ಮಡಿಕೇರಿ, ಡಿ. 23: ಹಾಕಿ ಕರ್ನಾಟಕ ವತಿಯಿಂದ ಮೈಸೂರಿನಲ್ಲಿ ಚಾಮುಂಡಿ ವಿಹಾರ್ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಜೂನಿಯರ್ ಹಾಗೂ ಸೀನಿಯರ್ ಮಹಿಳಾ ಹಾಕಿ ಲೀಗ್ ಪಂದ್ಯಾವಳಿಯಲ್ಲಿ ಮಡಿಕೇರಿಯ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯಿ) ಹಾಗೂ ಮೈಸೂರು ಡಿವೈಇಎಸ್ ತಂಡಗಳು ಜಯಗಳಿಸಿದೆ.
19 ವರ್ಷದೊಳಗಿನ ಜೂನಿಯರ್ ವಿಭಾಗದ ಪಂದ್ಯಾವಳಿಯಲ್ಲಿ ಪ್ರಥಮ ಪಂದ್ಯದಲ್ಲಿ ಮೈಸೂರು ಡಿವೈಇಎಸ್‍ಬಿ ತಂಡ ಮೈಸೂರು ‘ಎ’ ತಂಡವನ್ನು 3-2 ಗೋಲುಗಳಿಂದ ಸೋಲಿಸಿತು. ದ್ವಿತೀಯ ಪಂದ್ಯದಲ್ಲಿ ಮಡಿಕೇರಿ ಸಾಯಿ ತಂಡ ಮೈಸೂರು ‘ಬಿ’ ತಂಡವನ್ನು 3-0 ಗೋಲಿನಿಂದ ಸೋಲಿಸಿತು. ಇನ್ನೊಂದು ಪಂದ್ಯದಲ್ಲಿ ಸಾಯಿ ಮಡಿಕೇರಿ ತಂಡ ಮೈಸೂರು ‘ಎ’ ತಂಡವನ್ನು 7-0 ಗೋಲುಗಳಿಂದ ಸೋಲಿಸಿತು. ಅಂತಿಮವಾಗಿ ಮಡಿಕೇರಿ ಸಾಯಿ ತಂಡ 6 ಅಂಕಗಳೊಂದಿಗೆ ಬಹುಮಾನ ಗೆದ್ದುಕೊಂಡರೆ; ಮೈಸೂರು ‘ಬಿ’ ತಂಡ ದ್ವಿತೀಯ ಸ್ಥಾನ ಗಳಿಸಿತು. ಬೆಸ್ಟ್ ಗೋಲ್‍ಕೀಪರ್ ಆಗಿ ಸಾಯಿ ತಂಡ ಅರ್ಪಿತಾ, ಬೆಸ್ಟ್ ಡಿಫೆಂಡರ್ ಆಗಿ ಮೈಸೂರಿನ ವಿಶು ಮಿಡ್ ಫೀಲ್ಡರ್ ಆಗಿ ಮೈಸೂರಿನ ಶೈನಾ ತಂಗಮ್ಮ, ಮುನ್ನಡೆ ಆಟಗಾರ್ತಿಯಾಗಿ ಸಾಯಿ ತಂಡ ರಮ್ಯ, ಸರಣಿ ಆಟಗಾರ್ತಿಯಾಗಿ ಸಾಯಿ ತಂಡದ ಎಸ್.ಪಿ. ಲಿಖಿತ ವೈಯಕ್ತಿಕ ಬಹುಮಾನ ಪಡೆದುಕೊಂಡರು.
ಸೀನಿಯರ್ ವಿಭಾಗದ ಪಂದ್ಯಾವಳಿಯಲ್ಲಿ ಮೈಸೂರು ಡಿವೈಇಎಸ್ ತಂಡ ಮಡಿಕೇರಿ ಸಾಯಿ ತಂಡವನ್ನು 2-0 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. ಬೆಸ್ಟ್ ಗೋಲ್‍ಕೀಪರ್ ಆಗಿ ಮೈಸೂರಿನ ಶ್ರಾವ್ಯ, ಡಿಫೆಂಡರ್ ಆಗಿ ಮೈಸೂರಿನ ಸೌಮ್ಯಶ್ರೀ, ಮಿಡ್ ಫೀಲ್ಡರ್ ಆಗಿ ಸಾಯಿ ಮಡಿಕೇರಿಯ ಪವಿತ್ರ ಮುನ್ನಡೆ ಆಟಗಾರ್ತಿಯಾಗಿ ಸಾಯಿ ತಂಡ ವಿಧ್ಯಾ ಕೆ.ಎಸ್., ಸರಣಿ ಆಟಗಾರ್ತಿಯಾಗಿ ಮೈಸೂರಿನ ಎಸ್.ಪಿ. ಕೃತಿಕಾ ವೈಯಕ್ತಿಕ ಬಹುಮಾನ ಪಡೆದುಕೊಂಡರು.