ಕುಶಾಲನಗರ, ಡಿ. 23: ತಂಬಾಕು ನಿಯಂತ್ರಣ ಮಂಡಳಿ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಆರೋಗ್ಯ ನಿರೀಕ್ಷಕರು ಮತ್ತು ತಂಬಾಕು ನಿಯಂತ್ರಣ ಮಂಡಳಿಯ ಅಧಿಕಾರಿಗಳು ಪಟ್ಟಣದಲ್ಲಿ ಬೀಡಿ ಸಿಗರೇಟು ಹಾಗೂ ಗುಟ್ಕಾ ಮಾರಾಟ ಮಾಡುತ್ತಿದ್ದ ವರ್ತಕರಿಗೆ ದಂಡ ವಿಧಿಸಿದರು.

ಅಂಗಡಿಗಳಲ್ಲಿ ಕಾನೂನು ಬಾಹಿರವಾಗಿ ಬೀಡಿ, ಸಿಗರೇಟು, ಗುಟ್ಕಾ ಮತ್ತಿತರ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಮಾರಾಟಗಾರರಿಗೆ ದಂಡ ವಿಧಿಸಿ ತಂಬಾಕುಯುಕ್ತ ಪದಾರ್ಥಗಳನ್ನು ವಶ ಪಡಿಸಿಕೊಳ್ಳಲಾಯಿತು. ಇದರೊಂದಿಗೆ ಹೊಟೇಲ್‍ಗಳಿಗೆ ತೆರಳಿ ಶುಚಿತ್ವದ ಬಗ್ಗೆ ಪರಿಶೀಲಿಸಿ ಅವಧಿ ಮೀರಿದ ತಂಪು ಪಾನೀಯ ಮತ್ತಿತರ ಪದಾರ್ಥಗಳು ಕಂಡುಬಂದ ಹಿನ್ನಲೆಯಲ್ಲಿ ದಂಡ ವಿಧಿಸಿದರು.

ಈ ಸಂದರ್ಭ ಜಿಲ್ಲಾ ತಂಬಾಕು ನಿಯಂತ್ರಣ ಮಂಡಳಿಯ ಜಿಲ್ಲಾ ಕೋಶದ ಸಲಹೆಗಾರರಾದ ಕುಮಾರಿ ಪೂನಕರಾಣಿ, ಸಮಾಜ ಕಾರ್ಯಕರ್ತರಾದ ಮಂಜುನಾಥ್, ಆಹಾರ ನಿರೀಕ್ಷಕರಾದ ವಿಜೇಂದ್ರ ಕುಮಾರ್, ಚಂದ್ರೇಶ್, ಮುಖೇಶ್, ಪೆÇಲೀಸ್ ಮುಖ್ಯಪೇದೆ ಚಂದ್ರು ತಂಡದಲ್ಲಿ ಇದ್ದರು.