ಮಡಿಕೇರಿ, ಡಿ. 20 : ನಗರದಲ್ಲಿ ಮುಂಜಾಗ್ರತೆ ಕ್ರಮವಾಗಿ 144 ಸೆಕ್ಷನ್ ಕಾಯ್ದೆಯಡಿ ನಿಷೇಧಾಜ್ಞೆ ಜಾರಿಯಲ್ಲಿ ಇರುವುದರಿಂದ ರಾಜಸೀಟು ಉದ್ಯಾನವನದ ಕೆಳಬಾಗದಲ್ಲಿ ವೀಕ್ಷಣಾ ಸ್ಥಳದ ಹೊರಾಂಗಣ ಆಂಫಿಥಿಯೇಟರ್ನಲ್ಲಿ ತಾ. 21 ರಂದು (ಇಂದು) ನಡೆಯಬೇಕಿದ್ದ ಸಾಂಸ್ಕøತಿಕ ಕಾರ್ಯಕ್ರಮ ಮುಂದೂಡಲಾಗಿದ್ದು, ತಾ. 28 ರಂದು ಸಂಜೆ 4.30 ಗಂಟೆಗೆ ರಾಜಸೀಟು ಉದ್ಯಾನವನದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕ ಚಂದ್ರಶೇಖರ ತಿಳಿಸಿದ್ದಾರೆ.