ನಾಪೆÉÇೀಕ್ಲು, ಡಿ. 20: ಕೊಡವ ಸಂಸ್ಕ್ರತಿ, ಆಚಾರ ವಿಚಾರ, ಕಲೆಗಳು ನಶಿಸುವ ಹಂತ ತಲುಪಿದ್ದು ಇದನ್ನು ಮುಂದುವರೆಸುವ ನಿಟ್ಟಿನಲ್ಲಿ ನಾಪೆÉÇೀಕ್ಲು ಕೊಡವ ಸಮಾಜವು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ವಿಭಾಗದ 27 ಗ್ರಾಮಗಳ ಅಂತರ್ ಗ್ರಾಮ ಆಟ್-ಪಾಟ್ ಪೈಪೋಟಿ ಕಾರ್ಯಕ್ರಮವನ್ನು ತಾ. 24 ಮತ್ತು 25 ರಂದು ಕೊಡವ ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದೆ ಸಮಾಜ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎಲ್ಲಾ ಗ್ರಾಮಗಳಲ್ಲಿ ಹುತ್ತರಿ ಕೋಲಾಟ ನಡೆಸದ ಮಂದ್‍ನಲ್ಲಿ ಮುಂದೆ ಹುತ್ತರಿ ಕೋಲಾಟ ನಡೆಸಲು ಪ್ರೇರೇಪಣೆ ನೀಡಲಾಗುವುದು ಎಂದರು. ಆಟ್-ಪಾಟ್ ಪಡಿಪು, ಬೊಳ್‍ಕಾಟ್, ಕೋಲಾಟ, ಉಮ್ಮತ್ತಾಟ್, ಪರೆಯಕಳಿ, ಕಪ್ಪೆಯಾಟ್, ಪಿಲಿಯಾಟ್, ಗಾಯನ ಗೀತೆಗಳು ಮತ್ತು ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಆಧಾರಿತ ಗೀತೆಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು. ಈ ಕಾರ್ಯಕ್ರಮ ಪ್ರಪ್ರಥಮವಾಗಿದ್ದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಜನಾಂಗದ ಯುವ ಪ್ರತಿಭೆಗಳನ್ನು ಹಾಗೂ 10ನೇ ತರಗತಿಯಲ್ಲಿ ಶೇ. 90%, ಪಿ.ಯು.ಸಿ.ಯಲ್ಲಿ ಶೇ. 85%. ಮತ್ತಿತರ ಡಿಗ್ರಿ ತರಗತಿಗಳಲ್ಲಿ ಶೇ. 75% ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದ ಅವರು; ನಾಡಿನಲ್ಲಿ ಉನ್ನತ ಸೇವೆ ಸಲ್ಲಿಸಿದ ಬೊಟ್ಟೋಳಂಡ ಕಾಶಿ ಅಚ್ಚಯ್ಯ, ಡಿವೈಎಸ್ಪಿ ಅಂಜಪರುವಂಡ ಕವಿತ ಕಾರ್ಯಪ್ಪ, ಮತ್ತು ರಾಷ್ಟ್ರಮಟ್ಟದಲ್ಲಿ ಕೀರ್ತಿಗಳಿಸಿದ ತೆಕ್ಕಡ ಭವಾನಿ ಇವರುಗಳನ್ನು ಸನ್ಮಾನಿಸಲು ತೀರ್ಮಾನಿಸಲಾಗಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಸಮಾಜದ ಉಪಾಧ್ಯಕ್ಷ ಮಾಳೆಯಂಡ ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಸಹ ಕಾರ್ಯದರ್ಶಿ ಮಾಚೇಟಿರ ಕುಶು ಕುಶಾಲಪ್ಪ, ಖಜಾಂಚಿ ಅಪ್ಪಾರಂಡ ಸುಧೀರ್ ಅಯ್ಯಪ್ಪ. ನಿರ್ದೇಶಕ ಕುಂಡ್ಯೋಳಂಡ ವಿಸೂ ಪೂವಯ್ಯ, ವ್ಯವಸ್ಥಾಪಕ ಶಿವಚಾಳಿಯಂಡ ಜಗದೀಶ್ ಇದ್ದರು.