ಮಡಿಕೇರಿ, ಡಿ.21: ಹೂಡಿಕೆಗೆ ಹೆಚ್ಚಿನ ಬಡ್ಡಿ ಹಣ ನೀಡುವ ಅಥವಾ ದ್ವಿಗುಣಗೊಳಿಸುವ ಆಮಿಷದ ಮೂಲಕ ಸಾರ್ವಜನಿಕ ಠೇವಣಿದಾರರನ್ನು ವಂಚಿಸುವ ಅನಧಿಕೃತ ಕಂಪನಿಗಳ ಕುರಿತಂತೆ ರಾಜ್ಯ ಸರ್ಕಾರವು ಎಚ್ಚರದಿಂದ ಇರಲು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇಂತಹ ಪ್ರಕರಣಗಳು ಅಥವಾ ಆಮಿಷಗಳು ಕಂಡುಬಂದಲ್ಲಿ ಸಾರ್ವಜನಿಕರು ರಾಜ್ಯ ಮಟ್ಟದ ಸಮನ್ವಯ ಸಮಿತಿಗೆ ದೂರು ಸಲ್ಲಿಸಬಹುದಾಗಿದ್ದು hಣಣಠಿ://ತಿತಿತಿ.ರಿಚಿgಡಿuಣi.ಞಚಿಡಿ.ಟಿiಛಿ.iಟಿ ಮೇಲ್ ಮೂಲಕ ದೂರುಗಳನ್ನು ಸಲ್ಲಿಸಲು ತಿಳಿಸಲಾಗಿದೆ.

ಅಧಿಕ ಲಾಭದ ಆಸೆಗೆ ಹಣ ಕಳೆದುಕೊಳ್ಳುವವರ ವಿರುದ್ಧ ಹೂಡಿಕೆದಾರರಿಗೆ ಸಾರ್ವಜನಿಕರ ಜಾಗೃತಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕಿರುಚಿತ್ರಗಳನ್ನು ಚಲನಚಿತ್ರ ಮಂದಿರಗಳಲ್ಲಿ ಪ್ರದರ್ಶನದ ಆರಂಭ ಹಾಗೂ ಮಧ್ಯಂತರದಲ್ಲಿ ಪ್ರದರ್ಶಿಸಲು ಬಿಡುಗಡೆಗೊಳಿಸಿದ್ದು, ಇವುಗಳನ್ನು ಕರ್ನಾಟಕ ಚಲನಚಿತ್ರ ನಿಯಂತ್ರಣ ಕಾಯ್ದೆ 1964 ರ ಕಂಡಿಕೆ 12 ರ ಅಡಿ ಕಡ್ಡಾಯವಾಗಿ ಪ್ರದರ್ಶಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಎಸ್.ಎನ್ ಸಿದ್ದರಾಮಪ್ಪ ಸೂಚಿಸಿದ್ದಾರೆ.