ಮಡಿಕೇರಿ, ಡಿ. 23 : ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಟ್ಟಡ ರಂಜಿ ಪೂಣಚ್ಚ ಅವರನ್ನು ಅರಸುನಗರ ಸಮುಯದಾಯ ಭವನದಲ್ಲಿ ಸನ್ಮಾನಿಸಿ, ಗೌರವಿಸ ಲಾಯಿತು. ಅಧ್ಯಕ್ಷ ರಂಜಿ ಪೂಣಚ್ಚ ಮಾತನಾಡಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಮೇಲೆ ಜವಾಬ್ದಾರಿ ಹೆಚ್ಚಿದೆ. ಎಲ್ಲಾ ವರ್ಗದ ಜನರನ್ನು ಸಮಾನವಾಗಿ ಕಾಣುವುದೇ ಕಾಂಗ್ರೆಸ್ ಪಕ್ಷದ ಸಿದ್ಧಾಂತವಾಗಿದೆ ಎಂದು ಹೇಳಿದರು. ಪ. ಪಂ. ಸದಸ್ಯರಾದ ಫಸಿಹಾ ತಬಸಮ್, ಅಗಸ್ಟಿನ್ ಬಿನ್ನಿ, ಮಹಮದ್ ರಾಫಿ, ಡಿ.ಪಿ ರಾಜೇಶ್, ಕಾಂಗ್ರೆಸ್ ಮುಖಂಡರಾದ ಶಭರಿಶ್, ಗಣೇಶ್ ಮೊದಲಿಯಾರ್, ರಾಜು ಉಪಸ್ಥಿತರಿದ್ದರು.