ಮಡಿಕೇರಿ, ಡಿ. 20: ಸರ್ವದೈವತ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ನಡೆಯಿತು. ಈ ಸಂದÀರ್ಭ ಮುಖ್ಯ ಅತಿಥಿಗಳಾಗಿ ರಾಮಕೃಷ್ಣ ಶಾರದ ಆಶ್ರಮದ ಸ್ವಾಮೀಜಿ ಪರಮಪೂಜ್ಯ ಪರಹಿತ ನಂದಾಜಿ ಅವರು ಆಶೀರ್ವಚನ ವೀಡುವದರೊಂದಿಗೆ ಭಾರತ ಸರ್ಕಾರದ ನೀತಿ ಆಯೋಗದ ಸಹಭಾಗಿತ್ವದಲ್ಲಿ ನೂತನವಾಗಿ ಪ್ರಾರಂಭವಾದ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟಿಸಿದರು.
ಈ ಸಂದÀರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಶೈಲಾಬೆಳಗಿ ಅವರು ಮಾತನಾಡುತ್ತ, ಶಾಲೆಯು ನಿರಂತರವಾಗಿ ಪ್ರಗತಿಯ ಹಾದಿಯಲ್ಲಿದ್ದು, ವೈಜ್ಞಾನಿಕವಾಗಿ ಬೆಳೆಯಲು ಕೇಂದ್ರ ಸರಕಾರದಿಂದ ದೊರೆತಂತಹ ಅಟಲ್ ಟಿಂಕರಿಂಗ್ ಲ್ಯಾಬ್‍ನ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಂಡು ಮುಂದಿನ ದಿನಗಳಲ್ಲಿ ಉನ್ನತ ವಿಜ್ಞಾನಿಗಳಾಗಿ ಹೂರಹೊಮ್ಮ ಬೇಕೆಂದು ತಿಳಿಸಿದ್ದರು.
ಕೂಡಿಗೆ ಡಯಟ್‍ನ ಹಿರಿಯ ಉಪನ್ಯಾಸಕ ಸುರೇಶ್ ಕೆ.ವಿ. ಮಾತಾನಾಡಿ, ಮನೆಯೇ ಮಕ್ಕಳ ಮೊದಲ ಸಂಸ್ಕಾರ ಕೇಂದ್ರವಾಗಬೇಕು. ಪೋಷಕರೇ ಇದರ ನಾವೀಕರಾಗಿ ಒಳ್ಳೆಯ ಸಂಸ್ಕಾರದ ಮಕ್ಕಳನ್ನು ಸಮಾಜಕ್ಕೆ ನೀಡುವ ಜವಾಬ್ದಾರಿ ಯನ್ನು ವಹಿಸಿಕೊಳ್ಳಬೇಕೆಂದು ಪೋಷಕರಿಗೆ ಕರೆ ನೀಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ ಮೊಣ್ಣಪ್ಪ ಮಾತನಾಡಿ, ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಪ್ರಗತಿಯ ಎರಡು ಕಣ್ಣುಗಳಿದ್ದಂತೆ. ಮಕ್ಕಳಿಗೆ ಉತ್ತಮ ಪ್ರೋತ್ಸಾಹ ದೊರೆತಾಗ ಜೀವನದಲ್ಲಿ ಯಶಸ್ಸನ್ನು ಕಾಣಲ್ಲು ಸಾಧ್ಯ ಎಂದು ನುಡಿದರು. ವೇದಿಕೆಯಲ್ಲಿ ಶಾಲಾ ಆಡಳಿತಾಧಿಕಾರಿ ಅದಿತ್ಯ ಅಯ್ಯಪ, ಪ್ರಾಂಶುಪಾಲೆ ಲಲಿತ ಮೊಣ್ಣಪ್ಪ ಹಾಗೂ ಮುಖ್ಯೋಪಾಧ್ಯಾಯ ಪ್ರದೀಪ್, ಗೋಣಿಕೊಪ್ಪಲು ಕ್ಲಸ್ಟರ್ ಸಿ.ಆರ್.ಪಿ. ಜೋತಿಶ್ರೀ ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ರಾಧಮಣಿ ತಂಡ ನೆರವೇರಿಸಿತು. ಸ್ವಾಗತವನ್ನು ಶೀಲಾ ಬೋಪಣ್ಣ, ವಂದನೆಯನ್ನು ಉಪನ್ಯಾಸಕ ಜಗನ್ನಾಥ್ ನೆರೆವೇರಿಸಿದರು.