ಗೋಣಿಕೊಪ್ಪಲು, ಡಿ.22: ಕೊಡಗು ಜಿಲ್ಲಾ ಪೊಲೀಸ್, ವೀರಾಜಪೇಟೆ ಉಪವಿಭಾಗ ಇವರ ವತಿಯಿಂದ ತಾ.23 ರಿಂದ (ಇಂದಿನಿಂದ) 28 ರವರೆಗೆ ಗೋಣಿಕೊಪ್ಪ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಾಗರಿಕರ ಬಂದೂಕು ತರಬೇತಿ ಶಿಬಿರ ನಡೆಯಲಿದೆ ಎಂದು ಗೋಣಿಕೊಪ್ಪ ಪೊಲೀಸ್ ವೃತ್ತ ನಿರೀಕ್ಷಕ ಎನ್.ಎನ್.ರಾಮರೆಡ್ಡಿ ತಿಳಿಸಿದ್ದಾರೆ.

ಉದ್ಘಾಟನಾ ಕಾರ್ಯಕ್ರಮವು ತಾ.23ರ ಮುಂಜಾನೆ 9.30ಕ್ಕೆ ಗೋಣಿಕೊಪ್ಪಲುವಿನ ಪ್ರಕಾಶ್ ಇಂಟರ್‍ನ್ಯಾಷನಲ್ ಹೊಟೇಲ್ ಸಭಾಂಗಣದಲ್ಲಿ ನಡೆಯಲಿದ್ದು, ವೀರಾಜಪೇಟೆ ಡಿವೈಎಸ್ಪಿ ಸಿ.ಟಿ.ಜಯಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಸ್ಥಳದಲ್ಲಿ ಆಸಕ್ತ ನಾಗರಿಕರು ನೊಂದಾಯಿತರಾಗಲು ಅವಕಾಶ ಕಲ್ಪಿಸಲಾಗಿದೆ. ಸಮಾರೋಪ ಸಮಾರಂಭ ತಾ.28 ರಂದು ನಡೆಯಲಿದ್ದು, ಕೊಡಗು ಪೊಲೀಸ್ ಅಧೀಕ್ಷಕರು ತರಬೇತಿ ಪಡೆದವರಿಗೆ ಇಲಾಖೆಯ ವತಿಯಿಂದ ಪ್ರಮಾಣ ಪತ್ರ ನೀಡಲಿದ್ದಾರೆ. ವೀರಾಜಪೇಟೆ ಉಪವಿಭಾಗದ ಪೊನ್ನಂಪೇಟೆ, ಕುಟ್ಟ, ಶ್ರೀಮಂಗಲ, ಗೋಣಿಕೊಪ್ಪ, ತಿತಿಮತಿ, ಬಾಳೆಲೆ ಭಾಗದ ನಾಗರಿಕರು ಇದರ ಪ್ರಯೋಜನ ಪಡೆಯುವಂತೆ ಸಿಪಿಐ ಎನ್.ಎನ್.ರಾಮರೆಡ್ಡಿ ತಿಳಿಸಿದ್ದಾರೆ.