ಮಡಿಕೇರಿ, ಡಿ. 23: ಬಿರುನಾಣಿಯ ಮರೆನಾಡು ಪ್ರೌಢ ಶಾಲೆಯ 57ನೇ ಶಾಲಾ ವಾರ್ಷಿ ಕೋತ್ಸವ ತಾ. 25ರಂದು ನಡೆಯಲಿದೆ. ವಾರ್ಷಿಕೋತ್ಸವದ ಅಧ್ಯಕ್ಷತೆಯನ್ನು ಕಾಳಿಮಾಡ ಕೆ. ಹಾಲಪ್ಪ ವಹಿಸಲಿದ್ದಾರೆ. ಬೊಟ್ಟಂಗಡ ಎಂ. ರಾಜು ಕ್ರೀಡಾಕೂಟವನ್ನು ಉದ್ಘಾಟಿ ಸಲಿದ್ದಾರೆ. ಸಭಾ ಕಾರ್ಯಕ್ರಮವನ್ನು ಕುಪ್ಪುಡಿರ ಕಾಳಪ್ಪ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಪೊಲೀಸ್ ಅಧಿಕಾರಿ ಬಿದ್ದಂಡ ಟೈಗರ್ ಅಶೋಕ್ ಕುಮಾರ್ ಆಗಮಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕಾಯಪಂಡ ಕೆ. ಪೆಮ್ಮಯ್ಯ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ. ಬಾಂಡ್ ಗಣಪತಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಅಪ್ಪಂಡೇರಂಡ ಭವ್ಯ, ವೀರಾಜಪೇಟೆ ತಾಲೂಕು ಪಂಚಾಯತ್ ಉಪಾಧ್ಯಕ್ಷ ನೆಲ್ಲೀರ ಯು. ಚಲನ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿ. ಬಿಳಗಿ, ಗ್ರಾ.ಪಂ. ಅಧ್ಯಕ್ಷ ಬಿಟ್ಟಿಯಂಡ ತಂಬಿ ನಾಣಯ್ಯ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನ ಕವಾಯತು, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.