ಕುಶಾಲನಗರ, ಡಿ. 22: ಕುಶಾಲನಗರದಲ್ಲಿ ಠಾಣಾಧಿಕಾರಿಗಳಾಗಿ ಕೆಲವು ಕಾಲ ಸೇವೆ ಸಲ್ಲಿಸಿದ್ದ ಮಡಿಕೇರಿ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹುಟ್ಟಹಬ್ಬವನ್ನು ಅವರ ಅಭಿಮಾನಿಗಳು ಇತ್ತೀಚೆಗೆ ಕೂಡಿಗೆಯ ಶ್ರೀಶಕ್ತಿ ವೃದ್ಧಾಶ್ರಮದಲ್ಲಿ ಆಚರಿಸಿದ ಅಪರೂಪದ ಕಾರ್ಯಕ್ರಮವೊಂದು ನಡೆಯಿತು.

ಮಡಿಕೇರಿಯಿಂದ ಕೂಡಿಗೆಗೆ ಆಗಮಿಸಿದ ಅನೂಪ್ ಮಾದಪ್ಪ ಅವರು ತಮ್ಮ ಆಪ್ತರೊಂದಿಗೆ ಆಶ್ರಮದಲ್ಲಿ ಕೇಕ್ ಕತ್ತರಿಸಿ ಸಿಹಿಯನ್ನು ಆಶ್ರಮದ ವಯೋವೃದ್ಧರಿಗೆ ಹಂಚುವ ಮೂಲಕ ಆಶೀರ್ವಾದ ಪಡೆದರು. ಕಾರ್ಯಕ್ರಮದಲ್ಲಿ ಅನೂಪ್ ಮಾದಪ್ಪ ಅಭಿಮಾನಿಗಳ ಪರವಾಗಿ ಆಟೋ ಚಾಲಕ ನವೀನ್, ಪತ್ರಕರ್ತ ಟಿ.ಆರ್. ಪ್ರಭುದೇವ್ ಅವರುಗಳ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸ ಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅನೂಪ್ ಮಾದಪ್ಪ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಬಳಿಕ ವೃದ್ದಾಶ್ರಮದ ವಯೋವೃದ್ಧರಿಗೆ ಫಲಾಹಾರ ವಿತರಿಸಲಾಯಿತು. ಈ ಸಂದರ್ಭ ಬಳಗದ ಮುನೀರ್, ಗಯಾಜ್, ಮಡಿಕೇರಿ ವೃತ್ತ ನಿರೀಕ್ಷಕರ ಕಛೇರಿ ಸಿಬ್ಬಂದಿಗಳಾದ ಕಿರಣ್, ಭಾನುಪ್ರಕಾಶ್, ಪೂರ್ಣ ಅನೂಪ್ ಮಾದಪ್ಪ, ವೃದ್ಧಾಶ್ರಮ ವ್ಯವಸ್ಥಾಪಕ ಚಂದ್ರು ಮತ್ತಿತರರು ಇದ್ದರು.