ಗೋಣಿಕೊಪ್ಪಲು, ಡಿ. 20: ಇಲ್ಲಿಗೆ ಸಮೀಪದ ಕಳತ್ಮಾಡು ಗ್ರಾಮದ ಗೊಟ್ಟಡದಲ್ಲಿ ಹುತ್ತರಿ ಊರೊರ್ಮೆ ಜರುಗಿತು. ವಾರ್ಷಿಕ ವರದಿ, ಸಭೆಯ ನಂತರ ಸಾಲ ಸೌಲಭ್ಯವನ್ನು ಗ್ರಾಮಸ್ಥರಿಗೆ ವಿತರಿಸಲಾಯಿತು. ಸಾಮೂಹಿಕ ಭೋಜನದೊಂದಿಗೆ ಊರೊರ್ಮೆ ಮುಕ್ತಾಯಗೊಂಡಿತು.
ಹೊಳೆಕೆರೆ ಉತ್ತಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಕಾರ್ತಿಕ್, ಹಿರಿಯರಾದ ಗಿರಿಯಪ್ಪ, ನಂಜುಂಡಕುಮಾರ್, ಚಿದು, ವಿ.ಎಂ. ಬಾಲಕೃಷ್ಣ, ಯತೀಶ್, ಪೂಣಚ್ಚ ಮುಂತಾದವರು ಪಾಲ್ಗೊಂಡಿದ್ದರು.