ವೀರಾಜಪೇಟೆ, ಡಿ.22: ಕೊಡಗಿನಲ್ಲಿ ಚಿತ್ರಕಲೆಗೆ ಪ್ರೋತ್ಸಹ ಕಡಿಮೆಯಾಗಿದೆ. ಅದರೆ ಜಿಲ್ಲೆಯ ವಿವಿಧ ಮೂಲೆಗಳಲ್ಲಿ ಚಿತ್ರಕಲಾವಿದರು ಎಲೆಮರೆಯ ಕಾಯಿಯಂತೆ ತಮ್ಮ ಕಲಾಭಿರುಚಿಯನ್ನು ಜೀವಂತವಾಗಿರಿಸಿದ್ದಾರೆ ಎಂದು ನಗರದ ಹಿರಿಯ ವಕೀಲ ಎಸ್.ಆರ್.ಜಗದೀಶ್ ಅಭಿಮತ ವ್ಯಕ್ತಪಡಿಸಿದರು.

ವೀರಾಜಪೇಟೆ ಹಾವ್ಯಸಿ ಚಿತ್ರಕಲಾವಿದ ಸಾದಿಕ್ ಹಂಸ ಅವರ ಆರ್ಟ್ ಲಿಂಕ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ಅಶ್ರಯದಲ್ಲಿ 3ನೇ ವರ್ಷದ ಕಲಾ ಉತ್ಸವದಲ್ಲಿ ಮಾತನಾಡಿದ ಜಗದೀಶ್; ಚಿತ್ರಕಲೆಯು ಹುಟ್ಟಿನಿಂದ ಬರುವ ವಿಧ್ಯೆ. ಕಲೆಗೆ ಜಾತಿ ಮತ ಧರ್ಮದ ಅಡಚಡಣೆಗಳಿಲ್ಲ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿದರ್ೇೀಶಕ ದರ್ಶನ ಟಿ.ಕೆ. ಕಾರ್ಯಕ್ರಮದಲ್ಲಿ ಮಾತನಾಡಿ ಕಲೆ ಮತ್ತು ಸಂಸ್ಕøತಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಲಾಖೆಯಿಂದ ಎಲ್ಲಾ ಸಹಕಾರ ನೀಡಲಾಗುತ್ತದೆ ಎಂದರು.

ಕಾಫಿ ಬೆಳೆಗಾರರಾದ ಅಶಾ ಮಂದಣ್ಣ, ಕೊಡಗಿನ ಖ್ಯಾತ ಛಾಯಚಿತ್ರಗ್ರಾಹಕ ಕುಮಾರ್, ಪೂಮಾಲೆ ವಾರ ಪತ್ರಿಕೆಯ ಸಂಪಾದಕ ಅಜ್ಜನಿಕಂಡ ಮಹೇಶ್ ನಾಣಯ್ಯ ಮತ್ತು ಕಾಲೇಜಿನ ಪ್ರಾಂಶುಪಾಲ ಟಿ.ಕೆ ಬೋಪಯ್ಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಚಿತ್ರಕಲಾವಿದ ಬಾವ ಮಾಲ್ದಾರೆ ನಿರೂಪಣೆ, ಸ್ವಾಗತ ಮತ್ತು ವಂದನಾರ್ಪಣೆ ನೆರೆವೇರಿಸಿದರು.