್ತಿ ಹಾಗೂ ಸಂದೀಪ್ ಫ್ರೆಂಡ್ಸ್ ಮಡಿಕೇರಿ ತಂಡಗಳ ನಡುವೆ ನಡೆಯಿತು. ಯುನೈಟೆಡ್ ಎಫ್.ಸಿ ಅಮ್ಮತ್ತಿ ತಂಡವು 1-0 ಗೋಲುಗಳಿಂದ ಜಯಗಳಿಸಿ ಫೈನಲ್ ಪ್ರವೇಶಿಸಿತು. ಪಂದ್ಯಾಟದಲ್ಲಿ ಒಟ್ಟು 28 ತಂಡಗಳು ಭಾಗವಹಿಸಿದ್ದವು.
ಪಂದ್ಯಾಟದ ಅತ್ಯುತ್ತಮ ತಂಡವಾಗಿ ರಿಯಲ್ ಸಿಟಿ ಹೊಲಮಾಳ ‘ಬಿ’ ಅತ್ಯುತ್ತಮ ಆಟಗಾರ ಬ್ಲೂಸ್ಟಾರ್ ಪಾಲೆಮಾಡು ತಂಡದ ತಂಜೀಮ್, ಅತ್ಯುತ್ತಮ ಗೋಲ್ ಕೀಪರ್ ಬ್ಲೂಸ್ಟಾರ್ ತಂಡದ ಕಿರಣ್, ಬೆಸ್ಟ್ ಡಿಫೆಂಡರ್ ಶಾಹುಲ್ ಹಮೀದ್ ಯುನೈಟೆಡ್ ಅಮ್ಮತ್ತಿ, ಟಾಪ್ ಸ್ಕೋರರ್ ಸೂರ್ಯ ಸಂದೀಪ್ ಫ್ರೆಂಡ್ಸ್ ಮಡಿಕೇರಿ ಪಡೆದು ಕೊಂಡರು. ಪಂದ್ಯಾಟದ ತೀರ್ಪು ಗಾರರಾಗಿ ರಾಜಿಕ್, ಮಂಜುನಾಥ್ ಹಾಗೂ ಇರ್ಷಾದ್ ಕಾರ್ಯ ನಿರ್ವಹಿಸಿದರು. - ಇಸ್ಮಾಯಿಲ್