ಮಡಿಕೇರಿ, ಡಿ. 21: ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತೊಂಭತ್ತು ಮನೆಯಲ್ಲಿ ತಾ. 22ರಿಂದ 28ರ ವರೆಗೆ ನಡೆಯಲಿದೆ. 22 ರಂದು ಮಧ್ಯಾಹ್ನ ಹಾಕತ್ತೂರು ಗ್ರಾಮ ಪಂಚಾಯ್ತಿ ಅಧ್ಯಕೆÀ್ಷ ಮಂದ್ರೀರ ಶಾರದ ಧ್ವಜಾರೋಹಣ ಮಾಡಲಿದ್ದು, ಜಿಲ್ಲಾ ಜಾನಪದ ಪರಿಷತ್ತಿನ ನಿರ್ದೇಶಕ ಮುನೀರ್ ಅಹಮದ್ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ತಾಲೂಕು ಪಂಚಾಯ್ತಿ ಸದಸೆÀ್ಯ ಕುಮುದಾ ರಶ್ಮಿ, ಹಾಕತ್ತೂರಿನ ತ್ರಿನೇತ್ರ ಯುವಕ ಸಂಘದ ಅಧ್ಯಕ್ಷ ಸುಕುಮಾರ್ ಪಿ.ಪಿ, ಶಾಲೆಯ ಮುಖ್ಯ ಶಿಕ್ಷಕಿ ಜಾನಕಿ, ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಉಳುವಾರನ ಪಳಂಗಪ್ಪ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪ್ರಾಂಶುಪಾಲ ಪೆÇ್ರ. ಪಟ್ಟಡ ಪೂವಣ್ಣ ತಿಳಿಸಿದ್ದಾರೆ.