ಕೂಡಿಗೆ, ಡಿ. 22: ಸೋಮವಾರಪೇಟೆ ಸಾರ್ವಜನಿಕ ಶಿಕ್ಷಣ ಇಲಾಖೆ ರೋಟರಿ ಸಂಸ್ಥೆ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಆಶ್ರಯದಲ್ಲಿ ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಉದ್ಘಾಟನೆಯನ್ನು ವಿಜ್ಞಾನ ವಿಭಾಗದ ಉಪನ್ಯಾಸಕ ಎಸ್. ಹೆಚ್. ಈಶ ನೆgವೇರಿಸಿದರು. ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್‍ನ ಸಂಯೋಜಕ ಸದಾನಂದ ಮಾತನಾಡಿದರು. ಶಾಲೆಯ ಪ್ರಾಂಶುಪಾಲ ಕೆ. ಪ್ರಕಾಶ್ ಮಾತನಾಡಿ, ವಿಜ್ಞಾನದ ಸಂಶೋಧ ನೆಗಳು ಉತ್ತಮ ಉದ್ದೇಶವನ್ನು ಹೊಂದಿರುತ್ತವೆ ಎಂದರು. ಅಧ್ಯಕ್ಷತೆ ಯನ್ನು ರೋಟರಿ ಸಂಸ್ಥೆಯ ಅಧ್ಯಕ್ಷ ಡಿ.ಪಿ. ರಮೇಶ್ ವಹಿಸಿದ್ದರು. ವಿದ್ಯಾರ್ಥಿಗಳು ಇಂತಹ ಅವಕಾಶ ಗಳನ್ನು ಬಳಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದರು. ಕುಶಾಲನಗರ ರೋಟರಿ ಸಂಸ್ಥೆಯ ಅಧ್ಯಕ್ಷ ಅಶೋಕ ಕುಮಾರ್, ಪ್ರಕಾಶ್, ಮಂಜುನಾಥ್, ಶಿಕ್ಷಕರಾದ ಚಿದಂಬರ್, ದಿನೇಶಾಚಾರಿ, ಮಂಜು, ಸಂತೋಷ್, ಕುಮಾರ್, ಹರಿಣಾಕ್ಷಿ, ಸುನಿತ ಹಾಜರಿದ್ದರು. ವಿದ್ಯಾರ್ಥಿ ಗಳಿಗೆ ರಸಪ್ರಶ್ನೆ, ಸ್ಥಳದಲ್ಲಿ ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆಯೊಂದಿಗೆ ಬಹುಮಾನ ವಿತರಿಸಲಾಯಿತು.