ಭಾಗಮಂಡಲ, ಡಿ. 23: ಇಲ್ಲಿನ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ ಮಂಡಲ ಪೂಜೆ ನೆರವೇರಿತು.
ಭಾಗಮಂಡಲದ ಅಯ್ಯಪ್ಪ ಬನದಲ್ಲಿ 40ನೇ ವರ್ಷದ ಅದ್ಧೂರಿಯ ಪೂಜೆ ಆರಂಭಗೊಂಡು ಬನದಿಂದ ಕರಿಕೆ ಜಂಕ್ಷನ್ವರೆÀಗೆ ಕೇರಳದ ಚಂಡೆಗೆ ನಲಿಯುತ್ತ ಅಯ್ಯಪ್ಪ ಮಾಲಾಧಾರಿಗಳು ಸಾಗಿದರು. ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಅನ್ನ ಸಂತರ್ಪಣೆ ನಡೆಯಿತು ಗುರು ಸ್ವಾಮಿಗಳಾದ ಸಿ.ಆರ್. ಜಯನ್ . ದಾಮೋದರ. ವಂಸತ್. ಕೆ.ಡಿ ಪ್ರದಿಸ್ ನೇತೃತ್ವದಲ್ಲಿ ಪೂಜಾ ಕಾರ್ಯಗಳು ಜರುಗಿತು.