*ಗೋಣಿಕೊಪ್ಪಲು, ಡಿ. 21: ಶ್ರೀರಾಮಸೇನೆ ಯುವಕ ಸಂಘದ ವತಿಯಿಂದ ನಡೆಯುವ ಜಿ.ಸಿ.ಎಫ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಕ್ಕೆ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಚಾಲನೆ ದೊರೆಯಿತು.

ಎರಡು ದಿನಗಳ ಕಾಲ ನಡೆಯುವ ಪಂದ್ಯಾಟಕ್ಕೆ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ನಿರ್ದೇಶಕ ಕಾಡ್ಯಮಾಡ ಗಿರೀಶ್ ಗಣಪತಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಕ್ರೀಡಾ ಮನೋಭಾವವನ್ನು ಹೊಂದು ವುದರೊಂದಿಗೆ ತಮ್ಮ ದೇಹದ ದೃಢತೆಯನ್ನು ಕಾಪಾಡಿಕೊಂಡು ಆರೋಗ್ಯ ಪೂರ್ಣ ಜೀವನ ನಡೆಸಲು ಸಾಧ್ಯವಿದೆ. ಒತ್ತಡಗಳಿಂದ ವಿಮುಕ್ತಿ ಹೊಂದಲು ಕ್ರೀಡಾ ಚಟುವಟಿಕೆ ಯಿಂದ ಸಾಧ್ಯ.

ಕೆಲವು ವರ್ಷಗಳ ಹಿಂದೆ ಕ್ರೀಡೆಗೆ ಹೆಚ್ಚು ಪೆÇ್ರೀತ್ಸಾಹ ದೊರೆಯುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಬಹಳಷ್ಟು ಸಂಘ ಸಂಸ್ಥೆಗಳು ನಿರಂತರವಾಗಿ ಕ್ರೀಡಾ ಚಟುವಟಿಕೆ ಗಳನ್ನು ನಡೆಸುತ್ತಿರುವುದರಿಂದ ಕ್ರೀಡಾ ಪ್ರತಿಭೆಗಳಿಗೆ ಮುಕ್ತ ಅವಕಾಶ ದೊರೆಯುತ್ತಿದೆ. ಇದರಿಂದ ಹೊಸ ಪ್ರತಿಭೆಗಳು ಹೊರಬರುತ್ತಿವೆ. ಇಂತಹ ವಾತಾವರಣ ನಿರ್ಮಾಣವಾದ ಕಾರಣವೇ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಕ್ಷೇತ್ರದ ಮೂಲಕ ಜಿಲ್ಲೆ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಉದ್ಘಾಟನಾ ಪಂದ್ಯವಾಗಿ ಎ 1 ಕ್ರಿಕೆಟರ್ಸ್ ಮತ್ತು ಪುಡ್ ಬ್ಯಾಂಕ್ ಕ್ರಿಕೆಟರ್ಸ್ ತಂಡದ ನಡುವೆ ಸೆಣಸಾಟ ನಡೆಯಿತು. ಭಗತ್ ಸಿಂಗ್ ಯುವಕ ಸಂಘ, ಆಲ್ ಸ್ಟಾರ್ ಕ್ರಿಕೆಟರ್ಸ್, ವಿರಾಟ್ ಕ್ರಿಕೆಟರ್ಸ್, ಶ್ರೀ ರಾಮಸೇನೆ ಯುವಕ ಸಂಘ, ಮೈಟಿ ಕ್ರಿಕೆಟರ್ಸ್, ಕೆ.ಎಸ್. ಕ್ರಿಕೆಟರ್ಸ್, ಕ್ಯಾಮೆರಾ ಕ್ರೀವ್ ಸೇರಿದಂತೆ ಸುಮಾರು 9 ತಂಡಗಳ ಲೀಗ್ ಮಾದರಿಯ ಪಂದ್ಯಾಟ ನಡೆಯಲಿದೆ.

ಶ್ರೀರಾಮಸೇನೆ ಯುವಕ ಸಂಘದ ಅಧ್ಯಕ್ಷ ಶ್ರೀನಿವಾಸ್, ಪಾಲಿಬೆಟ್ಟ ಇವರ ಅಧ್ಯಕ್ಷತೆಯಲ್ಲಿ ನಡೆದ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಚಿಯಕ್‍ಪೂವಂಡ ಸುಬ್ರಮಣಿ, ಹಾತೂರು ಗ್ರಾ.ಪಂ. ಸದಸ್ಯ ಕುಲ್ಲಚಂಡ ಚಿಣ್ಣಪ್ಪ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ ಗುಮ್ಮಟ್ಟೀರ ಕಿಲನ್ ಗಣಪತಿ, ಶಕ್ತಿ ದಿನಪತ್ರಿಕೆಯ ವರದಿಗಾರ ಎನ್.ಎನ್. ದಿನೇಶ್, ಸಮಾಜ ಸೇವಕರುಗಳಾದ ಕುಟ್ಟಂಡ ಮುದ್ದಪ್ಪ, ಉಂಬಾಯಿ, ಜಾಂಬವ ಯುವಸೇನೆ ಜಿಲ್ಲಾಧ್ಯಕ್ಷ ಸಿಂಗಿ ಸತೀಶ್ ಹಾಗೂ ಶ್ರೀರಾಮಸೇನೆ ಯುವಕ ಸಂಘದ ಪದಾಧಿಕಾರಿಗಳು, ಕ್ರೀಡಾಪಟುಗಳು ಹಾಜರಿದ್ದರು.